Cyclone Fani: ಒರಿಸ್ಸಾದ ಕರಾವಳಿಗೆ ಅಪ್ಪಳಿಸಿದ ಫನಿ ಚಂಡಮಾರುತ; ಜನಜೀವನ ತತ್ತರ, ಓರ್ವ ಬಲಿ

ಒಡಿಶಾ ಕರಾವಳಿಗೆ ಫನಿ ಚಂಡಮಾರುತ ಅಪ್ಪಳಿಸಿದ್ದು ಜನಜೀವನ ತತ್ತರಿಸಿದೆ. ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಫನಿ ಆರ್ಭಟಕ್ಕೆ ಪುರಿ ತತ್ತರಿಸಿದೆ. ಹಲವೆಡೆ ಮರಗಳು ಧರೆಗೆ ಉರುಳಿವೆ. ಗಂಟೆಗೆ 200 ಕಿ.ಮೀ ವೇಗದಲ್ಲಿ ಫನಿ ಸೈಕ್ಲೋನ್​ ಬೀಸುತ್ತಿದೆ. ಮುಂಜಾಗ್ರತೆಯಿಂದ ಒಟ್ಟು 11 ಲಕ್ಷ ಜನರ ಸ್ಥಳಾಂತರ ಮಾಡಲಾಗಿದೆ. ಶಾಲಾ, ಕಾಲೇಜುಗಳಲ್ಲಿ 11 ಲಕ್ಷ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಪುರಿ ಜಿಲ್ಲೆಯ ಹಲವೆಡೆ ಚಂಡಮಾರುತದಿಂದ ಭೂ ಕುಸಿತವಾಗುತ್ತಿದೆ. ಒಡಿಶಾದ 11ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಒಡಿಶಾದ 10 ಸಾವಿರ ಗ್ರಾಮಗಳಲ್ಲಿ ಫನಿ ಅಬ್ಬರ ಇದೆ. 91 NDRF, 8 ಕೋಸ್ಟಲ್​ ಗಾರ್ಡ್​ ತಂಡವನ್ನು ನಿಯೋಜನೆ ಮಾಡಲಾಗಿದೆ. ಭುವನೇಶ್ವರ, ಕೋಲ್ಕತಾ ಏರ್​ಪೋರ್ಟ್​ ಬಂದ್ ಆಗಿದೆ. ಫನಿ ಆರ್ಭಟಕ್ಕೆ 157ಕ್ಕೂ ಹೆಚ್ಚು ರೈಲು ಸಂಚಾರ ಸ್ಥಗಿತವಾಗಿದೆ.

  • News18
  • |
First published: