Valentine day: ಫೆಬ್ರವರಿ 14 ಇನ್ಮುಂದೆ ಪ್ರೇಮಿಗಳ ದಿನವಲ್ಲ, ಗೋವು ಅಪ್ಪುಗೆ ದಿನ!

ಫೆಬ್ರವರಿ 14ರಂದು ವಿಶ್ವದಾದ್ಯಂದ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಈ ವರ್ಷದಿಂದ ಆ ದಿನದಂದು ಗೋವು ಅಪ್ಪುಗೆ ದಿನವನ್ನಾಗಿ ಆಚರಿಸುವಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ದೇಶದ ಜನತೆಗೆ ಮನವಿ ಮಾಡಿದೆ.

First published:

  • 18

    Valentine day: ಫೆಬ್ರವರಿ 14 ಇನ್ಮುಂದೆ ಪ್ರೇಮಿಗಳ ದಿನವಲ್ಲ, ಗೋವು ಅಪ್ಪುಗೆ ದಿನ!

    ವು ಫೆಬ್ರವರಿ 14ರಂದು ವಿಶ್ವದಾದ್ಯಂದ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಈ ವರ್ಷದಿಂದ ಆ ದಿನದಂದು 'ಗೋವು ಅಪ್ಪುಗೆ ದಿನ'ವನ್ನಾಗಿ ಆಚರಿಸುವಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ದೇಶದ ಜನತೆಗೆ ಮನವಿ ಮಾಡಿದೆ.

    MORE
    GALLERIES

  • 28

    Valentine day: ಫೆಬ್ರವರಿ 14 ಇನ್ಮುಂದೆ ಪ್ರೇಮಿಗಳ ದಿನವಲ್ಲ, ಗೋವು ಅಪ್ಪುಗೆ ದಿನ!

    ಈ ಕುರಿತು ಬುಧವಾರ ಪ್ರಕಟಣೆ ಹೊರಡಿಸಿದ್ದು, ಫೆಬ್ರವರಿ 14ರ ದಿನವನ್ನು ಪ್ರೇಮಿಗಳ ದಿನ ಬದಲು 'ಗೋವು ಅಪ್ಪುಗೆ ದಿನ' ಎಂದು ಆಚರಿಸಿ ಎಂದು ಇಲಾಖೆ ತಿಳಿಸಿದೆ

    MORE
    GALLERIES

  • 38

    Valentine day: ಫೆಬ್ರವರಿ 14 ಇನ್ಮುಂದೆ ಪ್ರೇಮಿಗಳ ದಿನವಲ್ಲ, ಗೋವು ಅಪ್ಪುಗೆ ದಿನ!

    ಪ್ರೇಮಿಗಳ ದಿನವನ್ನು ಫೆಬ್ರವರಿ 14ರಂದು ಆಚರಿಸಲಾಗುತ್ತದೆ. ಅದೇ ದಿನ ಗೋ ಮಾತೆಯನ್ನು ಪ್ರೀತಿಸುವವರು 'ಗೋವು ಅಪ್ಪುಗೆ ದಿನ'ವನ್ನಾಗಿ ಆಚರಿಸಬೇಕು. ಇದರಿಂದ ಗೋಮಾತೆಯ ಮಹತ್ವ ತಿಳಿದುಕೊಳ್ಳಬಹುದು, ಜೊತೆಗೆ ಜೀವನದಲ್ಲಿ ಸಕಾರಾತ್ಮಕ ಶಕ್ತಿ ತುಂಬಿಕೊಂಡು ಜೀವನವನ್ನು ಆನಂದಮಯವಾಗಿಸಿಕೊಳ್ಳಬಹುದು ಎಂದು ಪ್ರಾಣಿ ಕಲ್ಯಾಣ ಇಲಾಖೆ ತಿಳಿಸಿದೆ.

    MORE
    GALLERIES

  • 48

    Valentine day: ಫೆಬ್ರವರಿ 14 ಇನ್ಮುಂದೆ ಪ್ರೇಮಿಗಳ ದಿನವಲ್ಲ, ಗೋವು ಅಪ್ಪುಗೆ ದಿನ!

    ಕಾಮಧೇನು, ರೈತರ ಸಂಗಾತಿ, ರೈತರ ಗೆಳೆಯ, ಸಿರಿ ಸಮೃದ್ಧಿ ಪ್ರತೀಕ ಎಂಬೆಲ್ಲಾ ಹೆಸರಿನಿಂದ ಕರೆಯುವ ಗೋಮಾತೆಯನ್ನು ಅಪ್ಪಿಕೊಂಡು ಅದರ ಮಹತ್ವವನ್ನು ಸಾರಬೇಕು ಎಂದು ಮಂಡಳಿಯು ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ. ಸೂಕ್ತ ಪ್ರಾಧಿಕಾರದಿಂದ ಅನುಮೋದನೆ ಪಡೆದೇ ಈ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    MORE
    GALLERIES

  • 58

    Valentine day: ಫೆಬ್ರವರಿ 14 ಇನ್ಮುಂದೆ ಪ್ರೇಮಿಗಳ ದಿನವಲ್ಲ, ಗೋವು ಅಪ್ಪುಗೆ ದಿನ!

