ಭೀಕರ ಬಸ್ ಅಪಘಾತದಲ್ಲಿ 20 ಪ್ರಯಾಣಿಕರು ಮೃತಪಟ್ಟ ದುರ್ಘಟನೆ ನಡೆದಿದೆ.
2/ 7
ನೈಋತ್ಯ ಕೊಲಂಬಿಯಾದ ಹೆದ್ದಾರಿಯೊಂದರಲ್ಲಿ ಶನಿವಾರ ಬಸ್ ಪಲ್ಟಿಯಾಗಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ
3/ 7
ಈ ಭೀಕರ ಅಪಘಾತದಲ್ಲಿ 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
4/ 7
ಘಟನೆ ಸಂಭವಿಸಿದಾಗ ಬಸ್ ಕೊಲಂಬಿಯಾದ ನೈಋತ್ಯ ಮೂಲೆಯಲ್ಲಿರುವ ಟುಮಾಕೊದ ಬಂದರು ನಗರ ಮತ್ತು ಕ್ಯಾಲಿ ನಡುವೆ ಪ್ರಯಾಣಿಸುತ್ತಿತ್ತು.
5/ 7
ದುರದೃಷ್ಟವಶಾತ್ ಈ ಅಪಘಾತದಲ್ಲಿ 20 ಜನರು ಮೃತಪಟ್ಟಿದ್ದಾರೆ ಎಂದು ನರಿನೋ ವಿಭಾಗದ ಟ್ರಾಫಿಕ್ ಪೋಲೀಸ್ ಕ್ಯಾಪ್ಟನ್ ಆಲ್ಬರ್ಟ್ಲ್ಯಾಂಡ್ ಅಗುಡೆಲೊ ಖಚಿತಪಡಿಸಿದ್ದಾರೆ.
6/ 7
ಗಾಯಗೊಂಡವರಲ್ಲಿ ಮೂರು ವರ್ಷದ ಬಾಲಕಿ ಮತ್ತು ಎಂಟು ವರ್ಷದ ಬಾಲಕ ಸೇರಿದ್ದಾರೆ.
7/ 7
ಬ್ರೇಕ್ ವ್ಯವಸ್ಥೆಯಲ್ಲಿ ಯಾಂತ್ರಿಕ ವೈಫಲ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರದೇಶದ ಸಂಚಾರ ಮತ್ತು ಸಾರಿಗೆ ನಿರ್ದೇಶಕ ಕರ್ನಲ್ ಆಸ್ಕರ್ ಲ್ಯಾಂಪ್ರಿಯಾ ಸುದ್ದಿಗಾರರಿಗೆ ಸಂದೇಶದಲ್ಲಿ ತಿಳಿಸಿದ್ದಾರೆ.