ಇಸ್ರೋದ ಮಹಾತ್ವಕಾಂಕ್ಷಿ ಯೋಜನೆ ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಯಾಗಿದೆ.
2/ 7
ಚಂದ್ರಯಾನ-1ರ ಪ್ರಮುಖ ಸಾಧನೆಯೇ ಚಂದ್ರನಲ್ಲಿ ನೀರಿನ ಅಂಶವನ್ನು ಪತ್ತೆ ಹಚ್ಚಿದ್ದು. ಭಾರತದ ಇಸ್ರೋ ವಿಜ್ಞಾನಿಗಳು ಮೊದಲ ಬಾರಿಗೆ, ಮಾನವರಹಿತ ಚಂದ್ರಯಾನ-1 ನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದ್ದು 2008ರ ಅಕ್ಟೋಬರ್ನಲ್ಲಿ.
3/ 7
ಈ ಚಂದ್ರಯಾನ ಅದೇ ವರ್ಷದ ನವೆಂಬರ್ 14ರಂದು ಚಂದ್ರನ ಮೇಲೆ ಇಳಿದಿತ್ತು. ಈ ಮೂಲಕ ಭಾರತ ಚಂದ್ರನ ಮೇಲೆ ಧ್ವಜ ನೆಟ್ಟ ನಾಲ್ಕನೇ ದೇಶ ಎನಿಸಿಕೊಂಡಿತ್ತು.
4/ 7
ಭಾರತದ ಒಂದನೇ ಚಂದ್ರಯಾನ 2009 ಆಗಸ್ವ್ ತನಕವೂ ಕಾರ್ಯ ನಿರ್ವಹಿಸಿತ್ತು. ಇದಕ್ಕಾಗಿ ಸುಮಾರು 386 ಕೋಟಿ ರೂಪಾಯಿ ವ್ಯಯಿಸಬೇಕಾಗಿತ್ತು.
5/ 7
ನಾವು ಚಂದ್ರನ ಮೇಲೆ ಹೋಗುವ ಹಲವು ವರ್ಷಗಳ ಮುನ್ನವೇ ವಿವಿಧ ರಾಷ್ಟ್ರಗಳು ಚಂದ್ರನ ಮೇಲೆ ತಮ್ಮ ಉಪಗ್ರಹಗಳನ್ನು ಹಾರಿಬಿಟ್ಟಿದ್ದವು.
6/ 7
ಅಮೆರಿಕ ಮಾತ್ರ ಆಗಲೇ ಮಾನವನನ್ನು ಚಂದ್ರನ ಮೇಲೆ ಕಳುಹಿಸಿಬಿಟ್ಟಿತ್ತು. ಹೀಗೆ ರಷ್ಯಾ, ಅಮೆರಿಕ, ಐರೋಪ್ಯ ರಾಷ್ಟ್ರಗಳು ಚಂದ್ರನ ಮೇಲೆ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಾ ಹೋದವು.
7/ 7
ಇದುವರೆಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದ್ದ ಚಂದ್ರನ ಮೇಲ್ಮೆಯಲ್ಲಿ ನೀರಿನ ಅಂಶವಿರುವುದನ್ನು ಮೊಟ್ಟ ಮೊದಲ ಬಾರಿಗೆ ಕಂಡು ಹಿಡಿದಿತ್ತು. ಜತೆಗೆ ಮನುಕುಲದ ಕುತೂಹಲವನ್ನು ಮತ್ತಷ್ಟು ತಣಿಯುವಂತೆ ಮಾಡಿತ್ತು.