Shocking News: ನಡುರಸ್ತೆಯಲ್ಲಿ ಯುವತಿಗೆ ಥಳಿಸಿ ಕಾರ್‌ಗೆ ತಳ್ಳಿದ ಕಿರಾತಕ! ನೋಡಿದ್ರೂ ನೆರವಿಗೆ ಬಾರದ ಜನ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮಹಿಳೆಯರಿಗೆ ಸೇಫ್ ಹೌದೋ ಅಲ್ವೋ ಪ್ರಶ್ನೆ ಆಗಾಗ ಕೇಳಿಬರುತ್ತಿರುತ್ತೆ. ಅಲ್ಲಿ ನಡೆಯುವಂತಹ ಒಂದೊಂದು ಕ್ರೈಂಗಳು ಕೂಡ ಮತ್ತೆ ಮತ್ತೆ ಇಂತಹ ಪ್ರಶ್ನೆಗಳು ಮೇಲೇಳುವಂತೆ ಮಾಡುತ್ತಿರುತ್ತೆ. ಇದೀಗ ಮತ್ತೊಮ್ಮೆ ದೆಹಲಿ ಮಹಿಳೆಯರಿಗೆ ಸುರಕ್ಷಿತ ತಾಣ ಹೌದೋ ಅಲ್ವೋ ಅನ್ನುವಂತಹ ಪ್ರಶ್ನೆ ಚಾಲ್ತಿಗೆ ಬಂದಿದೆ.

First published:

  • 17

    Shocking News: ನಡುರಸ್ತೆಯಲ್ಲಿ ಯುವತಿಗೆ ಥಳಿಸಿ ಕಾರ್‌ಗೆ ತಳ್ಳಿದ ಕಿರಾತಕ! ನೋಡಿದ್ರೂ ನೆರವಿಗೆ ಬಾರದ ಜನ!

    ಹೌದು.. ದೆಹಲಿಯಲ್ಲಿ ನಡೆದ ಈ ಒಂದು ಭಯಾನಕ ಘಟನೆ ರಾಷ್ಟ್ರ ರಾಜಧಾನಿ ಮಹಿಳೆಯರಿಗೆ ಸೂಕ್ತ ಸ್ಥಳ ಅಲ್ವೋ ಅನ್ನುವಂತಹ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಜನನಿಬಿಡ ಪ್ರದೇಶದಲ್ಲಿಯೇ ನಡೆದ ಈ ಕೃತ್ಯ ಮಹಿಳೆಯರಲ್ಲಿ ಭೀತಿ ಹುಟ್ಟಿಸಿದೆ.

    MORE
    GALLERIES

  • 27

    Shocking News: ನಡುರಸ್ತೆಯಲ್ಲಿ ಯುವತಿಗೆ ಥಳಿಸಿ ಕಾರ್‌ಗೆ ತಳ್ಳಿದ ಕಿರಾತಕ! ನೋಡಿದ್ರೂ ನೆರವಿಗೆ ಬಾರದ ಜನ!

    ನಡು ರಸ್ತೆಯಲ್ಲಿ ವಾಹನ ದಟ್ಟಣೆಯ ನಡುವೆಯೇ ಕಿರಾತಕನೊಬ್ಬ ಯುವತಿಯನ್ನು ರಸ್ತೆಯಲ್ಲೇ ಹಿಗ್ಗಾ ಮುಗ್ಗಾ ಥಳಿಸಿ ಬಲವಂತವಾಗಿ ಕ್ಯಾಬ್‌ಗೆ ಹತ್ತಿಸಿಕೊಂಡು ಹೋಗಿರುವ ಅಮಾನವೀಯ ಘಟನೆ ನಡೆದಿದೆ.

    MORE
    GALLERIES

  • 37

    Shocking News: ನಡುರಸ್ತೆಯಲ್ಲಿ ಯುವತಿಗೆ ಥಳಿಸಿ ಕಾರ್‌ಗೆ ತಳ್ಳಿದ ಕಿರಾತಕ! ನೋಡಿದ್ರೂ ನೆರವಿಗೆ ಬಾರದ ಜನ!

