ರೆಸ್ಟೋರೆಂಟ್ ಫ್ಲಾಟ್‌ಗೆ ಔತಣವನ್ನು ತಲುಪಿಸುವ ಭರವಸೆ ನೀಡಿತ್ತು. ಹಾಗಾಗಿ ನಾನು ಅತಿಥಿಗಳಿಗೆ ಆಹ್ವಾನ ನೀಡಿದ್ದೆ. ಆದರೆ ಸಕಾಲಕ್ಕೆ ಔತಣ ತಲುಪಿಸಲಿಲ್ಲ. ಇದರ ಬಗ್ಗೆ ರೆಸ್ಟೋರೆಂಟ್‌ಗೆ ತಿಳಿಸಿದಾಗ, ಅವರು ಸಂಜೆ ಪ್ರತಿಕ್ರಿಯಿಸಿ ಕ್ಷಮೆಯಾಚಿಸಿದರು. ಹಣವನ್ನು ಹಿಂದಿರುಗಿಸುವುದಾsಗಿ ತಿಳಿಸಿದರು. ಆದರೆ ಅತಿಥಿಗಳ ಮುಂದೆ ಮುಜುಗರವಾಗಿದ್ದಕ್ಕಾಗಿ ಪರಿಹಾರ ಪಡೆಯಲು ಗ್ರಾಹಕರ ಕೋರ್ಟ್ ಮೊರೆ ಹೋಗಿದ್ದಾರೆ.
ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದಲ್ಲಿ ರೆಸ್ಟೋರೆಂಟ್ ಸೇವೆಯಲ್ಲಿ ನ್ಯೂನತೆ ಕಂಡು ಬಂದಿದೆ ಎಂದು ನಿರ್ಣಯಿಸಿದೆ. ಹಾಗಾಗಿ ರೆಸ್ಟೋರೆಂಟ್‌ಗೆ ದೂರುದಾರರ ಭೋಜನಕ್ಕಾಗಿ ನೀಡಿದ್ದ 1,295 ಹಣವನ್ನು ಮರುಪಾವತಿ ಮಾಡಬೇಕು. ಸೇವೆಯಲ್ಲಿನ ಕೊರತೆ ಮತ್ತು ಮಾನಸಿಕ ಸಂಕಟಕ್ಕೆ ಪರಿಹಾರವಾಗಿ ಆಕೆಗೆ 40,000 ಹಾಗೂ ಕೋರ್ಟ್ ವೆಚ್ಚವಾಗಿ 5,000 ರೂಪಾಯಿಯನ್ನು ಪಾವತಿಸುವಂತೆ ಆದೇಶ ನೀಡಿದೆ.