    ಫೆ 14‌ರಂದು ಪ್ರೇಮಿಗಳು, ಯುವಕ ಯುವತಿಯರಿಗೆ ಪ್ರೇಮ ನಿವೇದನೆ ಮಾಡುವ ಬದಲಿಗೆ ಪ್ರಾಣಿಗಳನ್ನು ಅಪ್ಪಿಕೊಳ್ಳಿ , ಹಸುವಿನ ಬಗ್ಗೆ ಕಳಕಳಿ, ಕಾಳಜಿ, ಮಮತೆ ಮೂಡಲಿದೆ ಎಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ.

    MORE
    GALLERIES

  • 68

    Valentine day: ಫೆಬ್ರವರಿ 14 ಇನ್ಮುಂದೆ ಪ್ರೇಮಿಗಳ ದಿನವಲ್ಲ, ಗೋವು ಅಪ್ಪುಗೆ ದಿನ!

    ಪಾಶ್ಮಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಪರಿಣಾಮ ವೇದಕಾಲದ ಸಂಪ್ರದಾಯಗಳು ಬಹುತೇಕ ಅಳಿವಿನಂಚಿಗೆ ತಲುಪಿದೆ. ಪಾಶ್ಮಿಮಾತ್ಯ ಶೈಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯುವಂತೆ ಮಾಡಿದೆ. ಗೋವುಗಳನ್ನು ಅಪ್ಪಿಕೊಳ್ಳುವುದು ಭಾವನಾತ್ಮ ಸಿರಿವಂತಿಕೆ ತರುತ್ತದೆ ಎಂದು ಮಂಡಳಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

    MORE
    GALLERIES

  • 78

    Valentine day: ಫೆಬ್ರವರಿ 14 ಇನ್ಮುಂದೆ ಪ್ರೇಮಿಗಳ ದಿನವಲ್ಲ, ಗೋವು ಅಪ್ಪುಗೆ ದಿನ!

    ಸಾರ್ವಜನಿಕರಿಗೆ ಈ ಮನವಿ ಮಾಡಲು ನಮಗೆ ಕೇಂದ್ರ ಸಚಿವಾಲಯದಿಂದ ನಿರ್ದೇಶನ ಬಂದಿದೆ. ಅಲ್ಲದೆ, ನಾವು ಅದಕ್ಕಾಗಿ ಕೆಲವು ಪ್ರಾತಿನಿಧ್ಯಗಳನ್ನು ಸ್ವೀಕರಿಸಿದ್ದೇವೆ. ಈ ಬಾರಿ ಸಮಯವು ತುಂಬಾ ಸೀಮಿತವಾಗಿದೆ, ಇದರಿಂದಾಗಿ ಫೆಬ್ರವರಿ 14ರಂದು ಯಾವುದೇ ಕಾರ್ಯಕ್ರಮವನ್ನು ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಆದರೆ ನಾವು ಜನರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಮಂಡಳಿಯ ಸಹಾಯಕ ಕಾರ್ಯದರ್ಶಿ ಪ್ರಾಚಿ ಜೈನ್ ತಿಳಿಸಿದ್ದಾರೆ.

    MORE
    GALLERIES

  • 88

    Valentine day: ಫೆಬ್ರವರಿ 14 ಇನ್ಮುಂದೆ ಪ್ರೇಮಿಗಳ ದಿನವಲ್ಲ, ಗೋವು ಅಪ್ಪುಗೆ ದಿನ!

    ಈ ಮನವಿಯನ್ನು ನಾವು ಎಲ್ಲಾ ರಾಜ್ಯಗಳಿಗೆ ಸೇರಿ ಮಾಡಿದ್ದೇವೆ. ಪ್ರಾಣಿ ಕಲ್ಯಾಣ ಎಲ್ಲಾ ರಾಜ್ಯಗಳಿಗೆ ಸಂಬಂಧಿಸಿದ್ದು. ಗುಜರಾತ್ ಮತ್ತು ಇತರ ರಾಜ್ಯಗಳು ಫೆಬ್ರವರಿ 14 ಅನ್ನು ಗೋ ಅಪ್ಪುಗೆಯ ದಿನವನ್ನಾಗಿ ಆಚರಿಸುತ್ತವೆ ಎಂದು ಜೈನ್ ತಿಳಿಸಿದ್ದಾರೆ.

    MORE
    GALLERIES