PHOTOS: ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ: ಮಧ್ಯಾಹ್ನ 2.43ಕ್ಕೆ ನಭಕ್ಕೆ ಚಿಮ್ಮಲಿರುವ 'ಬಾಹುಬಲಿ' ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದೆನಿಸಿದ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಚಾಲನೆಯಲ್ಲಿದೆ. ಇವತ್ತು ಮಧ್ಯಾಹ್ನ 2:43ಕ್ಕೆ ಚಂದ್ರಯಾನ್-2 ಗಗನನೌಕೆ ಹೊತ್ತ ಜಿಎಸ್ಎಲ್ವಿ-MkIII-M1 ರಾಕೆಟ್ ನಭಕ್ಕೆ ಹಾರಲಿದೆ. ಇದು ಈ ಉಪಗ್ರಹ ಉಡಾವಣೆಗೆ ಇಸ್ರೋ ನಡೆಸುತ್ತಿರುವ ಎರಡನೇ ಪ್ರಯತ್ನವಾಗಿದೆ. News18 | July 22, 2019, 12:06 IST
1 / 10
ಭಾರತದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ.
2 / 10
ಜುಲೈ 15ರ ಮಧ್ಯರಾತ್ರಿಯಂದು ನಡೆದ ಮೊದಲ ಪ್ರಯತ್ನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಸ್ಥಗಿತಗೊಳಿಸಲಾಗಿತ್ತು.
3 / 10
ಇಂದು ಚಂದ್ರಯಾನ-2 ಉಡಾವಣೆ ನೋಡಲು ಸುತ್ತಮುತ್ತಲ ಪ್ರದೇಶಗಳಿಂದ ವಿದ್ಯಾರ್ಥಿಗಳು, ಜನರು ಆಗಮಿಸುತ್ತಿದ್ದಾರೆ.
4 / 10
ಶಾಲಾ ವಿದ್ಯಾರ್ಥಿಗಳು ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-2 ಉಡಾವಣೆ ಕಣ್ತುಂಬಿಕೊಳ್ಳಲು ಆಗಮಿಸಿರುವ ಕ್ಷಣ
5 / 10
ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿ ಉಡಾವಣೆಯಾಗಲಿರುವ ಚಂದ್ರಯಾನ-2 ನೋಡಲು ಆಗಮಿಸಿರುವ ಜನಸ್ತೋಮ
6 / 10
ಚಂದ್ರಯಾನ-2 ಉಡಾವಣೆಯ ಸ್ಥಳದಲ್ಲಿ ಶಾಲಾ ವಿದ್ಯಾರ್ಥಿಗಳ ಜೊತೆಗೆ ಮಾರ್ಗದರ್ಶಕರು
7 / 10
ಸತೀಶ್ ಧವನ್ ಬಾಹ್ಯಾಕೇಶ ಕೇಂದ್ರದ ಹೊರನೋಟ
8 / 10
ಚಂದ್ರಯಾನ್-2 ಗಗನನೌಕೆ ಹೊತ್ತ ಜಿಎಸ್ಎಲ್ವಿ-MkIII-M1 ರಾಕೆಟ್
9 / 10
ಚಂದ್ರಯಾನ-2 ಉಡಾವಣೆ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರುವ ಮಕ್ಕಳು
10 / 10
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಒಂದು ಚಿತ್ರ
First published: July 22, 2019, 12:06 IST