ಅಷ್ಟಕ್ಕೂ ಆಗಿದ್ದೇನೆಂದರೆ, ಉದ್ಯಮಿಯ ಪತ್ನಿಗೆ ಆಟೋ ಚಾಲಕನೋರ್ವನ ಪರಿಚಯವಾಗಿತ್ತು. ಆಕೆ ಹೊರಗಡೆ ಓಡಾಡುತ್ತಿರುವ ವೇಳೆಗೆ ಅದೇ ಆಟೋ ಚಾಲಕ ಮನೆಗೆ ಡ್ರಾಪ್ ನೀಡುತ್ತಿದ್ದ. ಅಕ್ಟೋಬರ್ 13 ರಂದು ರಾತ್ರಿಯಾದರೂ ಪತ್ನಿ ಮನೆಗೆ ಬಾರದಿದ್ದಾಗ ಪತಿಗೆ ಅನುಮಾನ ಬರಲಾರಂಭಿಸುತ್ತದೆ. ಏನೋ ಸಮಸ್ಯೆಯಾಗಿದೆ ಎಂಬ ಅರಿವಾಗುತ್ತದೆ. ಕೊನೆಗೆ ತನ್ನ ಮನೆಯಲ್ಲಿ 47 ಲಕ್ಷ ರೂ.ನಗದು ನಾಪತ್ತೆಯಾಗಿದೆ ಎಂಬುದು ತಿಳಿಯುತ್ತದೆ.