ಸಾಂಕ್ರಾಮಿಕ ರೋಗವು ಬಡವರು ಮತ್ತು ಶ್ರೀಮಂತರು ಎಂಬ ಭೇದವಿಲ್ಲದೆ ಎಲ್ಲರಿಗೂ ಹರಡಿದೆ. ರಾಜಕಾರಣಿಗಳು, ವಿಐಪಿಗಳು, ಸೆಲೆಬ್ರಿಟಿಗಳು.. ಎಲ್ಲರೂ ಈ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಕಣ್ಣೆದುರೇ ವೈರಸ್ ಸೋಂಕಿಗೆ ಒಳಗಾದವರು ನೋಡ ನೋಡುತ್ತಲೇ ಪ್ರಾಣ ಕಳೆದುಕೊಂಡರು. ಹಣವಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ ಇತ್ತು. ಆ ಸಮಯದಲ್ಲಿ ವೈರಸ್ಗೆ ಸರಿಯಾದ ಔಷಧಿ ಕೂಡ ಲಭ್ಯವಿರಲಿಲ್ಲ.