Charishma Kaliyanda: ಆಸ್ಟ್ರೇಲಿಯಾ ಸಂಸದೆಯಾದ ಕೊಡಗಿನ ನಾರಿ; ವಿದೇಶದಲ್ಲೂ ಮರೆಯಲಿಲ್ಲ ಸ್ವದೇಶಿ ಸಂಸ್ಕೃತಿ

ಭಾರತೀಯರು ಅಂದ್ರೆನೇ ಹಾಗೆ. ಎಲ್ಲೇ ಹೋದರೂ ತಮ್ಮ ಅಸ್ಮಿತೆಯನ್ನು ಬಿಟ್ಟುಕೊಡಲ್ಲ. ತಾನು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ತನ್ನ ನೆಲದ ಸಂಸ್ಕೃತಿಯ ಘಮಲನ್ನೂ ತಾನಿರುವ ಜಾಗದಲ್ಲೂ ಪಸರಿಸುತ್ತಾರೆ. ಇದೀಗ ಅದಕ್ಕೆ ಸ್ಪಷ್ಟ ಉದಾಹರಣೆ ಈ ಉದಾಹರಣೆ.

First published:

  • 19

    Charishma Kaliyanda: ಆಸ್ಟ್ರೇಲಿಯಾ ಸಂಸದೆಯಾದ ಕೊಡಗಿನ ನಾರಿ; ವಿದೇಶದಲ್ಲೂ ಮರೆಯಲಿಲ್ಲ ಸ್ವದೇಶಿ ಸಂಸ್ಕೃತಿ

    ಹೌದು. ಚರಿಶ್ಮಾ ಕಳಿಯಾಂಡ ಅವರು ಮೂಲತಃ ಕೊಡಗಿನವರು. ಆಸ್ಟ್ರೇಲಿಯಾಕ್ಕೆ ಉದ್ಯೋಗದ ಕಾರಣಕ್ಕೆ ಕೆಲ ವರ್ಷಗಳ ಹಿಂದೆ ಹೋಗಿ ಅಲ್ಲಿನ ಪ್ರಜೆಯಾಗಿ ಸದಸ್ಯತ್ವವನ್ನು ಪಡೆದಿದ್ದ ಅವರು ಇದೀಗ ಆಸ್ಟ್ರೇಲಿಯಾದ ಸಂಸದರಾಗಿಯೂ ಆಯ್ಕೆಯಾಗಿದ್ದಾರೆ.

    MORE
    GALLERIES

  • 29

    Charishma Kaliyanda: ಆಸ್ಟ್ರೇಲಿಯಾ ಸಂಸದೆಯಾದ ಕೊಡಗಿನ ನಾರಿ; ವಿದೇಶದಲ್ಲೂ ಮರೆಯಲಿಲ್ಲ ಸ್ವದೇಶಿ ಸಂಸ್ಕೃತಿ

    ಕನ್ನಡತಿಯೊಬ್ಬರು ವಿದೇಶದಲ್ಲಿ ಸಂಸತ್‌ ಸದಸ್ಯೆಯಾಗಿ ಆಯ್ಕೆಯಾಗಿರೋದು ಹೆಮ್ಮೆಯ ಖುಷಿಯಾದರೆ ಸದ್ಯ ಚರಿಶ್ಮಾ ಕಳಿಯಾಂಡ ಅವರು ಇದೇ ವೇಳೆ ಮತ್ತೊಂದು ವಿಚಾರಕ್ಕೂ ಸುದ್ದಿಯಾಗಿದ್ದಾರೆ.

    MORE
    GALLERIES

  • 39

    Charishma Kaliyanda: ಆಸ್ಟ್ರೇಲಿಯಾ ಸಂಸದೆಯಾದ ಕೊಡಗಿನ ನಾರಿ; ವಿದೇಶದಲ್ಲೂ ಮರೆಯಲಿಲ್ಲ ಸ್ವದೇಶಿ ಸಂಸ್ಕೃತಿ

    ಹೌದು.. ಚರಿಶ್ಮಾ ಅವರು ಆಸ್ಟ್ರೇಲಿಯಾ ಸಂಸತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ವೇಳೆ ತನ್ನ ಹುಟ್ಟೂರು ಕೊಡಗಿನ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಬಂದಿರೋದು ಸಾಕಷ್ಟು ಸುದ್ದಿಯಾಗಿದೆ.

