ಮೂಕ ಪ್ರಾಣಿಗಳ ಮೇಲಿನ ಪ್ರೀತಿಯಿಂದ ಅನೇಕರು ಸಾಕು ನಾಯಿಗಳನ್ನು ಮನೆಯಲ್ಲಿ ಸಾಕುತ್ತಾರೆ. ವಿವಿಧ ತಳಿಯ ನಾಯಿಗಳನ್ನು ದುಬಾರಿ ವೆಚ್ಚದಲ್ಲಿ ಖರೀದಿಸಿ ಮನೆಗಳಲ್ಲಿ ಸಾಕುವವರನ್ನು ನಾವು ನೋಡಿದ್ದೇವೆ. ಇದನ್ನು ಮಾಡುವುದು ತಪ್ಪಲ್ಲ ಆದರೆ ಸಮಾಜದಲ್ಲಿ ಇವುಗಳಿಂದ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು ನಾಯಿ ಮಾಲೀಕರ ಜವಾಬ್ದಾರಿಯಾಗಿದೆ. (Photo Credit:Face Book)
ನಾಯಿ ಸಾಕುವವರಿಗೆ ಮೂಕಪ್ರಾಣಿಗಳ ಮೇಲೆ ಪ್ರೀತಿ ಇದ್ದರೆ ಸಾಕಾಗುವುದಿಲ್ಲ, ಅವುಗಳನ್ನು ನೋಡಿಕೊಳ್ಳುವು, ಅವುಗಳಿಂದ ಯಾವುದೇ ಹಾನಿಯಾಗದಿರುವಂತೆ ಜಾಗೃತಿವಹಿಸುವುದು ಅವರ ಮಾಲೀಕರ ಕರ್ತವ್ಯ ಎಂದು ನೋಯ್ಡಾ ಅಧಿಕಾರಿಗಳು ತಿಳಿಸಿದ್ದಾರೆ. ಅವರು ಇತ್ತೀಚೆಗೆ ಹೊಸದಾಗಿ ಪರಿಚಯಿಸಲಾದ ಮಾರ್ಗಸೂಚಿಗಳನ್ನು ಈ ನಿಯಮವನ್ನು ಜಾರಿಗೆ ತಂದಿದ್ದಾರೆ. (Photo Credit:Face Book)
ನೋಯ್ಡಾದಲ್ಲಿ ಸಾಕು ನಾಯಿಗಳನ್ನು ಹೊಂದಿರುವ ಎಲ್ಲರೂ ಮುಂದಿನ ವರ್ಷದ ಜನವರಿ 31 ರೊಳಗೆ ಸಾಕುಪ್ರಾಣಿಗಳ ನೋಂದಣಿಯನ್ನು ಪೂರ್ಣಗೊಳಿಸಬೇಕು ಎಂದು ನೋಯ್ಡಾ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಸಾಕು ಪ್ರಾಣಿಗಳಿಗೆ ಆ್ಯಂಟಿಬಯೋಟಿಕ್ ಲಸಿಕೆ ಹಾಕಬೇಕು ಎಂದು ನೋಯ್ಡಾ ಅಧಿಕಾರಿಗಳು ತಿಳಿಸಿದ್ದಾರೆ. ಸಾಕುಪ್ರಾಣಿಗಳಿಗಾಗಿ ಮನೆಯಲ್ಲಿ ಮಾಡುವ ವ್ಯವಸ್ಥೆಗಳು ಸಹ ನಿಯಮಗಳಿಗೆ ಅನುಸಾರವಾಗಿರಬೇಕು. (ಫೋಟೋ ಕೃಪೆ: Facebook)