Photos: ವಿಶ್ವದಲ್ಲೇ ಕಲುಷಿತ ರಾಜಧಾನಿಯಾಯ್ತಾ ದೆಹಲಿ? ನಿಜಕ್ಕೂ ಈ ಪಟ್ಟಣಕ್ಕೆ ಏನಾಗಿದೆ?

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಉಸಿರಾಡುವುದೂ ಕಷ್ಟ ಎನ್ನುತ್ತಿದೆ ಮತ್ತೊಂದು ರಿಪೋರ್ಟ್. ದೆಹಲಿ ಸತತ 4ನೇ ವರ್ಷವೂ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 2021ರಲ್ಲಿ ಭಾರತದ 50 ನಗರಗಳ ಪೈಕಿ 35 ನಗರಗಳ ವಾಯು ಗುಣಮಟ್ಟ ಅತ್ಯಂತ ಕಳಪೆ ಎಂದು ವರದಿ ಹೇಳುತ್ತಿದೆ.

First published:

 • 18

  Photos: ವಿಶ್ವದಲ್ಲೇ ಕಲುಷಿತ ರಾಜಧಾನಿಯಾಯ್ತಾ ದೆಹಲಿ? ನಿಜಕ್ಕೂ ಈ ಪಟ್ಟಣಕ್ಕೆ ಏನಾಗಿದೆ?

  ಜಿನೀವಾ ವಿಶ್ವ ಆರೋಗ್ಯ ಸಂಸ್ಥೆ (WHO) ವಾಯು ಗುಣಮಟ್ಟದ ಮಾನದಂಡಗಳ ಪ್ರಕಾರ, ಬಾಂಗ್ಲಾದೇಶ ಅತ್ಯಂತ ಕಲುಷಿತ ದೇಶವಾಗಿದೆ. . ಚಾಡ್ ವಿಶ್ವದ ಎರಡನೇ ಅತಿ ಹೆಚ್ಚು ಮಾಲಿನ್ಯದ ದೇಶವಾಗಿದೆ. ಈ ಶ್ರೇಯಾಂಕದಲ್ಲಿ ಚೀನಾ 22ನೇ ಸ್ಥಾನದಲ್ಲಿದೆ. ಒಂದು ವರ್ಷದ ಹಿಂದೆ ಚೀನಾ 14ನೇ ಸ್ಥಾನದಲ್ಲಿತ್ತು. ವಿಶ್ವದ 15 ಅತ್ಯಂತ ಕಲುಷಿತ ನಗರಗಳು ಮಧ್ಯ ದಕ್ಷಿಣ ಏಷ್ಯಾದಲ್ಲಿವೆ. ಇವುಗಳಲ್ಲಿ 10 ನಗರಗಳು ಭಾರತದಲ್ಲಿವೆ. (ಕೃಪೆ: Internet)

  MORE
  GALLERIES

 • 28

  Photos: ವಿಶ್ವದಲ್ಲೇ ಕಲುಷಿತ ರಾಜಧಾನಿಯಾಯ್ತಾ ದೆಹಲಿ? ನಿಜಕ್ಕೂ ಈ ಪಟ್ಟಣಕ್ಕೆ ಏನಾಗಿದೆ?

  ಬಾಂಗ್ಲಾದೇಶದಲ್ಲಿ ಮಾಲಿನ್ಯವು ಅದಕ್ಕಿಂತ 15 ಪಟ್ಟು ಹೆಚ್ಚಾಗಿದೆ. ಇಲ್ಲಿ ಮಾಲಿನ್ಯಕ್ಕೆ ಅತಿ ದೊಡ್ಡ ಕಾರಣವೆಂದರೆ ವಾಹನಗಳು, ಇಟ್ಟಿಗೆ ಗೂಡುಗಳು ಮತ್ತು ಕಾರ್ಖಾನೆಗಳ ಹೊಗೆ. ಇದಲ್ಲದೇ ನಗರಗಳಲ್ಲಿ ಹಾರಾಡುವ ಧೂಳು ಕೂಡ ಮಾಲಿನ್ಯಕ್ಕೆ ದೊಡ್ಡ ಕಾರಣವಾಗಿದೆ. (ಕೃಪೆ: Internet)

  MORE
  GALLERIES

 • 38

  Photos: ವಿಶ್ವದಲ್ಲೇ ಕಲುಷಿತ ರಾಜಧಾನಿಯಾಯ್ತಾ ದೆಹಲಿ? ನಿಜಕ್ಕೂ ಈ ಪಟ್ಟಣಕ್ಕೆ ಏನಾಗಿದೆ?

  WHO ಪ್ರಕಾರ, ಯಾವುದೇ ನಗರದಲ್ಲಿ PM2.5 ಮಟ್ಟವು ಪ್ರತಿ ಘನ ಮೀಟರ್ಗೆ 5 ಮೈಕ್ರೋಗ್ರಾಂಗಳನ್ನು ಮೀರಬಾರದು. IQAir ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ PM 2.5 ರಂದು ಈ ಡೇಟಾವನ್ನು ಬಿಡುಗಡೆ ಮಾಡುತ್ತದೆ. ವರದಿಯು ಯುನೈಟೆಡ್ ಸ್ಟೇಟ್ಸ್ನ 2,406 ನಗರಗಳನ್ನು ಒಳಗೊಂಡಿದೆ. (ಕೃಪೆ: Internet)

  MORE
  GALLERIES

 • 48

  Photos: ವಿಶ್ವದಲ್ಲೇ ಕಲುಷಿತ ರಾಜಧಾನಿಯಾಯ್ತಾ ದೆಹಲಿ? ನಿಜಕ್ಕೂ ಈ ಪಟ್ಟಣಕ್ಕೆ ಏನಾಗಿದೆ?

