Cyclone Fani: ಭಯಾನಕ ಫನಿ ಚಂಡಮಾರುತ ಸೃಷ್ಟಿಸಿದ ಅವಾಂತರಗಳು
ಭಯಾನಕ ಫನಿ ಚಂಡಮಾರುತ ಜನರಲ್ಲಿ ಆತಂಕ ಮೂಡಿಸಿದೆ. ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಫನಿ ಚಂಡಮಾರುತದ ಪ್ರಭಾವ ಹೆಚ್ಚಾಗಿದೆ. ಒರಿಸ್ಸಾದ 11 ಜಿಲ್ಲೆಗಳಾದ ಗಜಪತಿ, ಗಂಜಾಂ, ಖುರ್ದಾ, ಪುರಿ, ನಾಯ್ಗರ್, ಕಟ್ಟಾಕ್, ಜಗತ್ಸಿಂಗ್ಪುರ್, ಕೇದಾರಪರ, ಜೈಪುರ, ಭದ್ರಕ್ ಮತ್ತು ಬಾಲಾಸೂರ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮುಖ್ಯವಾಗಿ ಒರಿಸ್ಸಾ, ತಮಿಳುನಾಡು, ಕೇರಳ, ಪುದುಚೆರಿ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಫನಿ ಚಂಡಮಾರುತ ಬೀಸಲಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಇತ್ತೀಚಿನ ಮಾಹಿತಿ ಪ್ರಕಾರ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದಲ್ಲಿ ಹೆಚ್ಚು ಹಾನಿಯಾಗುವ ಸಾಧ್ಯತೆಯಿದೆ. ಈ ಭಾಗಗಳಲ್ಲಿ ಗಂಟೆಗೆ 170ರಿಂದ 200 ಕಿ.ಮೀ. ವೇಗದಲ್ಲಿ ಫನಿ ಅಪ್ಪಳಿಸಲಿದೆ.