ಯಾರೇ ಆದರೂ ಕೂಡ ಜನರ ಬಳಿ ಹೋಗಿ ಮಾತನಾಡಿದಾಗ ಹೊಸ, ಹೊಸ ವಿಚಾರಗಳು ತಿಳಿದುಕೊಳ್ಳುತ್ತಾರೆ. ನಿಜವಾದ ಜೀವನ ಏನು ಎಂದು ಅರಿತುಕೊಳ್ಳುತ್ತಾರೆ. ಏಕೆಂದರೆ ಜನರ ಕಷ್ಟಗಳನ್ನು ನೋಡುತ್ತಾರೆ. ಹೀಗಾಗಿ ಅವರ ಬಾಹ್ಯ ಆಸಕ್ತಿಗಳನ್ನು ಕಳೆದುಕೊಳ್ಳುತ್ತಾರೆ. ತತ್ತ್ವಶಾಸ್ತ್ರವನ್ನು ಕಲಿತ ನಂತರ ಅವರು ತಪಸ್ವಿ ಜೀವನದ ಬಗ್ಗೆ ಆಸಕ್ತಿ ಹೊಂದುತ್ತಾರಂತೆ. ಹಾಗೆಯೇ ಸದ್ಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಸ್ಥಿತಿಯೂ ಆಗಿದೆ.
ಭಾರತ್ ಜೋಡೋ ಯಾತ್ರೆಗೂ ಮುನ್ನ ರಾಹುಲ್ ಗಾಂಧಿ ಗಡ್ಡ ಬಿಟ್ಟಿರಲಿಲ್ಲ. ಈ ಯಾತ್ರೆ ಕೈಗೊಂಡ ನಂತರ ಗಡ್ಡ ಬಿಡಲು ಆರಂಭಿಸಿದ್ದಾರೆ. ಅಲ್ಲದೇ ಅವರ ಬಗ್ಗೆ ಕೂಡ ಯೋಚಿಸುವುದನ್ನು ನಿಲ್ಲಿಸಿದ್ದಾರೆ. ಹೊರ ಸೌಂದರ್ಯಕ್ಕೆ ಗುಡ್ ಬೈ ಹೇಳಿ, ವಿವಿಧ ರಾಜ್ಯಗಳಲ್ಲಿ ಸಂಚರಿಸುತ್ತಿದ್ದಾರೆ. ಎಲ್ಲ ಸಮುದಾಯದ ಜನರನ್ನು ಭೇಟಿ ಮಾಡಿ ಸಾಗುತ್ತಿದ್ದಾರೆ. ಇದೇ ರೀತಿ ಭಾನುವಾರ ಸಂಜೆ ಧರ್ಮನಗರಿಯ ಕುರುಕ್ಷೇತ್ರ ತಲುಪಿದ ರಾಹುಲ್ ಗಾಂಧಿ ಅವರು, ಕುರುಕ್ಷೇತ್ರದ ಬ್ರಹ್ಮ ಸರೋವರದಲ್ಲಿ ತಮ್ಮ ಹರಕೆಯನ್ನು ತೀರಿಸಿದರು. ಈ ವೇಳೆ ಸನ್ಯಾಸಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.