ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಇನ್ನೆರಡು ದಿನಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಆಗಮಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಮೂರ್ನಾಲ್ಕು ದಿನಗಳಲ್ಲಿ, ಅಂದರೆ ಮೇ 6ರ ಆಸುಪಾಸಿನಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೋಚಾ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿತ್ತು. ಆದರೆ ಇದು ಸುಂದರಬನ್ ಪ್ರದೇಶಗಳ ಅಕ್ಕಪಕ್ಕದಲ್ಲಿ ವಾಸಿಸುವ ಜನರಿಗೆ ಆಘಾತ ತಂದೊಡ್ಡಿದೆ. ಏಕೆಂದರೆ ಇಲ್ಲಿನ ಜನರು ನದಿಯ ದಡದಲ್ಲಿ ವರ್ಷಪೂರ್ತಿ ವಾಸಿಸುತ್ತಾರೆ. ಪ್ರಕೃತಿ ವಿಕೋಪಗಳಿಂದ ಪದೇ ಪದೇ ಹಾನಿಗೊಳಗಾಗುತ್ತಾರೆ.
2009 ರಿಂದ 2022 ರ ನಡುವೆ ಸುಂದರಬನ್ಸ್ ಸೇರಿದಂತೆ ಕರಾವಳಿ ಭಾಗದ ಜನರು ಐಲಾ, 'ಯಾಸ್, ಅಂಫಾನನನಂತಹ ಮಹಾಪ್ರವಾಹದ ನೋವಿನ ನೆನಪು ಇನ್ನೂ ಅವರ ಕಣ್ಣುಗಳಲ್ಲಿ ಇನ್ನೂ ಕಾಣುತ್ತಿದೆ. ಸುಂದರಬನ್ದಲ್ಲಿ ಪ್ರತಿ ವರ್ಷ ಕೆಲವು ನೈಸರ್ಗಿಕ ವಿಕೋಪಗಳು ಸಂಭವಿಸುತ್ತವೆ. ಇಂದಿಗೂ ಸಹ, ಪ್ರಕೃತಿ ವಿಕೋಪಗಳ ಕ್ರೂರ ನೆನಪುಗಳು ಸುಂದರಬನದ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿವೆ. ಈ ನಡುವೆ ಮತ್ತೆ ಮೋಚಾ ಚಂಡಮಾರುತ ಸಮೀಪಿಸುತ್ತಿದೆ. ಮತ್ತು ಇದರಿಂದಾಗಿ ಸುಂದರಬನ ಜನರು ಚಿಂತೆಗೀಡು ಮಾಡಿದೆ.
ಚಂಡಮಾರುತ ಅಪ್ಪಳಿಸಿದಾಗ ನಾವು ನದಿಯ ಪಕ್ಕದಲ್ಲಿ ಭಯದಿಂದ ಬದುಕುತ್ತಿದ್ದೇವೆ. ನಮಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಚಂಡಮಾರುತದಿಂದ ಮನೆಯಲ್ಲಿ ನೀರು ತುಂಬಿಕೊಳ್ಳುತ್ತದೆ. ಆದರೂ ನಾವು ಮಕ್ಕಳೊಂದಿಗೆ ರಾತ್ರಿಯನ್ನು ಕಳೆಯುವಂತಹ ಪರಿಸ್ಥಿತಿ ಇದೆ ಎಂದು ಸುಂದರಬನದ ಗೌರೇಶ್ವರ ನದಿಯ ದಡದಲ್ಲಿರುವ ಗುಡಿಸಲು ಮನೆಯಲ್ಲಿ ವಾಸಿಸುವ ಬಾಬುಸೋನಾ ಲಸ್ಕರ್ ಹೇಳಿದ್ದಾರೆ.
