ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ನಿತ್ಯ ಸಾವಿರಾರರು ಭಕ್ತರು ಆಗಮಿಸುತ್ತಾರೆ. ಎರಡು ಮೂರು ತಿಂಗಳ ಮುನ್ನವೇ ಭಕ್ತರು ಪ್ಲ್ಯಾನ್ ಮಾಡುತ್ತಾರೆ. ದೇವರ ದರ್ಶನದೊಂದಿಗೆ ರೈಲು, ರೂಮ್ಗಳನ್ನು ಮುಂಚಿತವಾಗಿ ಬುಕ್ ಮಾಡುತ್ತಾರೆ. ಆದರೆ ಯಾವುದೇ ದರ್ಶನ ಟಿಕೆಟ್ ಇಲ್ಲದೆ ಬಂದರೆ ಮಾತ್ರ ಗಂಟೆ ಗಟ್ಟಲೇ ಕ್ಯೂನಲ್ಲಿ ಕಾದು ದರ್ಶನ ಪಡೆದುಕೊಳ್ಳಬೇಕಾಗುತ್ತದೆ. (ಸಾಂದರ್ಭಿಕ ಚಿತ್ರ)
ಯಾವುದೇ ಟಿಕೆಟ್ ಇಲ್ಲದೆ ತಿರುಮಲಕ್ಕೆ ಆಗಮಿಸುವ ಭಕ್ತರಿಗೆ ದೇವರ ದರ್ಶನ ಪಡೆದುಕೊಳ್ಳಲು ಸುಮಾರು 10 ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದು, ಟೈಮ್ ಸ್ಲಾಟ್ ಟೋಕನ್ ಇರುವ ಭಕ್ತರಿಗೆ 3 ಗಂಟೆ ಸಮಯದಲ್ಲಿ ದರ್ಶನ ಸೌಲಭ್ಯ ಲಭ್ಯವಾಗುತ್ತಿದೆ. ಇನ್ನು ವಿಶೇಷ ಪ್ರವೇಶ ದರ್ಶನ ಟಿಕೆಟ್ ಹೊಂದಿರುವ ಭಕ್ತರು ಒಂದು ಗಂಟೆ ಸಮಯದಲ್ಲೇ ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)