AIIMS Hospital: ತಾಯಿ ಗರ್ಭದಲ್ಲಿರುವ ಶಿಶುವಿಗೆ ಅಪಾಯಕಾರಿ ಆಪರೇಷನ್ ಮಾಡಿ ಯಶಸ್ವಿಯಾದ ಏಮ್ಸ್ ವೈದ್ಯರು!
ನವದೆಹಲಿ: ತಾಯಿಯ ಗರ್ಭದಲ್ಲಿರುವ ಶಿಶುವಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ ಅಪರೂಪದ ಘಟನೆ ದೆಹಲಿಯಲ್ಲಿ ನಡೆದಿದೆ. ಕೇವಲ 90 ಸೆಕೆಂಡ್‌ಗಳಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಪರೇಷನ್ ನಡೆಸಿದ ನಂತರ ಗರ್ಭಿಣಿ ಮಹಿಳೆ ಮತ್ತು ಗರ್ಭದಲ್ಲಿರುವ ಮಗು ಆರೋಗ್ಯವಾಗಿ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಹೌದು. ಇಂತಹ ಈ ಅಪರೂಪದ ಘಟನೆ ನಡೆದಿದ್ದು ರಾಷ್ಟ್ರ ರಾಜಧಾನಿಯಲ್ಲಿ. ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರ ಹೊಟ್ಟೆಯಲ್ಲಿರುವ ಶಿಶುವಿನ ಆರೋಗ್ಯಲ್ಲಿ ಏರುಪೇರಾಗಿದ್ದನ್ನು ವೈದ್ಯರು ಗಮನಿಸಿದ್ದರು. ತಪಾಸಣೆ ನಡೆಸಿದ ನಂತರ ಶಿಶುವಿಗೆ ಹೃದಯದ ತೊಂದರೆ ಇರೋದು ಗಮನಕ್ಕೆ ಬಂದಿದೆ.
2/ 7
ಶಸ್ತ್ರಚಿಕಿತ್ಸೆ ನಡೆಸದ ಹೊರತು ಮಗುವಿನ ಆರೋಗ್ಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದನ್ನು ಅರಿತ ಏಮ್ಸ್‌ನ ವೈದ್ಯರು ಈ ಅಪಾಯಕಾರಿಯಾಗಿರುವ ಶಸ್ತ್ರಚಿಕಿತ್ಸೆಯನ್ನು ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಗರ್ಭಿಣಿಯ ಕುಟುಂಬಸ್ಥರಿಗೂ ವಿಷಯ ತಿಳಿಸಿ ಆಪರೇಷನ್ ನಡೆಸಲು ಮುಂದಾಗಿದ್ದಾರೆ.
3/ 7
ವೈದ್ಯರು ತಾಯಿಯ ಹೊಟ್ಟೆಯ ಮೂಲಕ ಮಗುವಿನ ಹೃದಯಕ್ಕೆ ಸೂಜಿಯನ್ನು ಸೇರಿಸಿದರು. ನಂತರ, ಬಲೂನ್ ಕ್ಯಾತಿಟರ್ ಬಳಸಿ ಅಡಚಣೆಯಾದ ಕವಾಟವನ್ನು ತೆರೆದು ರಕ್ತದ ಹರಿವಿಗೆ ದಾರಿ ಮಾಡಿಕೊಟ್ಟರು.
4/ 7
ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ಹೃದಯದ ಕವಾಟಗಳಲ್ಲಿ ಉಂಟಾಗುವ ಅಡಚಣೆಯನ್ನು ತೆಗೆದು ಹಾಕಲು ಬಲೂನ್ ಹಿಗ್ಗಿಸುವ ಪ್ರಕ್ರಿಯೆಯ ಮೂಲಕ ಶಿಶುವಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಆಪರೇಷನ್ ಯಶಸ್ವಿಯಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.
5/ 7
ಆಪರೇಷನ್ ನಡೆಸಿದ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏಮ್ಸ್ ವೈದ್ಯರು, ಇಂತಹ ಪ್ರಕ್ರಿಯೆಯು ಭ್ರೂಣದ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತದೆ. ಜೊತೆಗೆ ಅತ್ಯಂತ ಎಚ್ಚರಿಕೆಯಿಂದ ಮಾಡಬೇಕು ಎಂದು ಹೇಳಿದ್ದಾರೆ.
6/ 7
ಸಾಮಾನ್ಯವಾಗಿ ಎಲ್ಲಾ ಕಾರ್ಯವಿಧಾನಗಳನ್ನು ಆಂಜಿಯೋಗ್ರಫಿ ಅಡಿಯಲ್ಲಿ ಮಾಡಲಾಗುತ್ತದೆ. ಆದರೆ ಇಂತಹ ಅಪರೂಪದ ಸಂದರ್ಭದಲ್ಲಿ ಅದನ್ನು ಆಂಜಿಯೋಗ್ರಫಿ ಮೂಲಕ ಮಾಡಲಾಗುವುದಿಲ್ಲ.
7/ 7
ಗರ್ಭದಲ್ಲಿ ಇರುವ ಶಿಶುವಿಗೆ ಯಶಸ್ವಿ ಶಸ್ತ್ರಕ್ರಿಯೆ ನಡೆಸಿದ ವೈದ್ಯರ ಕಾರ್ಯಕ್ಕೆ ಸದ್ಯ ವೈದ್ಯಕೀಯ ವಲಯದಿಂದ ಶ್ಲಾಘನೆ ವ್ಯಕ್ತವಾಗಿದ್ದು, ಏಮ್ಸ್ ಆಸ್ಪತ್ರೆಯ ವೈದ್ಯರಿಗೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.
First published:
17