    ದೆಹಲಿಯ ಮಂಗೋಲ್‌ಪುರಿ ಪ್ರದೇಶದಲ್ಲಿ ನಡೆದ ಈ ಕೃತ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಇದರಲ್ಲಿ ಯುವಕರು ಯುವತಿಗೆ ಥಳಿಸಿ ನಂತರ ಬಲವಂತವಾಗಿ ಕ್ಯಾಬ್‌ನಲ್ಲಿ ಕೂರುವಂತೆ ಮಾಡಿದ್ದಾರೆ.

    MORE
    GALLERIES

  • 47

    Shocking News: ನಡುರಸ್ತೆಯಲ್ಲಿ ಯುವತಿಗೆ ಥಳಿಸಿ ಕಾರ್‌ಗೆ ತಳ್ಳಿದ ಕಿರಾತಕ! ನೋಡಿದ್ರೂ ನೆರವಿಗೆ ಬಾರದ ಜನ!

    ಈ ದೃಶ್ಯ ಶನಿವಾರ ತಡರಾತ್ರಿ 11:30 ರ ಸುಮಾರಿಗೆ ನಡೆದಿದೆ ಎನ್ನಲಾಗಿದ್ದು, ವಿಡಿಯೋದಲ್ಲಿ ಕಾಣುತ್ತಿರುವ ಇಬ್ಬರು ಯುವಕರು ಯುವತಿಯನ್ನು ಎಲ್ಲಿಗೆ ಕರೆದುಕೊಂಡು ಹೋದರು ಎಂದು ಇನ್ನೂ ತಿಳಿದು ಬಂದಿಲ್ಲ.

    MORE
    GALLERIES

  • 57

    Shocking News: ನಡುರಸ್ತೆಯಲ್ಲಿ ಯುವತಿಗೆ ಥಳಿಸಿ ಕಾರ್‌ಗೆ ತಳ್ಳಿದ ಕಿರಾತಕ! ನೋಡಿದ್ರೂ ನೆರವಿಗೆ ಬಾರದ ಜನ!

    ಯುವತಿಗೆ ಹಲವು ಬಾರಿ ಥಳಿಸಿದ ಬಳಿಕ ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡಿದ್ದಾನೆ. ಮತ್ತೊಬ್ಬ ಯುವಕ ಕೂಡ ಆ ಕಾರಿನಲ್ಲಿ ತೆರಳಿದ್ದಾನೆ. ಕ್ಯಾಬ್ ಚಾಲಕ ಕೂಡ ದಾಳಿ ತಡೆಯಲು ಪ್ರಯತ್ನಿಸದೆ ಕೃತ್ಯಕ್ಕೆ ಸಹಕರಿಸಿರುವುದು ಕಂಡು ಬಂದಿದೆ.

    MORE
    GALLERIES

  • 67

    Shocking News: ನಡುರಸ್ತೆಯಲ್ಲಿ ಯುವತಿಗೆ ಥಳಿಸಿ ಕಾರ್‌ಗೆ ತಳ್ಳಿದ ಕಿರಾತಕ! ನೋಡಿದ್ರೂ ನೆರವಿಗೆ ಬಾರದ ಜನ!

    ಸದ್ಯ ಈ ವಿಡಿಯೋವನ್ನು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿದ್ದು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.

    MORE
    GALLERIES

  • 77

    Shocking News: ನಡುರಸ್ತೆಯಲ್ಲಿ ಯುವತಿಗೆ ಥಳಿಸಿ ಕಾರ್‌ಗೆ ತಳ್ಳಿದ ಕಿರಾತಕ! ನೋಡಿದ್ರೂ ನೆರವಿಗೆ ಬಾರದ ಜನ!

    ವಿಪರ್ಯಾಸ ಅಂದ್ರೆ, ಯುವತಿ ಮೇಲೆ ಹಲ್ಲೆ ಮಾಡುತ್ತಿದ್ದರೂ ಯುವಕನ ಜತೆಗಿದ್ದ ಮತ್ತೊಬ್ಬ ವ್ಯಕ್ತಿ ಸೇರಿದಂತೆ ಅಲ್ಲಿದ್ದ ಯಾರೂ ಕೂಡ ಆಕೆಯ ನೆರವಿಗೆ ಬರುವ ಪ್ರಯತ್ನ ಮಾಡಲಿಲ್ಲ. ರಸ್ತೆಯಲ್ಲಿದ್ದ ಇತರೆ ವಾಹನ ಸವಾರರು ಕೃತ್ಯವನ್ನ ಪ್ರಶ್ನೆ ಮಾಡಿಲ್ಲ.

    MORE
    GALLERIES