ಚೀನಾದಲ್ಲಿ ಮತ್ತೆ ಕೋವಿಡ್ 19 ರ ಆರ್ಭಟ ಹೆಚ್ಚುತ್ತಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬರುತ್ತಿದೆ. (ಸಾಂದರ್ಭಿಕ ಚಿತ್ರ)
2/ 8
ನವೆಂಬರ್ 26 ರಂದು ಚೀನಾದಲ್ಲಿ 39,791 ನಾಗರಿಕರಲ್ಲಿ ಹೊಸದಾಗಿ COVID-19 ಪತ್ತೆಯಾಗಿದೆ. (ಸಾಂದರ್ಭಿಕ ಚಿತ್ರ)
3/ 8
ಅದರಲ್ಲಿ 3,709 ಜನರಲ್ಲಿ ರೋಗಲಕ್ಷಣಗಳು ಕಂಡುಬಂದಿದ್ದು, 36,082 ಸೋಂಕಿತರಲ್ಲಿ ರೋಗಲಕ್ಷಣಗಳಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ತಿಳಿಸಿದೆ. (ಸಾಂದರ್ಭಿಕ ಚಿತ್ರ)
4/ 8
ಒಂದು ದಿನದ ಹಿಂದಷ್ಟೇ ಚೀನಾದಲ್ಲಿ 35,183 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದವು. (ಸಾಂದರ್ಭಿಕ ಚಿತ್ರ)
5/ 8
ಹೀಗೆ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಚೀನಾದಲ್ಲಿ ಮತ್ತೆ ಲಾಕ್ಡೌನ್ ಹೇರಲಾಗುತ್ತಿದೆ. ಸಾಮೂಹಿಕ ಕೊವಿಡ್ 19 ಪರೀಕ್ಷೆ, ಪ್ರಯಾಣ ನಿರ್ಬಂಧಗಳು ಮತ್ತು ಇತರ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)
6/ 8
[caption id="attachment_742453" align="alignnone" width="1600"] ಆದರೆ ಚೀನಾ ನಾಗರಿಕರು ಕೊವಿಡ್ ನಿರ್ಬಂಧಗಳ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಅಲ್ಲಲ್ಲಿ ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
[/caption]
7/ 8
ಲಾಕ್ಡೌನ್ಗಳು ಮತ್ತು ಹಲವಾರು ನಿರ್ಬಂಧಗಳು ಚೀನಾ ನಾಗರಿಕರನ್ನು ಕೆರಳಿಸಿದೆ. ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯೂ ದಟ್ಟವಾಗಿದೆ.
8/ 8
ಒಟ್ಟಾರೆ ಚೀನಾದಲ್ಲಿ ಇನ್ನಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗುವುದನ್ನು ತಡೆಯಲು ದಮನಕಾರಿ ಕ್ರಮಗಳನ್ನು ನಾಗರಿಕರ ಮೇಲೆ ಹೇರಲು ಅಲ್ಲಿನ ಸರ್ಕಾರ ಪ್ರಯತ್ನಿಸುತ್ತಿದೆ.