ಐದು ವರ್ಷಗಳ ಹಿಂದೆ ಸಿನಿಮಾ ಹಾಲ್ನಲ್ಲಿ ಸಿನಿಮಾ ನೋಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಇಲಿ ಕಚ್ಚಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕರ ಆಯೋಗ ಪರಿಹಾರ ಧನವಾಗಿ ಮಹಿಳೆಗೆ ಒಟ್ಟು 67 ಸಾವಿರ ನೀಡುವಂತೆ ಚಿತ್ರಮಂದಿರಕ್ಕೆ ಸೂಚಿಸಿದೆ. ಅಕ್ಟೋಬರ್ 20, 2018 ರಂದು, ಮಹಿಳೆ ತಮ್ಮ ಕುಟುಂಬಸ್ಥರೊಂದಿಗೆ ಜಿಲ್ಲೆಯ ಭಂಗಾಗರ್ ಪ್ರದೇಶದ ಗಲೇರಿಯಾ ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಲು 9 ಗಂಟೆ ಶೋಗೆ ಹೋಗಿದ್ದರು. ಸಿನಿಮಾ ಇಂಟರ್ವಲ್ ವೇಳೆ ಮಹಿಳೆ ಅವರ ಕಾಲಿಗೆ ಇಲಿ ಕಚ್ಚಿದೆ. ತಕ್ಷ ಅವರು ನೋಡಿದಾಗ ಕಾಲಲ್ಲಿ ರಕ್ತ ಸುರಿಯತೊಡಗಿದೆ.
ಸ್ವತಃ ಮಹಿಳೆ ಆಸ್ಪತ್ರೆಗೆ ಹೋಗಿದ್ದು, ಆಕೆಯನ್ನು ಎರಡು ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಯಿತು, ಏಕೆಂದರೆ ವೈದ್ಯರು ಆರಂಭದಲ್ಲಿ ಅವರಿಗೆ ಕಚ್ಚಿರುವುದು ಏನು ಎಂಬುದು ಖಚಿತವಾಗಿಲ್ಲ. ನಂತರ ಆಕೆಗೆ ಇಲಿ ಕಡಿತಕ್ಕೆ ಚಿಕಿತ್ಸೆ ನೀಡಲಾಗಿದೆ ಎಂದು ಮಹಿಳೆ ವಕೀಲೆ ಅನಿತಾ ವರ್ಮಾ ತಿಳಿಸಿದ್ದಾರೆ. ಸಂತ್ರಸ್ತೆ ತನ್ನ ವೈದ್ಯಕೀಯ ಚಿಕಿತ್ಸೆಯ ವೆಚ್ಚ ಮತ್ತು ತಾವು ಅನುಭವಿಸಿದ ಮಾನಸಿಕ ವೇದನೆ, ನೋವು ಮತ್ತು ಸಂಕಟಕ್ಕಾಗಿ 6 ಲಕ್ಷ ರೂಪಾಯಿ ಪರಿಹಾರವನ್ನು ಕೋರಿ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.
ಆದರೆ ಗಲೇರಿಯಾ ಚಿತ್ರಮಂದಿರವು ಮಹಿಳೆಯ ಆರೋಪಗಳನ್ನು ವಿರೋಧಿಸಿತ್ತು. ಸಿನಿಮಾ ಆವರಣದೊಳಗೆ ಆಡಳಿತ ಮಂಡಳಿ ಸರಿಯಾದ ನೈರ್ಮಲ್ಯವನ್ನು ನಿರ್ವಹಿಸುತ್ತದೆ. ಅಲ್ಲದೆ ಮಹಿಳೆಗೆ ಅಂದು ಪ್ರಥಮ ಚಿಕಿತ್ಸೆ ನೀಡುವುದಕ್ಕೆ ಬಂದಾಗ ಆಕೆ ನಿರಾಕರಿಸಿದರು ಎಂದು ಹೇಳಿತ್ತು. ಗಲೇರಿಯಾ ಸಿನಿಮಾ ದೂರನ್ನು ತಿರಸ್ಕರಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿ, 15,000 ರೂಪಾಯಿಗಳ ಕೋರ್ಟ್ ವೆಚ್ಚವನ್ನು ಕೋರಿತ್ತು.