ಸಿಎಎ ಕಿಚ್ಚಿಗೆ ಹೊತ್ತಿ ಉರಿಯುತ್ತಿದೆ ರಾಷ್ಟ್ರದ ರಾಜಧಾನಿ; ಹಿಂಸಾಚಾರಕ್ಕೆ ನಲುಗಿದ ದೆಹಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ವಿರೋಧದ ಗುಂಪುಗಳ ಘರ್ಷಣೆಗೆ ದೆಹಲಿ ಹೊತ್ತಿಉರಿಯುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ಕೈ ಮೀರಿದ್ದು, ಕೋಮುವಾದ ಹೇಳಿಕೆ ನೀಡುವವರ ವಿರುದ್ಧ ನಿರ್ದಾಕ್ಷ್ಯಿಣ ಕ್ರಮಕ್ಕೆ ಮುಂದಾಗುವಂತೆ ಕೂಡ ಸುಪ್ರೀಂಕೋರ್ಟ್ ತಿಳಿಸಿದೆ. 21 ಜನರ ಸಾವಿಗೆ ಕಾರಣವಾದ ದೆಹಲಿಯ ಗಲಭೆಯ ಚಿತ್ರಣ ಇಲ್ಲಿದೆ.
1 / 16
ಈಶಾನ್ಯ ದೆಹಲಿಯ ಗೋಕಲ್ಪುರದಲ್ಲಿ ಅಂಗಡಿ ಮುಗ್ಗಟ್ಟಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು
2 / 16
ಸೋಮವಾರದಿಂದ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಪರ ಮತ್ತು ವಿರುದ್ಧ ಪ್ರತಿಭಟನೆ ಕಾವು ಹೆಚ್ಚಾಯಿತು
3 / 16
ಮೌಜಪುರದಲ್ಲಿ ಪೌರತ್ವದ ಕಿಚ್ಚು ಹೆಚ್ಚಾಗಿದ್ದು, ಗುಂಡೇಟು ಹಿಡಿದು ನಿಂತಿರುವ ವ್ಯಕ್ತಿ
4 / 16
ಕಲ್ಲು ತೂರಾಟ ನಡೆಸಿರುವ ಉದ್ರಿಕ್ತರ ಗುಂಪು
5 / 16
ಪೊಲೀಸರ ಬಿಗಿ ಭದ್ರತೆ ನಡುವೆ ರಸ್ತೆಗಿಳಿದ ಪ್ರತಿಭಟನಾಕಾರರು
6 / 16
ರಸ್ತೆಯಲ್ಲಿ ಹೊತ್ತಿ ಉರಿಯುತ್ತಿರುವ ವಾಹನಗಳು
7 / 16
ಪ್ರತಿಭಟನೆ ಹಿನ್ನೆಲೆ ಜನರಲ್ಲಿ ಪ್ರತಿಭಟನಾಕಾರರಿಗೆ ಭಯದ ಜೊತೆ ಜನಸಾಮಾನ್ಯರಿಗೆ ಅಭಯ ನೀಡಲು ರಕ್ಷಣಾ ಸಿಬ್ಬಂದಿಗಳು ನಡೆಸಿದ ಮೆರವಣಿಗೆ
8 / 16
ಗುಂಡೇಟು ಹಿಡಿದಿರುವ ವ್ಯಕ್ತಿ ಶಾರುಖ್
9 / 16
ಪರಿಸ್ಥಿತಿ ಮಿತಿ ಮೀರಿದ್ದು, ಹತೋಟಿಗೆ ಮುಂದಾಗುವಂತೆ ಸಿಎಂ ಅರವಿಂದ ಕೇಜ್ರಿವಾಲ್ ಕೇಂದ್ರಕ್ಕೆ ಮನವಿ ಮಾಡಿದರು
10 / 16
ದೆಹಲಿ ಹಿಂಸಾಚಾರ ಕುರಿತು ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸಿದ್ದು, ಕೋಮುಪ್ರಚೋದನೆ ಹೇಳಿಕೆ ನೀಡುವುವರ ವಿರುದ್ಧ ಕ್ರಮಕ್ಕೆಮುಂದಾಗಿ ಎಂದು ಸೂಚನೆ ನೀಡಿದೆ.
11 / 16
ಹಿಂಸಾಚಾರಕ್ಕೆ ಈಗಾಗಲೇ 21 ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ
12 / 16
ಘಟನೆ ಕುರಿತು ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಸಾಮರಸ್ಯ ಕಾಪಾಡುವಂತೆ ಮನವಿ ಮಾಡಿದ್ದಾರೆ.
13 / 16
ನಗರದ ಹಲವೆಡೆ ಕರ್ಪ್ಯೂ ಜಾರಿ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ನಡೆಸುತ್ತಿದ್ದಾರೆ
14 / 16
ಹಿಂಸಾಚಾರ ನಿಯಂತ್ರಣಕ್ಕೆ ದೆಹಲಿ ಪೊಲೀಸರು ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಲಾಗಿದೆ
15 / 16
ಭದ್ರತೆಯ ದೃಷ್ಟಿಯಿಂದ ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ.
16 / 16
ಹಿಂಸಾಚಾರ ನಿಯಂತ್ರಣಕ್ಕೆ ನಗರದ ಸರಹದ್ದಿನಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿದ್ದು, ಹೊರಗಿನವರ ಪ್ರವೇಶ ನಿಷೇಧ ಮಾಡಲಾಗಿದೆ.
First published: February 26, 2020, 18:58 IST