ಭಾರತದಲ್ಲಿ ಪ್ರತಿದಿನವೂ ಸೈಬರ್ ವಂಚನೆಯ ಹೊಸ ರೂಪಗಳು ದಾಖಲಾಗುತ್ತಿವೆ. ಉದ್ಯೋಗ, ಆಫರ್ಗಳು ಮತ್ತು ಬ್ಯಾಂಕ್ ಸೇವೆಗಳ ಹೆಸರಿನಲ್ಲಿ ಸಂತ್ರಸ್ತರ ಖಾತೆಯಲ್ಲಿರುವ ಹಣವನ್ನು ದೋಚುತ್ತಿದ್ದಾರೆ. ಇತ್ತೀಚೆಗೆ ದೆಹಲಿಯ ವ್ಯಕ್ತಿಯೊಬ್ಬರು ಫೇಕ್ ಲಿಂಕ್ ಕ್ಲಿಕ್ ಮಾಡಿ 9 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸೈಬರ್ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ವರ್ಕ್ ಫ್ರಮ್ ಹೋಮ್ ಉದ್ಯೋಗದ ಆಫರ್ ಹೆಸರಿನಲ್ಲಿ ಮೋಸ ಮಾಡಿದ್ದಾರೆ.
ಎಎನ್‌ಐ ವರದಿ ಪ್ರಕಾರ, ದೆಹಲಿಯ ಪಿತಾಂಪುರದ ಹರಿನ್ ಬನ್ಸಾಲ್ ಎಂಬುವವರ ಸಾಮಾಜಿಕ ಜಾಲತಾಣ ಉಪಯೋಗಿಸುತ್ತಿದ್ದಾಗ 'ವರ್ಕ್ ಫ್ರಮ್ ಹೋಮ್ ದೊಡ್ಡ ಮೊತ್ತದ ಹಣವನ್ನು ಸಂಪಾದಿಸಬಹುದು' ಎಂಬ ಪೋಸ್ಟ್ ಅನ್ನು ನೋಡಿದ್ದಾರೆ. ಬನ್ಸಾಲ್ ಪೋಸ್ಟ್ ಅನ್ನು ಕ್ಲಿಕ್ ಮಾಡಿದಾಗ, ಒಬ್ಬ ವ್ಯಕ್ತಿಯ ವ್ಯಾಟ್ಸಪ್ ಸಂಖ್ಯೆ ಕಾಣಿಸಿದೆ. ಆ ಅಪರಿಚಿತ ವ್ಯಕ್ತಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಲು ಲಿಂಕ್ ಕಳುಹಿಸಿದ್ದಾರೆ.
ವರ್ಕ್ ಫ್ರಮ್ ಹೋಮ್ ಭಾಗವಾಗಿ ಆತನಿಗೆ ಕೊಟ್ಟಿರುವ ಕೆಲಸವನ್ನು ಪೂರ್ಣಗೊಳಿಸಲು ವೆಬ್‌ಸೈಟ್ ಸೂಚಿಸಿದೆ. ಈ ಕೆಲಸದ ಹಣವನ್ನು ಪಡೆಯಲು ನಿರ್ದಿಷ್ಟ ಮೊತ್ತವನ್ನು ಠೇವಣಿ ಮಾಡಬೇಕು ಮತ್ತು ಕಮಿಷನ್ ಜೊತೆಗೆ ಮೊತ್ತವನ್ನು ವಾಪಸ್ ತೆಗೆದುಕೊಳ್ಳಬಹುದು ಎಂದು ವೆಬ್‌ಸೈಟ್ ತೋರಿಸಿದೆ. ಹೀಗಾಗಿ ಸಂತ್ರಸ್ತ ಹಣವನ್ನು ಕಟ್ಟಿದ್ದು, ತಕ್ಷಣವೇ ಕಮಿಷನ್‌ನೊಂದಿಗೆ ಹಣವನ್ನು ಖಾತೆಗೆ ಬಂದಿದೆ. ಸುಲಭದಲ್ಲಿ ಹಣ ಸಿಕ್ಕಿದ್ದರಿಂದ ಅವರ ಆತ್ಮವಿಶ್ವಾಸ ಹೆಚ್ಚಾಗಿದೆ.
ಅಂತಿಮವಾಗಿ ಅವರು ಸುಮಾರು ರೂ. 9,32,000 ಠೇವಣಿ ಮಾಡಿದ್ದಾರೆ. ಆದರೆ ಈ ವೇಳೆ ತಮ್ಮ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಲ್ಲ. ಆಗ ತಾನು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತ ಪೊಲೀಸರ ಮೊರೆ ಹೋಗಿದ್ದಾರೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಅಂಕಿತ್ (30) ಮತ್ತು ಸುಧೀರ್ ಕುಮಾರ್ (45) ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ವಂಚಕರು ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಬಲೆಗೆ ಬೀಳಿಸಿಕೊಳ್ಳುತ್ತಾರೆ ಮತ್ತು ನಂತರ WhatsApp ಮತ್ತು ಟೆಲಿಗ್ರಾಮ್ ಮೂಲಕ ಸಂಪರ್ಕಿಸುತ್ತಾರೆ. ಮೊದಲಿಗೆ ಕೆಲಸವನ್ನು ನಿಯೋಜಿಸಿದಂತೆ, ಕೆಲಸ ಮಾಡುತ್ತಿರುವಂತೆ ಮತ್ತು ಹಣ ಸಂಪಾದಿಸುತ್ತಿರುವಂತೆ ಅವರು ನಂಬುತ್ತಾರೆ. ನಂತರ ಹಣ ಹಿಂಪಡೆಯಲು ಒಂದಿಷ್ಟು ಮೊತ್ತ ಡೆಪಾಸಿಟ್ ಮಾಡಬೇಕು ಎಂದು ನಂಬಿಸುತ್ತಾರೆ. ಇವರ ಮಾತನ್ನು ನಂಬಿ ಸಂತ್ರಸ್ತರು ಹಣವನ್ನು ಠೇವಣಿ ಮಾಡತ್ತಾರೆ. ಮೊದಲು ಕಮಿಷನ್ ಸೇರಿ ನಿರ್ದಿಷ್ಟ ಅವಧಿಗೆ ಹಣವನ್ನು ನೀಡಲಾಗುತ್ತದೆ. ಇದನ್ನು ನಂಬಿದವರು ದೊಡ್ಡ ಮೊತ್ತದ ಹಣವನ್ನು ಠೇವಣಿ ಮಾಡಿದ ನಂತರ ಆ ವೆಬ್‌ಸೈಟ್ ಮಾಯವಾಗುತ್ತದೆ.