ಹಲವು ದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ತುಂಬಾ ಕಾಡುತ್ತಿದೆ. ಜನರು ಕೇವಲ ಕೆಲಸ ಮತ್ತು ಒಳ್ಳೆಯ ಪ್ಯಾಕೇಜ್ ಸಿಕ್ಕರೆ ಎಲ್ಲಿ ಬೇಕಾದರೂ ಹೋಗಲು ಸಿದ್ಧರಾಗಿದ್ದಾರೆ. ಆದರೆ ಇಲ್ಲೊಂದು ಕೆಲಸ ಖಾಲಿ ಇದ್ದು, ಯಜಮಾನಿಯ ಮನೆಯಲ್ಲಿ ಉಳಿದುಕೊಂಡು ಕೆಲಸ ನಿರ್ವಹಿಸಿದರೆ ವಾರ್ಷಿಕವಾಗಿ 2 ಕೋಟಿ ರೂಪಾಯಿಗಳನ್ನು ನೀಡುತ್ತಾರೆ. ಆದರೆ ಆ ಕೆಲಸಕ್ಕೆ ನೀಡಲಾಗಿರುವ ಷರತ್ತುಗಳ ನೋಡಿದರೆ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಜನರು ನೂರು ಬಾರಿ ಯೋಚಿಸುತ್ತಾರೆ. (ಸಾಂದರ್ಭಿಕ ಚಿತ್ರ)
ಈ ಹುದ್ದೆಗೆ ಜಾಹೀರಾತು ನೀಡಲಾಗಿದೆ. ಜಾಹೀರಾತಿನ ಪ್ರಕಾರ, ಸೇವಕಿಗೆ ತಿಂಗಳಿಗೆ 1,644,435.25 ರೂಪಾಯಿ ಸಂಬಳ ಫಿಕ್ಸ್ ಮಾಡಲಾಗಿದೆ. ಅಂದರೆ ಒಂದು ವರ್ಷಕ್ಕೆ 1.97 ಕೋಟಿ ರೂಪಾಯಿಗಳ ಪ್ಯಾಕೇಜ್ ಇದಾಗಿದೆ. ಈ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಇನ್ನೂ ಕೆಲವು ಷರತ್ತುಗಳಿವೆ. ಅರ್ಜಿದಾರರ 165 ಸೆಂ.ಮೀ ಎತ್ತರ ಹೊಂದಿರಬೇಕು, ಆದರೆ ತೂಕವು 55 ಕೆಜಿಗಿಂತ ಕಡಿಮೆ ಇರಬೇಕು. (ಸಾಂದರ್ಭಿಕ ಚಿತ್ರ)
ಇನ್ನೂ ಈ ದಾಸಿಯರು ಯಜಮಾನಿಯ ಪಾದದಿಂದ ಪಾದರಕ್ಷೆಗಳನ್ನು ತೆಗೆದು ಹಾಕುವ ಕೆಲಸವನ್ನು ಮಾಡಬೇಕಾಗಿರುವುದರಿಂದ ಕೆಲಸ ಮಾಡುವವರಿಗೆ ಯಾವುದೇ ಆತ್ಮಗೌರವ ಎಂಬುದು ಇರಬಾರದು. ಕೇಳಿದಾಗಲೆಲ್ಲಾ ಜ್ಯೂಸ್, ಹಣ್ಣು, ನೀರು ಕೊಡಬೇಕಾಗುತ್ತದೆ. ಆಕೆ ಹೊರಗೆ ಬರುವಾಗ ಗೇಟ್ನಲ್ಲಿ ಬಂದು ಕಾಯುತ್ತಿರಬೇಕು. ಆಕೆಯ ಒಂದು ಸಿಗ್ನಲ್ಗೆ ಬಟ್ಟೆಗಳನ್ನು ಸಹ ಬದಲಾಯಿಸಬೇಕು ಎಂಬೆಲ್ಲಾ ಷರತ್ತುಗಳಿವೆ. (ಸಾಂದರ್ಭಿಕ ಚಿತ್ರ)