  ವಿಪರ್ಯಾಸವೆಂದರೆ ನಾವು ವಾಯು ಮಾಲಿನ್ಯ ಕಡಿಮೆಗೊಳಿಸುವ ಕುರಿತಾಗಿ ವೈಜ್ಞಾನಿಕ ಸಂಶೋಧನೆಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಹಾಗೆ ನೋಡಿದ್ರೆ ಸುಲಭವಾಗಿ ಮಾಡಬಹುದಾದ ಪರಿಹಾರೋಪಾಯಗಳನ್ನೂ ನಾವು ಕೈಗೊಳ್ಳುತ್ತಿಲ್ಲ ಅಂತ ವರದಿಯಲ್ಲಿ ಹೇಳಲಾಗಿದೆ. (ಕೃಪೆ: Internet)

  MORE
  GALLERIES

 • 58

  Photos: ವಿಶ್ವದಲ್ಲೇ ಕಲುಷಿತ ರಾಜಧಾನಿಯಾಯ್ತಾ ದೆಹಲಿ? ನಿಜಕ್ಕೂ ಈ ಪಟ್ಟಣಕ್ಕೆ ಏನಾಗಿದೆ?

  ದೆಹಲಿ ವಿಶ್ವದಲ್ಲೇ ಅತ್ಯಂತ ಕಲುಷಿತ ನಗರವಾಗಿದೆ. ವಿಶ್ವದ ಅತಿ ಹೆಚ್ಚು ಮಾಲಿನ್ಯಯುಕ್ತ ನಗರಗಳ ಪಟ್ಟಿಯಲ್ಲಿ ಭಾರತದ ರಾಜಧಾನಿ ಸತತ 4ನೇ ವರ್ಷವೂ ಅಗ್ರಸ್ಥಾನದಲ್ಲಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾ ಎರಡನೇ ಸ್ಥಾನದಲ್ಲಿದ್ದರೆ, ಆಫ್ರಿಕಾದ ಚಾಡ್ ರಾಜಧಾನಿ ನಜ್ಮಿನಾ ಮೂರನೇ, ತಜಕಿಸ್ತಾನದ ದುಶಾನ್ಬೆ ನಾಲ್ಕನೇ ಮತ್ತು ಓಮನ್ನ ಮಸ್ಕತ್ ಐದನೇ ಸ್ಥಾನದಲ್ಲಿದೆ. (ಕೃಪೆ: Internet)

  MORE
  GALLERIES

 • 68

  Photos: ವಿಶ್ವದಲ್ಲೇ ಕಲುಷಿತ ರಾಜಧಾನಿಯಾಯ್ತಾ ದೆಹಲಿ? ನಿಜಕ್ಕೂ ಈ ಪಟ್ಟಣಕ್ಕೆ ಏನಾಗಿದೆ?

  ವರದಿಗಳ ಪ್ರಕಾರ ದೇಶದ 48 ಮಹಾ ನಗರಗಳಲ್ಲಿ ವಾಯುಮಾಲಿನ್ಯ ಪ್ರಮಾಣ ಪ್ರತಿ ಘನ ಮೀಟರ್ಗೆ 50 ಮಿಲಿ ಗ್ರಾಂಗಿಂತಲೂ ಹೆಚ್ಚಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕಿಂತಾ 10 ಪಟ್ಟು ಹೆಚ್ಚಾಗಿದೆ. (ಕೃಪೆ: Internet)

  MORE
  GALLERIES

 • 78

  Photos: ವಿಶ್ವದಲ್ಲೇ ಕಲುಷಿತ ರಾಜಧಾನಿಯಾಯ್ತಾ ದೆಹಲಿ? ನಿಜಕ್ಕೂ ಈ ಪಟ್ಟಣಕ್ಕೆ ಏನಾಗಿದೆ?

  ವಾಯು ಮಾಲಿನ್ಯವು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಷ್ಟೇ ಅಲ್ಲ, ಜಾಗತಿಕ ತಾಪಮಾನ ಏರಿಕೆಗೂ ಪ್ರಮುಖ ಕಾರಣವಾಗುತ್ತಿದೆ. ಶಾಲಾ ಮಕ್ಕಳು ಸಹ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ. (ಕೃಪೆ: Internet)

  MORE
  GALLERIES

 • 88

  Photos: ವಿಶ್ವದಲ್ಲೇ ಕಲುಷಿತ ರಾಜಧಾನಿಯಾಯ್ತಾ ದೆಹಲಿ? ನಿಜಕ್ಕೂ ಈ ಪಟ್ಟಣಕ್ಕೆ ಏನಾಗಿದೆ?

  ಈ ವರದಿಯ ಪ್ರಕಾರ ಜನರು ವಿಷ ಗಾಳಿ ಸೇವನೆ ಮಾಡುತ್ತಿದ್ದಾರೆ ಅನ್ನೋದು ದೃಢಪಡುತ್ತಿದೆ. ವಾಯು ಮಾಲಿನ್ಯಕ್ಕೆ ವಾಹನಗಳು ಹೊರ ಸೂಸುವ ಹೊಗೆಯೇ ಪ್ರಮುಖ ಕಾರಣ ಎನ್ನುತ್ತಾರೆ. ಜೊತೆಗೆ ಇದರಲ್ಲಿ ಕೈಗಾರಿಕೆಗಳ ಕೊಡುಗೆಯೂ ಸಾಕಷ್ಟಿದೆ. (ಕೃಪೆ: Internet)

  MORE
  GALLERIES