PHOTOS: ಪೆಥಾಯ್ ಚಂಡಮಾರುತಕ್ಕೆ ಸಿಲುಕಿದ ಆಂಧ್ರ; ಭಾರೀ ಮಳೆ, ಭೂಕುಸಿತ, ಜನಜೀವನ ಅಸ್ತವ್ಯಸ್ತ
ಬಂಗಾಳಕೊಲ್ಲಿಯಿಂದ ಆಂಧ್ರಪ್ರದೇಶದ ಕಡೆಗೆ ಬೀಸುತ್ತಿರುವ ಪೆಥಾಯ್ ಚಂಡಮಾರುತದಿಂದ ಆಂಧ್ರದ ಕರಾವಳಿ ಭಾಗದ 9 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಜೋರಾಗಿ ಗಾಳಿ ಬೀಸುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ. ಗಾಳಿಯ ರಭಸಕ್ಕೆ ಮನೆ, ವಾಹನಗಳ ಮೇಲೆ ಮರಗಳು ಉರುಳಿವೆ. ಸಮುದ್ರದ ತೀರದಲ್ಲಿರುವ ಮನೆಗಳ ಜನರನ್ನು ಎತ್ತರದ ಜಾಗಗಳಿಗೆ ಸ್ಥಳಾಂತರ ಮಾಡಲಾಗಿದೆ. ಆಂಧ್ರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಾವಿರಾರು ರಕ್ಷಣಾ ಸಿಬ್ಬಂದಿ ಹೆಚ್ಚಿನ ಆಸ್ತಿ, ಜೀವ ಹಾನಿಯಾಗದಂತೆ ತಡೆಯಲು ಕಾರ್ಯೋನ್ಮುಖರಾಗಿದ್ದಾರೆ. ಅದರ ಕುರಿತ ಫೋಟೋಗಳು ಇಲ್ಲಿವೆ...