ಯಾವುದೇ ಖರ್ಚಿಲ್ಲದೆ ಈಡೇರುತ್ತೆ ವಿದೇಶದಲ್ಲಿ ನೆಲೆಸುವ ಕನಸು, ಈ 6 ದೇಶಗಳಿಗೆ ಹೋದ್ರೆ ಸಿಗುತ್ತೆ ಲಕ್ಷ ಲಕ್ಷ ಹಣ!

Foreign Tour & Citizenship: ಪ್ರತಿಯೊಬ್ಬರೂ ವಿದೇಶದಲ್ಲಿ ಪ್ರಯಾಣಿಸಲು ಮತ್ತು ನೆಲೆಸಲು ಇಷ್ಟಪಡುತ್ತಾರೆ, ಆದರೆ ಪ್ರಯಾಣಿಸುವುದು, ವಾಸಿಸುವುದು ಮತ್ತು ಪೌರತ್ವವನ್ನು ತೆಗೆದುಕೊಳ್ಳುವುದು ಇತರ ದೇಶಗಳಲ್ಲಿ ದುಬಾರಿ ವ್ಯವಹಾರವಾಗಿದೆ. ಆದರೆ ವಿಶ್ವದ ಕೆಲವು ದೇಶಗಳಲ್ಲಿ ನಾಗರಿಕರಿಗೆ ಇಂತಹ ಸೌಲಭ್ಯ ಒದಗಿಸಿಕೊಡುವುದರೊಂದಿಗೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ ಈ ದೇಶಗಳು ಬೇರೆ ದೇಶಗಳ ಪ್ರಜೆಗಳಿಂದ ಹಣ ತೆಗೆದುಕೊಳ್ಳದೆ ಅವರಿಗೆ ತಾವಾಗೆ ಹಣವನ್ನು ನೀಡುತ್ತಾರೆ ಎಂಬುವುದು ನಿಜ. ಅಷ್ಟೇ ಅಲ್ಲ, ಹಣದ ಜತೆಗೆ ಹಲವು ರೀತಿಯ ಸೌಲಭ್ಯಗಳನ್ನೂ ಈ ದೇಶಗಳು ನೀಡುತ್ತಿವೆ.

First published:

  • 16

    ಯಾವುದೇ ಖರ್ಚಿಲ್ಲದೆ ಈಡೇರುತ್ತೆ ವಿದೇಶದಲ್ಲಿ ನೆಲೆಸುವ ಕನಸು, ಈ 6 ದೇಶಗಳಿಗೆ ಹೋದ್ರೆ ಸಿಗುತ್ತೆ ಲಕ್ಷ ಲಕ್ಷ ಹಣ!

    ಸ್ವಿಟ್ಜರ್ಲೆಂಡ್‌ನ ಸುಂದರ ನಗರ ಅಲ್ಬಿನೆನ್ ಇಲ್ಲಿ ನೆಲೆಸಲು ಜನರನ್ನು ಕರೆಯುತ್ತಿದೆ. ಈ ನಗರದ ಜನಸಂಖ್ಯೆಯನ್ನು ಹೆಚ್ಚಿಸಲು, ಅಲ್ಬಿನೆನ್ ಜನರಿಗೆ ಹಣವನ್ನು ನೀಡುತ್ತಿದೆ. ಒಂದೇ ಷರತ್ತು ಎಂದರೆ ನೀವು 10 ವರ್ಷಗಳ ಕಾಲ ಅಲ್ಲಿ ವಾಸಿಸಬೇಕಾಗುತ್ತದೆ.

    MORE
    GALLERIES

  • 26

    ಯಾವುದೇ ಖರ್ಚಿಲ್ಲದೆ ಈಡೇರುತ್ತೆ ವಿದೇಶದಲ್ಲಿ ನೆಲೆಸುವ ಕನಸು, ಈ 6 ದೇಶಗಳಿಗೆ ಹೋದ್ರೆ ಸಿಗುತ್ತೆ ಲಕ್ಷ ಲಕ್ಷ ಹಣ!

    ಸಿಸಿಲಿಯ ಎರಡು ನಗರಗಳು, ಸಾಂಬುಕಾ ಡಿ ಸಿಸಿಲಿಯಾ ಮತ್ತು ಟ್ರೋನಾ, ಮನೆಗಳನ್ನು €1 ಕ್ಕೆ ಮಾರಾಟ ಮಾಡುತ್ತಿವೆ. ಪ್ರತಿಯಾಗಿ, ನೀವು ಮೂರು ವರ್ಷಗಳಲ್ಲಿ ಮನೆಯನ್ನು ನವೀಕರಿಸಬೇಕಾಗುತ್ತದೆ.

    MORE
    GALLERIES

  • 36

    ಯಾವುದೇ ಖರ್ಚಿಲ್ಲದೆ ಈಡೇರುತ್ತೆ ವಿದೇಶದಲ್ಲಿ ನೆಲೆಸುವ ಕನಸು, ಈ 6 ದೇಶಗಳಿಗೆ ಹೋದ್ರೆ ಸಿಗುತ್ತೆ ಲಕ್ಷ ಲಕ್ಷ ಹಣ!

