ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆಯಿಂದ ತೆರವಾಗಿರುವ ಪಂಜಾಬ್ ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಅಚ್ಚರಿಯ ಹೆಸರು ಘೋಷಿಸಿದೆ. ನವಜೋತ್ ಸಿಂಗ್ ಸಿಧು ಮತ್ತು ಸುಖಜಿಂದರ್ ಸಿಂಗ್ ರಾಂಧವ ಹೆಸರು ಸಿಎಂ ಸ್ಥಾನಕ್ಕೆ ದಟ್ಟವಾಗಿ ಕೇಳಿಬರುತ್ತಿತ್ತು. ಆದರೆ, ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಚರಣ್ಜೀತ್ ಸಿಂಗ್ ಚನ್ನಿ ಅವರನ್ನ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದೆ.
ಚರಣಜಿತ್ ಸಿಂಗ್ ಚನ್ನಿಯ ಅವರನ್ನು ವಿಧಾನಸಭಾ ಚುನಾವಣೆಗೆ ಕೇವಲ ಬಾಕಿ ಇರುವಂತೆ ಆಯ್ಕೆ ಮಾಡಲಾಗಿದೆ. ಪಂಜಾಬ್ ರಾಜ್ಯದಲ್ಲಿ ಸುಮಾರು 32 ಪ್ರತಿಶತ ದಲಿತ ಜನಸಂಖ್ಯೆಯನ್ನು ಹೊಂದಿರುವುದರಿಂದ ಅವರ ಆಯ್ಕೆ ಪ್ರಾಮುಖ್ಯತೆ ಪಡೆದಿದೆ. ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದರೆ, ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಬಿಜೆಪಿ ಈ ಹಿಂದೆ ಘೋಷಿಸಿತ್ತು, ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಸ್‌ಎಡಿ ತನ್ನ ಉಪ ಮುಖ್ಯಮಂತ್ರಿಯು ದಲಿತ ಎಂದು ಹೇಳಿತ್ತು. (ಚಿತ್ರ: ಪಿಟಿಐ)
ಚರಣಜಿತ್ ಸಿಂಗ್ ಚನ್ನಿ ಅವರು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಬಲವಾದ ಬೆಂಬಲ ಪಡೆದಿದ್ದಾರೆ ಎಂದು ನಂಬಲಾಗಿದೆ, ಭಾನುವಾರ ಸಂಜೆ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚನ್ನಿ ಅವರು ಸರ್ವಾನುಮತದಿಂದ ಸಿಎಲ್‌ಪಿ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. (ಚಿತ್ರ: ಪಿಟಿಐ)
ನವಜೋತ್ ಸಿಂಗ್ ಸಿಧು ಅವರೂ ಸಿಎಂ ಸ್ಥಾನಕ್ಕೆ ಪ್ರಯತ್ನಿಸಿದ್ದರು. ಗಾಂಧಿ ಕುಟುಂಬಕ್ಕೆ ನಿಕಟವಾಗಿರುವ ಸಿಧು ಅವರಿಗೆ ಸಿಎಂ ಸ್ಥಾನ ಸದ್ಯಕ್ಕೆ ಸಿಗಲಿಲ್ಲವಾದರೂ ಮುಂದಿನ ದಿನಗಳಲ್ಲಿ ಪಂಜಾಬ್ ಅಧಿಕಾರದಲ್ಲಿ ಅವರ ಪಾತ್ರ ಮಹತ್ತರ ಇರಲಿದೆ. ಸಿಧು ಅವರ ಆಪ್ತರೊಬ್ಬರ ಪ್ರಕಾರ, ಪಂಜಾಬ್ ಕಾಂಗ್ರೆಸ್ನಲ್ಲಿ ಯಾರು ಬಾಸ್ ಎಂಬುದು ಈಗ ಸ್ಪಷ್ಟವಾಗಿದೆ. ಯಾರೇ ಸಿಎಂ ಆಗಲಿ ಸಿಧು ಅವರೇ ಮ್ಯಾನ್ ಆಫ್ ದ ಮ್ಯಾಚ್ ಆಗುತ್ತಾರೆ ಎಂದು ಕೆಲ ಹೊತ್ತಿನ ಮೊದಲು ಹೇಳಿದ್ದರು.