ಗುರುಗ್ರಾಮ್: ಗ್ರಾಹಕರಿಗೆ ನೀಡಬೇಕಿದ್ದ 10 ಐಫೋನ್‌ಗಳನ್ನು ಕದ್ದ ಡೆಲಿವರಿ ಎಕ್ಸಿಕ್ಯೂಟಿವ್ ಒಬ್ಬ ಅದಕ್ಕೆ ಡಮ್ಮಿ ಐಫೋನ್‌ಗಳನ್ನು ಹಾಕಿ ಗ್ರಾಹಕರಿಗೆ ವಂಚಿಸಲು ಯತ್ನಿಸಿದ ಘಟನೆ ಹರ್ಯಾಣದಲ್ಲಿ ನಡೆದಿದೆ.
ಹರ್ಯಾಣ ರಾಜ್ಯದ ಗುರುಗ್ರಾಮ್ ನಗರದಲ್ಲಿ ಈ ಕೃತ್ಯ ನಡೆದಿದ್ದು, ದುಬಾರಿ ಬೆಲೆಯ ಐಫೋನ್‌ಗಳನ್ನು ಕದ್ದಿರುವ ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್ ಎಂಬಾತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
2/ 7
ಇ-ಕಾಮರ್ಸ್ ಕಂಪನಿಯೊಂದು ಗ್ರಾಹಕರಿಗೆ ತಲುಪಿಸಬೇಕಿದ್ದ 10 ಐಫೋನ್‌ಗಳು ಮತ್ತು ಏರ್‌ಪಾಡ್‌ಗಳನ್ನು ಡೆಲಿವರಿ ಎಕ್ಸಿಕ್ಯೂಟಿವ್ ಆಗಿರುವ ಲಲಿತ್ ಅವರ ವಿಳಾಸಕ್ಕೆ ಕಳುಹಿಸಿದೆ.
3/ 7
ಅಮೆಜಾನ್‌ನ ಪಾರ್ಸೆಲ್ ಅನ್ನು ತಲುಪಿಸುವ ಮ್ಯಾಟ್ರಿಕ್ಸ್ ಫೈನಾನ್ಸ್ ಸೊಲ್ಯೂಷನ್‌ನ ಸ್ಟೇಷನ್ ಇನ್‌ಚಾರ್ಜ್ ರವಿ ಅವರು ಲಲಿತ್‌ಗೆ ಐಫೋನ್‌ಗಳನ್ನು ಕಳುಹಿಸಿದ್ದು, ಆದರೆ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
4/ 7
ಆದರೆ ಲಲಿತ್ ಆ ಐಫೋನ್‌ಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುವ ಬದಲು, ಐಫೋನ್‌ಗಳನ್ನು ಕದ್ದು ಅದರೊಳಗೆ ಡಮ್ಮಿ ಐಫೋನ್‌ಗಳನ್ನು ಇಟ್ಟು ಗ್ರಾಹಕರಿಗೆ ವಂಚಿಸಲು ಮುಂದಾಗಿದ್ದಾನೆ.
5/ 7
ಈ ಮಧ್ಯೆ ಪಾರ್ಸೆಲ್ ಸ್ವೀಕರಿಸಿದ ಗ್ರಾಹಕರು ಡಮ್ಮಿ ಐಫೋನ್ ಕಂಡು ಅಚ್ಚರಿಗೊಳಗಾಗಿದ್ದು, ಕೂಡಲೇ ತಮ್ಮ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿ, ಪ್ರಾಡಕ್ಟ್‌ಅನ್ನು ವಾಪಸ್ ಕಳುಹಿಸಿದ್ದಾರೆ.
6/ 7
ಪುನಃ ಪ್ರಾಡಕ್ಟ್ ವಾಪಸ್ ಬಂದಾಗ ಅದನ್ನು ಸರಿಯಾಗಿ ಪರಿಶೀಲಿಸಿದಾಗ ಪ್ಯಾಕೇಜಿಂಗ್‌ನಲ್ಲಿ ಕೆಲವು ಬದಲಾವಣೆಗಳು ನಡೆದಿರೋದು ಕಂಡು ಬಂದಿದ್ದು, ತೆರೆದು ನೋಡಿದಾಗ ಐಫೋನ್ ಇರಲಿಲ್ಲ.
7/ 7
ಹೀಗಾಗಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿರುವ ಲಲಿತ್ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ), 408 (ನೌಕರನಿಂದ ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ ಬಿಲಾಸ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.