    ಎಂಟರ್‌ಪ್ರೈಸ್ ಐರ್ಲೆಂಡ್ ಯೋಜನೆಯು ಐರ್ಲೆಂಡ್‌ನಲ್ಲಿ ಪ್ರಾರಂಭವಾಗಿದೆ, 2020 ರಲ್ಲಿ ಪ್ರಾರಂಭಿಕ ವ್ಯವಹಾರಗಳಿಗೆ €120 ಮಿಲಿಯನ್ ನೀಡುತ್ತದೆ. ಅರ್ಜಿ ಸಲ್ಲಿಸಲು ನೀವು ಐರಿಶ್ ಆಗಬೇಕಾಗಿಲ್ಲ, ನಿಮ್ಮ ವ್ಯಾಪಾರವನ್ನು ನೀವು ಐರ್ಲೆಂಡ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

    MORE
    GALLERIES

  • 46

    ಯಾವುದೇ ಖರ್ಚಿಲ್ಲದೆ ಈಡೇರುತ್ತೆ ವಿದೇಶದಲ್ಲಿ ನೆಲೆಸುವ ಕನಸು, ಈ 6 ದೇಶಗಳಿಗೆ ಹೋದ್ರೆ ಸಿಗುತ್ತೆ ಲಕ್ಷ ಲಕ್ಷ ಹಣ!

    ಉತ್ತರ ಸ್ಪೇನ್‌ನ ಪರ್ವತ ಪ್ರದೇಶದಲ್ಲಿರುವ ಪೊಂಗಾ ಎಂಬ ಸಣ್ಣ ಹಳ್ಳಿಯು ಯುವ ದಂಪತಿಗೆ ಅಲ್ಲಿ ನೆಲೆಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ಯುವ ದಂಪತಿಗಳು ಅಲ್ಲಿಗೆ ತೆರಳಲು ಸುಮಾರು $3,600 ಅಥವಾ ಸುಮಾರು 3,00,000 ರೂ. ನೀಡುತ್ತದೆ.

    MORE
    GALLERIES

  • 56

    ಯಾವುದೇ ಖರ್ಚಿಲ್ಲದೆ ಈಡೇರುತ್ತೆ ವಿದೇಶದಲ್ಲಿ ನೆಲೆಸುವ ಕನಸು, ಈ 6 ದೇಶಗಳಿಗೆ ಹೋದ್ರೆ ಸಿಗುತ್ತೆ ಲಕ್ಷ ಲಕ್ಷ ಹಣ!

    ಕ್ಯಾಂಡೆಲಾ ತಾಲಿಯ ಆಗ್ನೇಯ ಗ್ರಾಮವಾಗಿದ್ದು, ಅಲ್ಲಿ ನೆಲೆಸಲು ಜನರಿಗೆ ಗಣನೀಯ ಮೊತ್ತವನ್ನು ಪಾವತಿಸುತ್ತಿದೆ. ಇಲ್ಲಿನ ಯುವಕರಿಗೆ ₹ 75,000, ಹಾಗೂ ಯುವ ಜೋಡಿಗಳಿಗೆ ₹ 1,00,000ಕ್ಕೂ ಹೆಚ್ಚು ನೀಡಲಾಗುತ್ತಿದೆ.

    MORE
    GALLERIES

  • 66

    ಯಾವುದೇ ಖರ್ಚಿಲ್ಲದೆ ಈಡೇರುತ್ತೆ ವಿದೇಶದಲ್ಲಿ ನೆಲೆಸುವ ಕನಸು, ಈ 6 ದೇಶಗಳಿಗೆ ಹೋದ್ರೆ ಸಿಗುತ್ತೆ ಲಕ್ಷ ಲಕ್ಷ ಹಣ!

    ಗ್ರೀಸ್‌ನ ಆಂಟಿಕಿಥೆರಾದಂತಹ ಸುಂದರ ಸ್ಥಳವು ಸುಮಾರು 20 ನಿವಾಸಿಗಳನ್ನು ಹೊಂದಿದೆ, ಈ ಸ್ಥಳಗಳು ಅಲ್ಲಿಯೇ ನೆಲೆಸಲು ಜನರಿಗೆ ಹಣ ನೀಡುತ್ತಿವೆ, ಈ ಕಾರ್ಯಕ್ರಮಕ್ಕೆ ನಿಮ್ಮನ್ನು ಆಯ್ಕೆ ಮಾಡಿದರೆ, ಮೊದಲ ಮೂರು ವರ್ಷ ಭೂಮಿ, ಮನೆ ಮತ್ತು ತಿಂಗಳಿಗೆ ಸುಮಾರು 45,000 ರೂ. ನೀಡಲಾಗುತ್ತದೆ.

    MORE
    GALLERIES