ಚೀನಾದಲ್ಲಿ ಕೊರೊನಾ ತನ್ನ ಆರ್ಭಟ ಶುರು ಮಾಡಿದ್ದು, ಸಾಕಷ್ಟು ಮಂದಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಹಿರಿಯರು ಸೋಂಕಿಗೆ ಒಳಗಾಗುತ್ತಿದ್ದಾರೆ. ಚೀನಾದ ಪ್ರಮುಖ ನಗರಗಳಲ್ಲಿನ ಆಸ್ಪತ್ರೆಗಳ ವಾರ್ಡ್ಗಳಲ್ಲಿ ಜನ ಚಿಕಿತ್ಸೆಗಾಗಿ ಕ್ಯೂ ನಿಲ್ಲುತ್ತಿದ್ದಾರೆ. ಚೀನಾದ್ಯಂತ ಕೊರೊನಾ ಹಬ್ಬಿದ್ದು, ಸಾಮೂಹಿಕವಾಗಿ ಕೊರೊನಾ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸುವುದು ಕಷ್ಟ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರತಿಯೊಂದು ಬೆಡ್ಗಳ ನಡುವೆ ಒಂದು ರಾಶಿ ವೆಂಟಿಲೇಟರ್ಗಳನ್ನು ಅಳವಡಿಸಲಾಗಿದ್ದು, ಕೋವಿಡ್ -19 ನಿಂದ ವೃದ್ಧರು ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಸ್ಟ್ರೆಚರ್ ಮೇಲೆ ನರಳಾಡುತ್ತಿದ್ದಾರೆ. ಚಾಂಗ್ಕಿಂಗ್ ಮೆಡಿಕಲ್ ಯೂನಿವರ್ಸಿಟಿ ಫಸ್ಟ್ ಅಫಿಲಿಯೇಟ್ ಆಸ್ಪತ್ರೆಯ ವೈದ್ಯರೊಬ್ಬರು, ದಿನಕ್ಕೆ 10 ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿ ಶೇ 80 ರಿಂದ 90ರಷ್ಟು ಕೊರೊನಾ ಸೋಂಕಿಗೆ ಜನ ಒಳಗಾಗಿರುತ್ತಾರೆ. ಅವರಲ್ಲಿ ಹೆಚ್ಚಿನವರು ವಯಸ್ಸಾದವರೇ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಚಿಕಿತ್ಸೆಗಾಗಿ ವಯಸ್ಸಾದವರು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಗಳಲ್ಲಿ ಕಾಯುತ್ತಿದ್ದಾರೆ. ದಿನನಿತ್ಯ ಚೀನಾದಲ್ಲಿ ಹತ್ತು ಸಾವಿರ ಕೇಸ್ ವರದಿಯಾಗುತ್ತಿದ್ದು, 5,000 ಸಾವುಗಳು ವರದಿಯಾಗುತ್ತಿದೆ. ಅಲ್ಲದೇ ಶವಸಂಸ್ಕಾರ ನಡೆಸಲೂ ಜಾಗವಿಲ್ಲದೇ ಸ್ಮಶಾನಗಳಲ್ಲಿ ಹೆಣಗಳನ್ನು ದಮನ ಮಾಡಲು ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಇಷ್ಟು ದಿನ ಸುಮ್ಮನೆ ಇದ್ದ ಚೀನಾ ಇದೀಗ ಮೊದಲ ಬಾರಿಗೆ ವಿದೇಶಿ ಲಸಿಕೆಯ ಖರೀದಿಗೆ ಮುಂದಾಗಿದೆ.