    MORE
    GALLERIES

  • 49

    Charishma Kaliyanda: ಆಸ್ಟ್ರೇಲಿಯಾ ಸಂಸದೆಯಾದ ಕೊಡಗಿನ ನಾರಿ; ವಿದೇಶದಲ್ಲೂ ಮರೆಯಲಿಲ್ಲ ಸ್ವದೇಶಿ ಸಂಸ್ಕೃತಿ

    ಮೂಲತಃ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಕಲಿಯಂಡ ಚರಿಷ್ಮಾ ಆಸ್ಟ್ರೇಲಿಯಾದ ಲಿವರ್ ಪೂಲ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

    MORE
    GALLERIES

  • 59

    Charishma Kaliyanda: ಆಸ್ಟ್ರೇಲಿಯಾ ಸಂಸದೆಯಾದ ಕೊಡಗಿನ ನಾರಿ; ವಿದೇಶದಲ್ಲೂ ಮರೆಯಲಿಲ್ಲ ಸ್ವದೇಶಿ ಸಂಸ್ಕೃತಿ

    ಕೊಡಗಿನ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಪ್ರಮಾಣ ವಚನ ಸ್ವೀಕಾರ ಮಾಡಿರೋದು ಇದೀಗ ಕೊಡಗಿನ ಪ್ರಜೆಗಳಲ್ಲಿ ಖುಷಿ ತರಿಸಿದೆ.

    MORE
    GALLERIES

  • 69

    Charishma Kaliyanda: ಆಸ್ಟ್ರೇಲಿಯಾ ಸಂಸದೆಯಾದ ಕೊಡಗಿನ ನಾರಿ; ವಿದೇಶದಲ್ಲೂ ಮರೆಯಲಿಲ್ಲ ಸ್ವದೇಶಿ ಸಂಸ್ಕೃತಿ

    ಚರಿಶ್ಮಾ ಕಳಿಯಾಂಡ ಅವರು ಕೊಡಗಿನ ಶೈಲಿಯ ಸೀರೆ ಧರಿಸಿ ಪ್ರಮಾಣ ವಚನಕ್ಕೆ ಸಂಸತ್‌ಗೆ ಬಂದು ಸಹಿ ಹಾಕುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    MORE
    GALLERIES

  • 79

    Charishma Kaliyanda: ಆಸ್ಟ್ರೇಲಿಯಾ ಸಂಸದೆಯಾದ ಕೊಡಗಿನ ನಾರಿ; ವಿದೇಶದಲ್ಲೂ ಮರೆಯಲಿಲ್ಲ ಸ್ವದೇಶಿ ಸಂಸ್ಕೃತಿ

    ಸಂಸತ್‌ ಸದಸ್ಯರಾದ ನಂತರ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್‌ ಮಾಡಿರುವ ಚರಿಶ್ಮಾ, ‘ನಿನ್ನೆ ನಾನು 58ನೇ ಸಂಸತ್ತಿನ ಮೊದಲ ಪ್ರಶ್ನೋತ್ತರ ಅವಧಿಯಲ್ಲಿ ನನ್ನ ಮೊದಲ ಪ್ರಶ್ನೆಯನ್ನು ಕೇಳಿದೆ’ ಎಂದಿದ್ದಾರೆ.

    MORE
    GALLERIES

  • 89

    Charishma Kaliyanda: ಆಸ್ಟ್ರೇಲಿಯಾ ಸಂಸದೆಯಾದ ಕೊಡಗಿನ ನಾರಿ; ವಿದೇಶದಲ್ಲೂ ಮರೆಯಲಿಲ್ಲ ಸ್ವದೇಶಿ ಸಂಸ್ಕೃತಿ

    ಅಲ್ಲದೇ ‘ಯಾವುದೇ ಸರ್ಕಾರಿ ಸಂಸ್ಥೆಗಳ ಖಾಸಗೀಕರಣವು ಜನ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ. ಖಾಸಗೀಕರಣ ನಮ್ಮ ರಾಜ್ಯದ (ಎನ್‌ಎಸ್‌ಡಬ್ಲ್ಯೂ) ಹಿತಾಸಕ್ತಿಗೆ ಒಳ್ಳೆಯದಲ್ಲ’ ಎಂದು ಸಂಸತ್‌ನಲ್ಲಿ ಖಾಸಗೀಕರಣ ವಿರುದ್ಧ ಚರಿಶ್ಮಾ ಮಾತನಾಡಿದ್ದಾರೆ.

    MORE
    GALLERIES

  • 99

    Charishma Kaliyanda: ಆಸ್ಟ್ರೇಲಿಯಾ ಸಂಸದೆಯಾದ ಕೊಡಗಿನ ನಾರಿ; ವಿದೇಶದಲ್ಲೂ ಮರೆಯಲಿಲ್ಲ ಸ್ವದೇಶಿ ಸಂಸ್ಕೃತಿ

    ‘ಖಾಸಗೀಕರಣವನ್ನು ತಕ್ಷಣವೇ ನಿಲ್ಲಿಸುವ ನನ್ನ ಭರವಸೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿಯವರನ್ನು ಕೇಳಿದೆ’ ಎಂದು ಚರಿಶ್ಮಾ ಪೋಸ್ಟ್ ಮಾಡಿದ್ದಾರೆ.

    MORE
    GALLERIES