ಮೇ 25, 2009 ರಂದು, 'ಐಲಾ' ಚಂಡಮಾರುತ ಸುಂದರಬನಕ್ಕೆ ಅಪ್ಪಳಿಸಿತ್ತು. ಗಂಟೆಗೆ 120 ಕಿ.ಮೀ. ವೇಗದಲ್ಲಿ ಬೀಸಿದ್ದ ಚಂಡಮಾರುತದಲ್ಲಿ 150 ಜನರು ಸತ್ತಿದ್ದರು. ಹಲವು ಮಣ್ಣಿನ ಮನೆಗಳು ಕುಸಿದು ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ನಂತರ ಮೇ 3 ಮತ್ತು 4, 2019 ರಂದು ಫಣಿ ಚಂಡಮಾರುತ ಅಪ್ಪಳಿಸಿತ್ತು. ಅದರ ವೇಗ ಗಂಟೆಗೆ 150-175 ಕಿ.ಮೀ, ಮೇ 20, 2020 ರಂದು ಅಂಫಾನ್ ಚಂಡಮಾರುತ ಬಂದು 80 ಜನರನ್ನು ಕೊಂದಿತ್ತು.
26 ಮೇ 2021 ಮತ್ತೆ ಬಂದು ಅಣೆಕಟ್ಟೆ ಒಡೆದ ಪರಿಣಾಮ ಹಲವು ಗ್ರಾಮಗಳು ಹಾನಿಗೀಡಾಗಿದ್ದವು. ಇದೀಗ ಮೇ ತಿಂಗಳಲ್ಲಿ ಇತಿಹಾಸ ಮರುಕಳಿಸುತ್ತದೋ ಎಂಬ ಭಯದಲ್ಲಿ ಸುಂದರಬನ ನಿವಾಸಿಗಳು ದಿನ ಕಳೆಯುತ್ತಿದ್ದಾರೆ. ಮತ್ತೆ ಇಂತಹ ಚಂಡಮಾರುತ ಬರುತ್ತದೋ ಎಂಬ ಭಯ, ಗಾಬರಿಯಲ್ಲಿ ದಿನಗಳನ್ನು ಎಣಿಸುತ್ತಿದ್ದಾರೆ. ಮತ್ತೆ ಪ್ರಕೃತಿ ವಿಕೋಪದಲ್ಲಿ ನದಿ ಕಟ್ಟೆ ಒಡೆದರೆ ಮನೆ ಬಿಟ್ಟುಹೋಗಬೇಕಾಗುತ್ತದೆ, ಹೊಲದಲ್ಲಿರು ಬೆಳೆಗಳು ನಾಶವಾಗುತ್ತದೆ ಎಂಬ ಭೀತಿಯಲ್ಲಿದ್ದಾರೆ.
ಇನ್ನೂ ಬಕ್ಕಲಿ ಬೀಚ್‌ಗೆ ಬರುವ ಪ್ರವಾಸಿಗರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೈಕ್ನಲ್ಲಿ ಪ್ರಚಾರ ನಡೆಯುತ್ತಿದೆ. ಅನಾಹುತ ತಡೆಯಲು ಎಲ್ಲಾ ಪ್ರವಾಹ ಶೆಲ್ಟರ್‌ಗಳನ್ನು ಸಿದ್ಧಪಡಿಸಲು ಆದೇಶಿಸಲಾಗಿದೆ. ದುರ್ಬಲ ಅಣೆಕಟ್ಟಿನ ದುರಸ್ತಿ ಕಾರ್ಯ ತುರ್ತಾಗಿ ನಡೆಯುತ್ತಿದೆ. ಡೈಮಂಡ್ ಹಾರ್ಬರ್‌ನ ಕಮಿಷನರ್ ಜನರಲ್ ಅಂಜನ್ ಘೋಷ್ ಮಾತನಾಡಿ, ಆಡಳಿತವು ಚಂಡಮಾರುತದ ಬಗ್ಗೆ ಜಾಗರೂಕವಾಗಿದೆ. ಮುಂಗಾರು ಪೂರ್ವದಲ್ಲಿ ಎಲ್ಲೆಲ್ಲಿ ಸಮಸ್ಯೆಗಳಿರುವುದು ಕಂಡು ಬಂದಿದೆ. ಈ ಬಾರಿ ಚಂಡಮಾರುತ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.