ಚಂದ್ರಯಾನ-2 ಯೋಜನೆಗಾಗಿ ಇಸ್ರೋ GSLV Mk III (ಜಿಎಸ್ಎಲ್ವಿ ಎಂಕೆ 3) ಎಂಬ ಹೊಸ ಮಾದರಿಯ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ರಾಕೆಟ್ ಒಂದನ್ನು ನಿರ್ಮಿಸಿತ್ತು. ಈ ಗಗನನೌಕೆಯು ಆರ್ಬಿಟರ್, ವಿಕ್ರಮ್ ಹೆಸರಿನ ಲ್ಯಾಂಡರ್ ಮತ್ತು ಪ್ರಗ್ಯಾನ್ ಹೆಸರಿನ ರೋವರ್ ಅನ್ನು ಹೊತ್ತೊಯ್ದಿತ್ತು. ಚಂದ್ರಯಾನ-2 ನೌಕೆ ಬಾಕ್ಸ್ ಆಕಾರದಲ್ಲಿದ್ದು, ಉಡಾವಣೆಯಾದ ಒಂದು ತಿಂಗಳಲ್ಲಿ ಚಂದ್ರನ ಕಕ್ಷೆ ತಲುಪಲಿದೆ ಎಂದು ಊಹಿಸಲಾಗಿತ್ತು. ಲೆಕ್ಕಾಚಾರದಂತೆಯೇ ಇಂದು ಲ್ಯಾಂಡ್ ಆಗಲಿದೆ. ಚಂದ್ರನ ಕಕ್ಷೆಗೆ ತಲುಪಿದ ಬಳಿಕ ಆರ್ಬಿಟರ್ನಿಂದ ಲ್ಯಾಂಡರ್ ಬೇರ್ಪಟ್ಟು, ಚಂದ್ರನ ದಕ್ಷಿಣ ಧ್ರುವದಲ್ಲಿ ನಿಧಾನವಾಗಿ ಲ್ಯಾಂಡ್ ಆಗುತ್ತದೆ.