ರಾಹುಲ್ ಗಾಂಧಿ ನೇತೃತ್ವದ್ಲಿ ಕಾಂಗ್ರೆಸ್ ನಡೆಸಿದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾದ ಬೆನ್ನಲ್ಲೇ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವನ್ನು ಪ್ರಾರಂಭಿಸಲು ಪಕ್ಷ ಸಜ್ಜಾಗಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸುಮಾರು 4000 ಕಿಮೀ ಪಾದಯಾತ್ರೆ ಮಾಡಲಾಗಿತ್ತು. ಇದೀಗ ಲೋಕ ಸಭಾ ಚುನಾವಣೆಗೂ ಮುನ್ನ ಎರಡನೇ ಹಂತದಲ್ಲಿ ಮತ್ತೊಂದು ಯಾತ್ರೆ ನಡೆಸಲು ಪಕ್ಷ ತಯಾರಿ ನಡೆಸಿದೆ ಎಂದು ಪಕ್ಷದ ಸಂವಹನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿಕೆ ನೀಡಿದ್ದಾರೆ.