ಈ ತನಿಖಾ ವರದಿಯು ಪ್ರಕಟಗೊಳ್ಳುತ್ತಲೇ, ನ್ಯೂ ಜೆರ್ಸಿ ನಗರವು ಕೈಲಾಸ ರಾಷ್ಟ್ರದೊಂದಿಗೆ ತಾನು ಮಾಡಿಕೊಂಡಿದ್ದ ಸಿಸ್ಟರ್- ಸಿಟಿ ಒಪ್ಪಂದವನ್ನು ರದ್ದುಗೊಳಿಸಿದೆ. ನೇವಾರ್ಕ್ ನಲ್ಲಿ ಇದೇ ಜ. 12ರಂದು ನಡೆದಿದ್ದ ಸಮಾರಂಭದಲ್ಲಿ ನ್ಯೂ ಜೆರ್ಸಿ ನಗರ ಪಾಲಿಕೆಯ ಅಧಿಕಾರಿಗಳು ಕೈಲಾಸ ರಾಷ್ಟ್ರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇನ್ನುಳಿದ ನಗರಗಳು ಕೈಲಾಸ ರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿವೆ.
ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ನಾರ್ತ್ ಕರೊಲಿನಾ ನಗರದ ಅಧಿಕಾರಿಗಳು ಹೇಳಿರುವ ಈ ಹೇಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನಾವು ಇಂಥ ರಾಷ್ಟ್ರದವರು ಎಂದು ಯಾರು ಬಂದರೂ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆಯೇ? ಕನಿಷ್ಟ ಗೂಗಲ್‌ನಲ್ಲಿ ಇಂಥ ರಾಷ್ಟವಿದೆಯೇ ಎಂದು ಸರ್ಚ್ ಕೊಟ್ಟಾದರೂ ಒಮ್ಮೆ ಅವಲೋಕನ ಮಾಡಲು ಆಗುವುದಿಲ್ಲವೇ ಎಂದು ಫಾಕ್ಸ್ ನ್ಯೂಸ್ ಹೇಳಿದೆ.