Maharashtra: ನಕ್ಸಲರ ವಿರುದ್ಧ ಪೊಲೀಸ್ ಕಾರ್ಯಾಚರಣೆ; ಕಮಾಂಡರ್ ಸೇರಿದಂತೆ 3 ಮಾವೋವಾದಿಗಳು ಎನ್‌ಕೌಂಟರ್‌ಗೆ ಬಲಿ

ಮಹಾರಾಷ್ಟ್ರ: ನಕ್ಸಲರ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಕ್ಸಲ್ ಕಮಾಂಡರ್ ಸೇರಿದಂತೆ ಮೂವರು ಮಾವೋವಾದಿಗಳು ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

First published:

 • 17

  Maharashtra: ನಕ್ಸಲರ ವಿರುದ್ಧ ಪೊಲೀಸ್ ಕಾರ್ಯಾಚರಣೆ; ಕಮಾಂಡರ್ ಸೇರಿದಂತೆ 3 ಮಾವೋವಾದಿಗಳು ಎನ್‌ಕೌಂಟರ್‌ಗೆ ಬಲಿ

  ಮಾಹಿತಿ ಪ್ರಕಾರ ಮೃತರಲ್ಲಿ ಒಬ್ಬರನ್ನು ಪೆರಿಮಿಲಿ ದಳದ ಕಮಾಂಡರ್ ಬಿಟ್ಲು ಮಾದವಿ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರನ್ನು ಪೆರಿಮಿಲಿ ದಳದ ವಾಸು ಮತ್ತು ಆಹೇರಿ ದಳದ ಶ್ರೀಕಾಂತ್ ಎಂದು ಗುರುತಿಸಲಾಗಿದೆ.

  MORE
  GALLERIES

 • 27

  Maharashtra: ನಕ್ಸಲರ ವಿರುದ್ಧ ಪೊಲೀಸ್ ಕಾರ್ಯಾಚರಣೆ; ಕಮಾಂಡರ್ ಸೇರಿದಂತೆ 3 ಮಾವೋವಾದಿಗಳು ಎನ್‌ಕೌಂಟರ್‌ಗೆ ಬಲಿ

  ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಕೆದ್ಮಾರಾ ಅರಣ್ಯದಲ್ಲಿ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ನಕ್ಸಲರ ವಿರುದ್ಧ ಈ ಕಾರ್ಯಾಚರಣೆ ನಡೆಸಲಾಗಿದ್ದು, ಪರಸ್ಪರ ಗುಂಡಿನ ಚಕಮಕಿ ನಡೆದಿದೆ.

  MORE
  GALLERIES

 • 37

  Maharashtra: ನಕ್ಸಲರ ವಿರುದ್ಧ ಪೊಲೀಸ್ ಕಾರ್ಯಾಚರಣೆ; ಕಮಾಂಡರ್ ಸೇರಿದಂತೆ 3 ಮಾವೋವಾದಿಗಳು ಎನ್‌ಕೌಂಟರ್‌ಗೆ ಬಲಿ

  ಪೊಲೀಸರ ಶೋಧ ಕಾರ್ಯಾಚರಣೆಯ ವೇಳೆ ನಕ್ಸಲರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಪೊಲೀಸರು ಪ್ರತಿದಾಳಿ ನಡೆಸಿರುವುದಾಗಿ ಗಡ್ಚಿರೋಲಿ ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.

  MORE
  GALLERIES

 • 47

  Maharashtra: ನಕ್ಸಲರ ವಿರುದ್ಧ ಪೊಲೀಸ್ ಕಾರ್ಯಾಚರಣೆ; ಕಮಾಂಡರ್ ಸೇರಿದಂತೆ 3 ಮಾವೋವಾದಿಗಳು ಎನ್‌ಕೌಂಟರ್‌ಗೆ ಬಲಿ

  ಮಾವೋವಾದಿಗಳ ಪೆರಿಮಿಲಿ ಮತ್ತು ಅಹೇರಿ ದಳದ ಸದಸ್ಯರು ಅರಣ್ಯ ಪ್ರದೇಶದಲ್ಲಿ ಇರುವ ಬಗ್ಗೆ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಆಧಾರದ ಮೇಲೆ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.

  MORE
  GALLERIES

 • 57

  Maharashtra: ನಕ್ಸಲರ ವಿರುದ್ಧ ಪೊಲೀಸ್ ಕಾರ್ಯಾಚರಣೆ; ಕಮಾಂಡರ್ ಸೇರಿದಂತೆ 3 ಮಾವೋವಾದಿಗಳು ಎನ್‌ಕೌಂಟರ್‌ಗೆ ಬಲಿ

  ನಕ್ಸಲರ ವಿರುದ್ಧದ ಕಾರ್ಯಾಚರಣೆಗಾಗಿ ಸಿ-60 ಪೊಲೀಸ್ ಪಡೆಯ ಎರಡು ತುಕಡಿಯನ್ನು ಕಳುಹಿಸಲಾಗಿತ್ತು. ಪೊಲೀಸರು ಶಸ್ತ್ರ ಸನ್ನದ್ಧರಾಗಿಯೂ ಅರಣ್ಯಕ್ಕೆ ತೆರಳಿದ್ದರು.

  MORE
  GALLERIES

 • 67

  Maharashtra: ನಕ್ಸಲರ ವಿರುದ್ಧ ಪೊಲೀಸ್ ಕಾರ್ಯಾಚರಣೆ; ಕಮಾಂಡರ್ ಸೇರಿದಂತೆ 3 ಮಾವೋವಾದಿಗಳು ಎನ್‌ಕೌಂಟರ್‌ಗೆ ಬಲಿ

  ಗುಂಡಿನ ಚಕಮಕಿ ನಡೆದ ನಂತರ ಶಸ್ತ್ರಾಸ್ತ್ರಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ಮೂವರು ಪುರುಷ ನಕ್ಸಲರ ಶವಗಳನ್ನು ವಶಕ್ಕೆ ಪಡೆಯಲಾಗಿದೆ.

  MORE
  GALLERIES

 • 77

  Maharashtra: ನಕ್ಸಲರ ವಿರುದ್ಧ ಪೊಲೀಸ್ ಕಾರ್ಯಾಚರಣೆ; ಕಮಾಂಡರ್ ಸೇರಿದಂತೆ 3 ಮಾವೋವಾದಿಗಳು ಎನ್‌ಕೌಂಟರ್‌ಗೆ ಬಲಿ

  ಸದ್ಯ ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಕಾರ್ಯಾಚರಣೆಯನ್ನು ಮುಂದುವರಿಸಿರುವ ಪೊಲೀಸರು, ತನಿಖೆಯನ್ನೂ ಕೈಗೆತ್ತಿಕೊಂಡಿದ್ದಾರೆ.

  MORE
  GALLERIES