ಚುನಾವಣೆ ಹಿನ್ನಲೆ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ; 1 ರೂಗೆ ಮನೆ ಘೋಷಿಸಿದ Yogi Adityanath
ವಿಧಾನಸಭಾ ಚುನಾವಣೆ (Uttar Pradesh Election) ಹೊಸ್ತಿಲಲ್ಲಿ ಇರುವ ಉತ್ತರ ಪ್ರದೇಶದಲ್ಲಿ ಸರ್ಕಾರಿ ನೌಕರು ಮತ್ತು ವಕೀಲರಿಗೆ ಭರ್ಜರಿ ಉಡುಗೊರೆಯನ್ನು ನೀಡಿ ಘೋಷಣೆ ಹೊರಡಿಸಲಾಗಿದೆ. ಗ್ರೂಪ್ ಸಿ ಮತ್ತು ಡಿ ವರ್ಷದ ಸರ್ಕಾರಿ ನೌಕರರು (Govt Employees) ಮತ್ತು ವಕೀಲರಿಗೆ (Lawyers) 1 ರೂಗೆ ಮನೆ ಮಂಜೂರು ಮಾಡಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ (CM Yogi Adityanath) ಘೋಷಣೆ ಹೊರಡಿಸಿದ್ದಾರೆ.
ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಮುನ್ನ ಯೋಗಿ ಸರ್ಕಾರ ದೊಡ್ಡ ಯೋಜನೆ ರೂಪಿಸುತ್ತಿದ್ದು, ಈ ಮೂಲಕ ಮತಗಳ ಸೆಳೆಯಲು ತಯಾರಿ ನಡೆಸಿದೆ. ಉತ್ತರ ಪ್ರದೇಶ ಸರ್ಕಾರವು ಲಕ್ಷಾಂತರ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಿಗಳು ಮತ್ತು ವಕೀಲರಿಗೆ ಸಬ್ಸಿಡಿ ಮನೆಗಳನ್ನು ಒದಗಿಸಲು ಮುಂದಾಗಿದೆ.
2/ 5
ಈ ಯೋಜನೆಯಲ್ಲಿ, ಕೇವಲ ಒಂದು ರೂಪಾಯಿಯನ್ನು ಮನೆ ಖರೀದಿದಾರರಿಂದ ಭೂಮಿಯ ನಾಮಮಾತ್ರ ಮೌಲ್ಯವಾಗಿ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ, ರಿಯಾಯಿತಿ ನೀಡಲಾಗುವುದು ಎಂಬ ಷರತ್ತಿನ ಮೇಲೆ ಖರೀದಿದಾರರು 10 ವರ್ಷಗಳವರೆಗೆ ಅದನ್ನು ಮಾರಾಟ ಮಾಡುವಂತೆ ಕೂಡ ಇಲ್ಲ
3/ 5
ಮೂಲಗಳ ಪ್ರಕಾರ ಉನ್ನತ ಮಟ್ಟದ ಸಭೆಯಲ್ಲಿ ಕರಡು ಸಿದ್ಧಪಡಿಸಲಾಗಿದೆ. ಹಿರಿಯ ಮಟ್ಟದಲ್ಲಿ ಅನುಮೋದನೆ ಪಡೆದ ನಂತರ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆ ದೊರೆಯಲಿದೆ.
4/ 5
ಸಚಿವ ಸಂಪುಟದಲ್ಲಿ ನಿರ್ಣಯ ಅಂಗೀಕರಿಸಿದ ನಂತರವೇ ಈ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ. ಪ್ರಸ್ತುತ ಗ್ರೂಪ್ 'ಸಿ' ಮತ್ತು 'ಡಿ' ಉದ್ಯೋಗಿಗಳಿಗೆ ಸಬ್ಸಿಡಿ ವಸತಿಗೆ ಯಾವುದೇ ಅವಕಾಶವಿಲ್ಲ
5/ 5
ಪ್ರಸ್ತುತ, ಉತ್ತರ ಪ್ರದೇಶದಲ್ಲಿ ಸಿ ಮತ್ತು ಡಿ ಗುಂಪಿನ ವಕೀಲರಿಗೆ ಸಬ್ಸಿಡಿ ವಸತಿಗೆ ಯಾವುದೇ ಹೊಂದಲು ಅವಕಾಶವಿಲ್ಲ. ಗ್ರೂಪ್ ಸಿ ಮತ್ತು ಡಿ ಕೆಲಸಗಾರರು ಮತ್ತು ಕಡಿಮೆ ಆದಾಯ ಹೊಂದಿರುವ ವಕೀಲರು ಮನೆ ಹುಡುಕಲು ಕಷ್ಟಪಡುತ್ತಾರೆ. ಆದ್ದರಿಂದ ಅವರಿಗೆ ಅನುದಾನಿತ ಮನೆ ನೀಡುವ ಕುರಿತು ಚರ್ಚಿಸಿ ಕರಡು ರೂಪಿಸಲಾಗಿದೆ.