Yogi Adityanath Assets: ಯೋಗಿ ಆದಿತ್ಯನಾಥ್ ಆಸ್ತಿ ಘೋಷಣೆ; ಇಲ್ಲಿದೆ ವಿವರ
ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ( Yogi Adityanath) ಇಂದು ನಾಮಪತ್ರ (Nomination) ಸಲ್ಲಿಸಿದರು. ಇದೇ ವೇಳೆ ತಮ್ಮ ಆಸ್ತಿ ಘೋಷಣೆಯನ್ನು ಅವರು ಮಾಡಿದ್ದಾರೆ
ಇಂದು ಸಿಎಂ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶಧ ಗೋರಖ್ ಪುರ (Gorakhpur) ನಗರ ಕ್ಷೇತ್ರಕ್ಕೆ ಅವರು ಚುನಾವಣಾ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಜೊತೆಗಿದ್ದರು
2/ 6
ಇದಕ್ಕೂ ಮುನ್ನ ಅವರು ಗೋರಾಖ್ಪುರದ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರುದ್ರಾಭಿಷೇಕ ಮತ್ತು ಹವನ ನಡೆಸಿದರು.
3/ 6
ಇನ್ನು ನಾಮಪತ್ರ ಸಲ್ಲಿಸಿದ ಅವರು ಇದೇ ವೇಳೆ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ. ಐದು ಬಾರಿ ಸಂಸದರು ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅವರ ಆಸ್ತಿ ವಿವರಣೆ ಹೀಗಿದೆ
4/ 6
ಅವರ ಒಟ್ಟು ಆಸ್ತಿ ಮೌಲ್ಯ 1 ಕೋಟಿ 54 ಲಕ್ಷ 94 ಸಾವಿರದ 54 ಎಂದು ತಮ್ಮ ಅಫಿಡೆವಿಟ್ನಲ್ಲಿ ತಿಳಿಸಿದ್ದಾರೆ. ಲಕ್ನೋ ಮತ್ತು ಗೋರಖ್ಪುರದಲ್ಲಿ 6 ವಿವಿಧ ಬ್ಯಾಂಕ್ಗಳಲ್ಲಿ 11 ಖಾತೆಗಳಿವೆ. ಈ ಖಾತೆಗಳಲ್ಲಿ ಸುಮಾರು 1 ಕೋಟಿ 13 ಲಕ್ಷ 75 ಸಾವಿರ ರೂ. ಇದೆ ಎಂದು ತಿಳಿಸಿದ್ದಾರೆ.
5/ 6
ಸಿಎಂ ಯೋಗಿ ಆದಿತ್ಯನಾಥ್ ಬಳಿ ಜಮೀನು ಮತ್ತು ಮನೆ ಇಲ್ಲ. ರಾಷ್ಟ್ರೀಯ ಉಳಿತಾಯ ಯೋಜನೆಗಳು ಮತ್ತು ವಿಮಾ ಪಾಲಿಸಿಗಳ ಮೂಲಕ ಅವರು 37.57 ಲಕ್ಷ ರೂ. ಹೂಡಿಕೆ ಮಾಡಲಾಗಿದೆ ಎಂದು ಘೋಷಿಸಿದ್ದಾರೆ
6/ 6
ಜೊತೆಗೆ ತಮ್ಮ ಬಳಿ ಎರಡು ಅಸ್ತ್ರಗಳು ಇವೆ. 1 ಲಕ್ಷ ಮೌಲ್ಯದ ರಿವಾಲ್ವರ್ ಹಾಗೂ 80 ಸಾವಿರ ಮೌಲ್ಯದ ರೈಫಲ್ ಇತ್ತು ಇದೆ ಎಂದು ಸ್ಪಷ್ಟಪಡಿಸಿದ್ದಾರೆ