China Corona Virus: ಮತ್ತೆ ಚೀನಾದಲ್ಲಿ ಮೊಳಗುತ್ತಿದೆ ಸಾವಿನ ಗಂಟೆ; ಒಂದು ವಾರದಲ್ಲಿ ಸತ್ತವರೆಷ್ಟು ಗೊತ್ತಾ?
China corona: ಪಾಸಿಟಿವ್ ಪ್ರಕರಣಗಳ ಜೊತೆಗೆ, ವೈರಸ್ ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಕೆಲವೇ ದಿನಗಳಲ್ಲಿ ಸಾವಿನ ಸಂಖ್ಯೆಯೂ ಅಷ್ಟೇ ವೇಗವಾಗಿ ಏರಿಕೆಯಾಗುತ್ತಿದೆ. ಕೊರೊನಾ ವೈರಸ್ಗೆ ಮೊದಲ ಜನ್ಮ ನೀಡಿದ ದೇಶದಲ್ಲಿ ಮತ್ತೆ ಮರಣದಂಡನೆ ಆರಂಭವಾಗಿದೆ.
ಕೊರೊನಾ ಸಾವುಗಳು ಡ್ರ್ಯಾಗನ್ ದೇಶವನ್ನು ಮತ್ತೆ ಬೆಂಬಿಡದೇ ಕಾಡುತ್ತಿದೆ. ರೂಪಾಂತರಿ ವೈರಸ್ ಜನರಿಗೆ ಹರಡುತ್ತಿರುವುದರಿಂದ ಲಕ್ಷಾಂತರ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಲೇ ಇವೆ. (ಸಾಂಕೇತಿಕ ಚಿತ್ರ)
2/ 8
ಪಾಸಿಟಿವ್ ಪ್ರಕರಣಗಳ ಜೊತೆಗೆ, ವೈರಸ್ ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಕೆಲವೇ ದಿನಗಳಲ್ಲಿ ಸಾವಿನ ಸಂಖ್ಯೆಯೂ ಅಷ್ಟೇ ವೇಗವಾಗಿ ಏರಿಕೆಯಾಗುತ್ತಿದೆ. ಕೊರೊನಾ ವೈರಸ್ಗೆ ಮೊದಲ ಜನ್ಮ ನೀಡಿದ ದೇಶದಲ್ಲಿ ಮತ್ತೆ ಮರಣದಂಡನೆ ಆರಂಭವಾಗಿದೆ. (ಸಾಂಕೇತಿಕ ಚಿತ್ರ)
3/ 8
ಚೀನಾದ ಆರೋಗ್ಯ ಸಚಿವಾಲಯವು ಕೇವಲ ಒಂದು ವಾರದಲ್ಲಿ ಕೊರೊನಾದ ಹೊಸ ರೂಪಾಂತರವಾದ ಓಮಿಕ್ರಾನ್ ಬಿಎಫ್ -7 ನಿಂದ 13 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸಿದೆ. ಕೊರೊನಾ ಪ್ರಕರಣಗಳು, ಸಾವುಗಳು, ಮಾತ್ರವಲ್ಲದೇ ಸೋಂಕಿನ ಪ್ರಮಾಣವೂ ಅತ್ಯಧಿಕ ಮಟ್ಟದಲ್ಲಿದೆ. (ಸಾಂಕೇತಿಕ ಚಿತ್ರ)
4/ 8
ಚೀನಾದಲ್ಲಿ ಇಂತಹ ಭೀಕರ ಸನ್ನಿವೇಶಗಳು ಹುಟ್ಟಿಕೊಂಡಿರುವುದರಿಂದ ಅಲ್ಲಿನ ಆರೋಗ್ಯಾಧಿಕಾರಿಗಳು ಜನರಿಗೆ ನೀಡುವ ಲಸಿಕೆಗಳ ಬಗ್ಗೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ. ಲಾಕ್ಡೌನ್ ತೆರವುಗೊಂಡಿದ್ದರಿಂದ ವೈರಸ್ ಏಕಾಏಕಿ ಸಂಭವಿಸಿದೆ ಎಂದು ನಂಬಲಾಗಿದೆ. (ಸಾಂಕೇತಿಕ ಚಿತ್ರ)
5/ 8
ಚೀನಾದಲ್ಲಿ Omicron BF-7 ನಿಂದ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜನವರಿ 12 ರವರೆಗೆ 60 ಸಾವಿರ ಜನರು ಸಾವನ್ನಪ್ಪಿದ್ದಾರೆ, ಕಳೆದ ವಾರದಲ್ಲಿ 13 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದರೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು. (ಸಾಂಕೇತಿಕ ಚಿತ್ರ)
6/ 8
ಕೇವಲ ಒಂದು ವಾರದ ಅವಧಿಯಲ್ಲಿ, ಕೊರೊನಾ ವೈರಸ್ನಿಂದ ಅಧಿಕಾರದಲ್ಲಿರುವವರು ಕೂಡ ಭಯಭೀತರಾಗಿದ್ದಾರೆ. ಅಲ್ಲದೇ ಒಂದು ವಾರದಲ್ಲಿ ಸಾವನ್ನಪ್ಪಿದ ಎಲ್ಲಾ 13,000 ಜನರು ಕೂಡ ಆಸ್ಪತ್ರೆಗಳಲ್ಲಿ ಪ್ರಾಣ ಕಳೆದುಕೊಂಡವರು ಎಂದು ಡ್ರ್ಯಾಗನ್ ಕಂಟ್ರಿ ಅಧಿಕಾರಿಗಳು ಹೇಳಿದ್ದಾರೆ. (ಸಾಂಕೇತಿಕ ಚಿತ್ರ)
7/ 8
ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹತ್ತು ಸಾವಿರ ದಾಟಿದರೆ ಮನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇನ್ನೂ ಹೆಚ್ಚಿರಲಿದೆ ಎನ್ನಲಾಗ್ತಿದೆ. ಚೀನಾದಲ್ಲಿರುವ ಜನರು ಹೊಸ ವರ್ಷಾಚರಣೆಗೆ ಊರಿಗೆ ಹೋಗಿದ್ದಾರೆ. (ಸಾಂಕೇತಿಕ ಚಿತ್ರ)
8/ 8
ಚೀನಾದಲ್ಲಿ ಪ್ರಸ್ತುತ ಸೋಂಕಿನ ಪ್ರಮಾಣವನ್ನು ನೋಡಿದರೆ, ಚೀನಾದ ಹೊಸ ವರ್ಷದ ಆಚರಣೆಯ ಮರುದಿನವೇ ಸಾವಿನ ಸಂಖ್ಯೆ 36,000 ತಲುಪುವುದರಲ್ಲಿ ಆಶ್ಚರ್ಯವಿಲ್ಲ ಎಂದು ಏರ್ಫಿನಿಟಿ ತನ್ನ ಅನುಮಾನ ವ್ಯಕ್ತಪಡಿಸಿದೆ. (ಸಾಂಕೇತಿಕ ಚಿತ್ರ)