Cyclone Nivar: ಪುದುಚೇರಿ, ತಮಿಳುನಾಡಿನಲ್ಲಿ ತೀವ್ರಗೊಂಡ ಬಿರುಗಾಳಿ, ಸಂಜೆ ಅಪ್ಪಳಿಸಲಿದೆ ಚಂಡಮಾರುತ
ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತವು ಚಂಡಮಾರುತ ಸ್ವರೂಪ ಪಡೆದಿದೆ. ಗಾಳಿಯು ಗಂಟೆಗೆ 130-140ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಇಂದು ಸಂಜೆ ಅಥವಾ ನಾಳೆ ತಮಿಳುನಾಡು, ಪುದುಚೇರಿ ಕಡಲ ತೀರಕ್ಕೆ ನಿವಾರ್ ಚಂಡಮಾರುತ ಅಪ್ಪಳಿಸಲಿದೆkw
ಕಡಲತೀರದಲ್ಲಿ ಈಗಾಗಲೇ ಜೋರು ಗಾಳಿ ಬೀಸುತ್ತಿದ್ದು, ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಚಂಡಮಾರುತ ಅಪ್ಪಳಿಸಲಿದೆ. (Image: News18)
2/ 14
ನಿವಾರ್ ಚಂಡಮಾರುತ ಹಿನ್ನಲೆ ತಮಿಳುನಾಡಿನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, 30 ಎನ್ಡಿಆರ್ಎಫ್ ತಂಡ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದೆ. . (Image: News18)
3/ 14
ಚಂಡಮಾರುತ ಹಿನ್ನಲೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹಲವೆಡೆ ಮಳೆಯಾಗುತ್ತಿದೆ. (Image: News18)
4/ 14
ಪುದಚೇರಿಯಲ್ಲಿ ಚಂಡಮಾರುತ ಅಪ್ಪಳಿಸುವ ಹಿನ್ನಲೆ ಇಲ್ಲಿನ ಸಿಎಂ ವಿ ನಾರಾಯಣಸಾಮಿ ಪರಿಸ್ಥಿತಿ ಅವಲೋಕಿಸಿದರು. . (Image: News18)
5/ 14
ಕಡಲೂರು,. ಚಿದಂಬರಂ, ಚೆನ್ನೈ ಸೇರಿದಂತೆ ತಮಿಳುನಾಡು ಕರಾವಳಿಯ 10 ಜಿಲ್ಲೆಗಳಲ್ಲಿ ಚಂಡಮಾರುತ ತೀವ್ರ ಪರಿಣಾಮ ಬೀರಲಿದೆ. (Image: News18)
6/ 14
ಈಗಾಗಲೇ ಕರಾವಳಿ ಪ್ರದೇಶದಲ್ಲಿ ಭಾರೀ ಬಿರುಗಾಳಿ ಬೀಸುತ್ತಿದ್ದು, ಇನ್ನು ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ. (Image: News18)
7/ 14
ಈಗಾಗಲೇ ಮೀನುಗಾರಿಗೆ ಕಡಲಿಗೆ ಇಳಿಯದಂತೆ ಸೂಚನೆ ನೀಡಿದ್ದು, ಅವರು ತಮ್ಮ ಬೋಟ್ಗಳನ್ನು ಸುರಕ್ಷಾ ಕಾರ್ಯದಲ್ಲಿ ತೊಡಗಿದ್ದಾರೆ. (Image: News18)
8/ 14
ಈಗಾಗಲೇ ಎನ್ಡಿಆರ್ಎಫ್ ಕೇಂದ್ರ ಕಚೇರಿ ಅಧಿಕಾರಿಗಳು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕಮಾಡೆಂಟ್ಗಳು ರಾಜ್ಯ ಅಧಿಕಾಗಿಗಳೊಂದಿಗೆ ಪರಿಸ್ಥಿತಿ ನಿರ್ವಹಣೆ ಕುರಿತು ನಿರಂತರ ಸಭೆ ನಡೆಸುತ್ತಿದ್ದಾರೆ. . (Image: News18)
9/ 14
ಚಂಡ ಮಾರುತ ಹಿನ್ನಲೆ ಇಂದು ತಮಿಳುನಾಡಿನಾದ್ಯಂತ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. (Image: News18)
10/ 14
ಯಾರಿಗೂ ಕೂಡ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. (Image: News18)
11/ 14
ಭಾರೀ ಗಾಳಿಯಿಂದಾಗಿ ಕಡಲ ತೀರದಲ್ಲಿದ್ದ ಕಟ್ಟಿಗೆಯ ಬ್ಯಾನರ್ ಕೆಳಗೆ ಉರುಳಿದೆ. (Image: News18)
12/ 14
ಮಳೆ ಹೆಚ್ಚಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದರೆ ಅವರ ರಕ್ಷಣೆಗಾಗಿ ಬೋಟ್ಗಳನ್ನು ಸಿದ್ಧಪಡಿಸಲಾಗಿದೆ. (Image: News18)
13/ 14
ಕೋವಿಡ್ ಹಿನ್ನಲೆ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿರುವ ಎನ್ಡಿಆರ್ಎಫ್ ತಂಡಕ್ಕೆ ಪಿಪಿಇ ಕಿಟ್ ನೀಡಲಾಗಿದೆ (Image: News18)
14/ 14
ಈಗಾಗಲೇ ಕಡಲ ತೀರದ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಗಂಜಿಕೇಂದ್ರ ತೆರೆಯಲಾಗಿದೆ. (Image: News18)