ಒಂದೇ ಲಿಂಗದ ಇಬ್ಬರು ವ್ಯಕ್ತಿಗಳ ನಡುವಿನ ವಿವಾಹವು ಯಾವುದೇ ಕ್ರೋಢೀಕರಿಸದ ವೈಯಕ್ತಿಕ ಕಾನೂನುಗಳು ಅಥವಾ ಯಾವುದೇ ಕ್ರೋಢೀಕೃತ ಶಾಸನಬದ್ಧ ಕಾನೂನುಗಳಲ್ಲಿ ಗುರುತಿಸಲ್ಪಟ್ಟಿಲ್ಲ ಮತ್ತು ಅಂಗೀಕರಿಸಲ್ಪಟ್ಟಿಲ್ಲ. ಮದುವೆಯ ಕಲ್ಪನೆಯು ಅಗತ್ಯ ಹಾಗೂ ಅನಿವಾರ್ಯವಾಗಿ ವಿರುದ್ಧ ಲಿಂಗದ ಇಬ್ಬರು ವ್ಯಕ್ತಿಗಳ ನಡುವಿನ ಬಂಧವನ್ನು ಸೂಚಿಸುತ್ತಿದೆ. ಸಾಂಸ್ಕೃತಿಕವಾಗಿ ಹಾಗೂ ಕಾನೂನುಬದ್ಧವಾಗಿ ಮದುವೆಯ ಕಲ್ಪನೆ ಮತ್ತು ಪರಿಕಲ್ಪನೆಯಲ್ಲಿ ಬೇರೂರಿದೆ. ಇದು ನ್ಯಾಯಾಂಗ ವ್ಯಾಖ್ಯಾನದಿಂದ ತೊಂದರೆಗೊಳಗಾಗಬಾರದು ಅಥವಾ ದುರ್ಬಲಗೊಳಿಸಬಾರದು ಎಂದು ಸರ್ಕಾರದ ವಾದವಾಗಿದೆ.
ಸೋಮವಾರ ಈ ವಿಷಯದ ವಿಚಾರಣೆಗೆ ಸುಪ್ರಿಂ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಸಲಿಂಗಿಗಳು ಒಟ್ಟಿಗೆ ವಾಸಿಸುವುದು ಮತ್ತು ಸಲಿಂಗ ವ್ಯಕ್ತಿಗಳಿಂದ ಲೈಂಗಿಕ ಸಂಬಂಧವನ್ನು ಹೊಂದಿರುವುದು ಭಾರತೀಯ ಕುಟುಂಬ ಘಟಕದ ಪರಿಕಲ್ಪನೆಯೊಂದಿಗೆ ಹೋಲಿಸಲಾಗುವುದಿಲ್ಲ. ಹಾಗಾಗಿ ಸಲಿಂಗಿ ದಂಪತಿಗಳು ಸಲ್ಲಿಸಿರುವ ಪ್ರಸ್ತುತ ಕಾನೂನು ಚೌಕಟ್ಟಿನ ಸವಾಲುಗಳನ್ನು ತಿರಸ್ಕರಿಸಲು ನ್ಯಾಯಾಲಯವನ್ನು ಕೇಂದ್ರ ಸರ್ಕಾರ ಒತ್ತಾಯಿಸಿದೆ.