Deepotsav at Ayodhya: ಇಂದಿನಿಂದ ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮ; ಬೆಳಗಲಿದೆ 9 ಲಕ್ಷ ದೀವಟಿಕೆಗಳು
ಕಳೆದ ನಾಲ್ಕು ವರ್ಷಗಳಿಂದ ಅಯೋಧ್ಯೆಯಲ್ಲಿ (Ayodhya) ದೀಪೋತ್ಸವವನ್ನು (Deepotsava) ಆಚರಿಸಲಾಗುತ್ತಿದೆ. ಅಯೋಧ್ಯೆಯ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಲು ಈ ಆಚರಣೆಯನ್ನು ನಡೆಸಲಾಗುತ್ತದೆ. ಈ ವರ್ಷಕೂಡ ಅಯೋಧ್ಯೆಯ ಆಡಳಿತವು ಐದನೇ ಆವೃತ್ತಿಯನ್ನು ಆಚರಿಸುತ್ತಿದೆ. ಉತ್ತರ ಪ್ರದೇಶ ಸರ್ಕಾರವು ಇಂದು ನವೆಂಬರ್ 1 ರಿಂದ ಬೃಹತ್ ಪ್ರಮಾಣದಲ್ಲಿ ಆಯೋಜಿಸುತ್ತಿರುವ ಈ ದೀಪೋತ್ಸವ ನವೆಂಬರ್ 5 ರವರೆಗೆ ಇರುತ್ತದೆ. (Photos: ANI)
ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಛೋಟಿ ದೀಪಾವಳಿಯ ಸಮಯದಲ್ಲಿ ನಡೆಸಲಾಗುತ್ತದೆ. ಇಡೀ ನಗರವು ಮಣ್ಣಿನ ದೀಪಗಳಿಂದ ಬೆಳಗುತ್ತದೆ. ಈಗಾಗಲೇ ಅಯೋಧ್ಯೆ ಪಟ್ಟಣವನ್ನು ಅಲಂಕರಿಸಲಾಗಿದ್ದು, ದೀಪೋತ್ಸವ 2021 ಆಚರಣೆಗಳಿಗಾಗಿ ಸಿದ್ದವಾಗಿದೆ.
2/ 7
ಈ ವರ್ಷ ಸುಮಾರು ಒಂಬತ್ತು ಲಕ್ಷ ಮಣ್ಣಿನ ದೀಪಗಳನ್ನು ಅಯೋಧ್ಯೆಯಲ್ಲಿ ಬೆಳಗಿಸಿ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಲಾಗುವುದು. ಈ ಕಾರ್ಯಕ್ರಮವನ್ನು ನಿರ್ಣಯಿಸಲು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಂಡವು ಹಾಜರಿರುತ್ತದೆ.
3/ 7
ರಾಜ್ಯದ ಎಲ್ಲಾ 75 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ 90,000 ಕ್ಕೂ ಹೆಚ್ಚು ಹಳ್ಳಿಗಳಿಂದ ಮಣ್ಣಿನ ದೀಪಗಳು ಸಕಾಲದಲ್ಲಿ ಅಯೋಧ್ಯೆಗೆ ತಲುಪುವಂತೆ ನೋಡಿಕೊಳ್ಳುವ ಕಾರ್ಯವನ್ನು ನಿಯೋಜಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
4/ 7
ಒಂಬತ್ತು ಲಕ್ಷ ದಿಯಾಗಳಲ್ಲಿ, ಉತ್ತರ ಪ್ರದೇಶದ ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳ ಆವಾಸ್ ಯೋಜನೆಗಳ ಅಂದಾಜು ಒಂಬತ್ತು ಲಕ್ಷ ಫಲಾನುಭವಿಗಳಿಗೆ ತಲಾ ಒಂದು ಮನೆ ನೀಡಲಾಗುತ್ತಿತ್ತು. ಅದರಂತೆ 9 ಲಕ್ಷ ದೀಪ ಬೆಳಗಾಲಾಗುತ್ತಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
5/ 7
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ಭವ್ಯ ದೀಪೋತ್ಸವ 2021 ಇನ್ನಷ್ಟು ಮಹತ್ವದ್ದಾಗಿದೆ. ಅಯೋಧ್ಯೆಯು ರಾಜ್ಯದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳಿಗೆ ಕೇಂದ್ರ ಬಿಂದುವಾಗಿದೆ.
6/ 7
ಈ ಕುರಿತು ಮಾತನಾಡಿರುವ ಅಧಿಕಾರಿಗಳು ಇದೊಂದು ಸ್ವಾಗತಾರ್ಹ ಹೆಜ್ಜೆಯಾಗಿದ್ದು, ರಾಜ್ಯದ ಎಲ್ಲಾ ಗ್ರಾಮಗಳು ಮತ್ತು ಜಿಲ್ಲೆಗಳು ಅಯೋಧ್ಯೆಯಲ್ಲಿ ಆಚರಣೆಯ ಭಾಗವಾಗಲು ಅವಕಾಶ ನೀಡುತ್ತಿರುವುದಾಗಿ ತಿಳಿಸಿದೆ.
7/ 7
ಯೋಗಿ ಆದಿತ್ಯನಾಥ್ 2017ರಿಂದ ಈ ದೀಪೋತ್ಸವ ಆಚರಣೆಯನ್ನು ನಡೆಸಿಕೊಂಡು ಬಂದಿದ್ದಾರೆ.