Youtube Channel Ban: ಖಲಿಸ್ತಾನಿ ಪರ ವಿಡಿಯೋ ಶೇರ್ ಮಾಡುತ್ತಿದ್ದ 6 ಯೂಟ್ಯೂಬ್​ ಚಾನೆಲ್​ ಬ್ಲಾಕ್​ ಮಾಡಿದ ಕೇಂದ್ರ

ನವ ದೆಹಲಿ: ಖಲಿಸ್ತಾನ ಸಂಘಟನೆಗಳ ಪರ ಕೆಲಸ ಮಾಡುತ್ತಿದೆ ಎನ್ನುವ ಆರೋಪದ ಮೇಲೆ ಆರು ಯೂಟ್ಯೂಬ್‌ ಚಾನೆಲ್‌ಗಳನ್ನು ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮಾಹಿತಿ ಮತ್ತು ಪ್ರಸಾರ ಇಲಾಖೆ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು, ಒಟ್ಟು ಆರರಿಂದ ಎಂಟು ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

First published:

  • 17

    Youtube Channel Ban: ಖಲಿಸ್ತಾನಿ ಪರ ವಿಡಿಯೋ ಶೇರ್ ಮಾಡುತ್ತಿದ್ದ 6 ಯೂಟ್ಯೂಬ್​ ಚಾನೆಲ್​ ಬ್ಲಾಕ್​ ಮಾಡಿದ ಕೇಂದ್ರ

    ಈ ಬಗ್ಗೆ ಮಾಹಿತಿ ನೀಡಿರುವ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಕಳೆದ 10 ದಿನಗಳಿಂದ ಹೊರ ದೇಶಗಳಿಂದ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 6 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

    MORE
    GALLERIES

  • 27

    Youtube Channel Ban: ಖಲಿಸ್ತಾನಿ ಪರ ವಿಡಿಯೋ ಶೇರ್ ಮಾಡುತ್ತಿದ್ದ 6 ಯೂಟ್ಯೂಬ್​ ಚಾನೆಲ್​ ಬ್ಲಾಕ್​ ಮಾಡಿದ ಕೇಂದ್ರ

    ಪಂಜಾಬಿ ಭಾಷೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾನೆಲ್‌ಗಳು ಗಡಿ ರಾಜ್ಯದಲ್ಲಿ ತೊಂದರೆಯನ್ನುಂಟು ಮಾಡಲು ಪ್ರಯತ್ನಿಸುತ್ತಿವೆ ಎಂದು ಅಪೂರ್ವ ಚಂದ್ರ ಅವರು ಹೇಳಿದ್ದಾರೆ.

    MORE
    GALLERIES

  • 37

    Youtube Channel Ban: ಖಲಿಸ್ತಾನಿ ಪರ ವಿಡಿಯೋ ಶೇರ್ ಮಾಡುತ್ತಿದ್ದ 6 ಯೂಟ್ಯೂಬ್​ ಚಾನೆಲ್​ ಬ್ಲಾಕ್​ ಮಾಡಿದ ಕೇಂದ್ರ

    ಇತ್ತೀಚೆಗೆ ತೀವ್ರಗಾಮಿ ಬೋಧಕ ಅಮೃತಪಾಲ್ ಸಿಂಗ್ ಬೆಂಬಲಿಗರು ತಮ್ಮ ಬೆಂಬಲಿಗನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸ್ ಠಾಣೆಗೆ ನುಗ್ಗಿದ ಹಿನ್ನೆಲೆಯಲ್ಲಿ ಕೇಂದ್ರ ಈ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.

    MORE
    GALLERIES

  • 47

    Youtube Channel Ban: ಖಲಿಸ್ತಾನಿ ಪರ ವಿಡಿಯೋ ಶೇರ್ ಮಾಡುತ್ತಿದ್ದ 6 ಯೂಟ್ಯೂಬ್​ ಚಾನೆಲ್​ ಬ್ಲಾಕ್​ ಮಾಡಿದ ಕೇಂದ್ರ

    ಈ ಬಗ್ಗೆ ಮಾತನಾಡಿರುವ ಮತ್ತೋರ್ವ ಹಿರಿಯ ಅಧಿಕಾರಿ 48 ಗಂಟೆಗಳ ಒಳಗಾಗಿ ಚಾನೆಲ್‌ಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಯೂಟ್ಯೂಬ್ ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

    MORE
    GALLERIES

  • 57

    Youtube Channel Ban: ಖಲಿಸ್ತಾನಿ ಪರ ವಿಡಿಯೋ ಶೇರ್ ಮಾಡುತ್ತಿದ್ದ 6 ಯೂಟ್ಯೂಬ್​ ಚಾನೆಲ್​ ಬ್ಲಾಕ್​ ಮಾಡಿದ ಕೇಂದ್ರ

    ಆಕ್ಷೇಪಾರ್ಹ ವಿಷಯವನ್ನು ಸ್ವಯಂಚಾಲಿತವಾಗಿ ಗುರುತಿಸಲು ಮತ್ತು ನಿರ್ಬಂಧಿಸಲು ಕೃತಕ ಬುದ್ಧಿಮತ್ತೆ ಮತ್ತು ಅಲ್ಗಾರಿದಮ್‌ಗಳನ್ನು ಬಳಸಲು ಸರ್ಕಾರವು ಯೂಟ್ಯೂಬ್‌ಗೆ ಸೂಚನೆ ನೀಡಿದೆ.

    MORE
    GALLERIES

  • 67

    Youtube Channel Ban: ಖಲಿಸ್ತಾನಿ ಪರ ವಿಡಿಯೋ ಶೇರ್ ಮಾಡುತ್ತಿದ್ದ 6 ಯೂಟ್ಯೂಬ್​ ಚಾನೆಲ್​ ಬ್ಲಾಕ್​ ಮಾಡಿದ ಕೇಂದ್ರ

    ಇತ್ತೀಚೆಗೆ ಖಲಿಸ್ತಾನ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ನಮ್ಮ ತಾಳ್ಮೆಯನ್ನು ಕೆಣಕಿದರೆ ಇಂದಿರಾ ಗಾಂಧಿಗೆ ಆದ ಪರಿಸ್ಥಿತಿಯೇ ನಿಮಗೂ ಆಗಬಹುದು ಎಂದು ಬೆದರಿಕೆ ಹಾಕಿದ್ದರು.

    MORE
    GALLERIES

  • 77

    Youtube Channel Ban: ಖಲಿಸ್ತಾನಿ ಪರ ವಿಡಿಯೋ ಶೇರ್ ಮಾಡುತ್ತಿದ್ದ 6 ಯೂಟ್ಯೂಬ್​ ಚಾನೆಲ್​ ಬ್ಲಾಕ್​ ಮಾಡಿದ ಕೇಂದ್ರ

    ಇದರ ಬೆನ್ನಲ್ಲೇ ಖಲಿಸ್ತಾನ ಪರವಾಗಿರುವ ಯೂಟ್ಯೂಬ್‌ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು, ಇದಕ್ಕೆ ಖಲಿಸ್ತಾನ ಬೆಂಬಲಿಗರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

    MORE
    GALLERIES