Pakistan Crisis: ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಜನರಿಗೆ ಮತ್ತೆ ಶಾಕ್: ಪೆಟ್ರೋಲ್ ಬೆಲೆ ಮತ್ತೆ ₹10 ಹೆಚ್ಚಿಸಿದ ಪಾಕ್!
ಇಸ್ಲಾಮಾಬಾದ್: ನೆರೆಯ ರಾಷ್ಟ್ರ ಪಾಕಿಸ್ತಾನ ಕಳೆದ ಅನೇಕ ಸಮಯದಿಂದ ಅರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ತೀವ್ರ ತರದ ಬೆಲೆ ಏರಿಕೆಯಿಂದ ಜನರು ದಿನನಿತ್ಯದ ಆಹಾರಕ್ಕೂ ಪರದಾಟ ನಡೆಸುವಂತಾಗಿದೆ. ಅದಾಗ್ಯೂ ಪ್ರತಿನಿತ್ಯ ಬೆಲೆ ಏರಿಕೆ ಗಗನಕ್ಕೆ ಏರುತ್ತಲೇ ಇದೆ.
ಆಹಾರ ಸಾಮಾಗ್ರಿಗಳ ಮೇಲೆ ಬೆಲೆ ಸೇರಿದಂತೆ ಪ್ರತಿಯೊಂದು ಐಟಂಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಪಾಕಿಸ್ತಾನದ ಜನರಿಗೆ ಇದೀಗ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ.
2/ 7
ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಕರೆನ್ಸಿ ಅಪಮೌಲ್ಯದ ನಡುವೆ ನಗದು ಕೊರತೆ ಎದುರಿಸುತ್ತಿರುವ ಪಾಕಿಸ್ತಾನ ಇದೀಗ ಅನಿವಾರ್ಯವಾಗಿ ಪೆಟ್ರೋಲ್ ಬೆಲೆ ಏರಿಕೆ ಮಾಡಬೇಕಾದ ಸ್ಥಿತಿಗೆ ತಲುಪಿದೆ.
3/ 7
ಹೌದು.. ಪಾಕಿಸ್ತಾನ ಸರ್ಕಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 10 ರೂಪಾಯಿ ಹೆಚ್ಚಿಸಿದ್ದು, ಆ ಮೂಲಕ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 282 ರೂ.ಗೆ ಏರಿಕೆಯಾಗಿದೆ.
4/ 7
ಈಗಾಗಲೇ ಗಗನಕ್ಕೇರುತ್ತಿರುವ ಹಣದುಬ್ಬರದಿಂದ ಕಂಗೆಟ್ಟಿರುವ ದೇಶದ ನಾಗರಿಕರಿಗೆ ಮತ್ತೊಂದು ಶಾಕ್ ತಟ್ಟಿದ್ದು, ಅಲ್ಲಿನ ಜನರು ಈ ಬೆಲೆ ಏರಿಕೆಯನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
5/ 7
ಹಣಕಾಸು ಸಚಿವ ಇಶಾಕ್ ದಾರ್ ಅವರು ತಡರಾತ್ರಿಯ ನೇರ ಭಾಷಣದಲ್ಲಿ ಪೆಟ್ರೋಲ್ ದರ ಏರಿಕೆಯನ್ನು ಘೋಷಿಸಿದ್ದಾರೆ. ಆದರೆ ಡೀಸೆಲ್ ಮತ್ತು ಲಘು ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ.
6/ 7
ಪಾಕಿಸ್ತಾನ ಸರ್ಕಾರ ಸೀಮೆಎಣ್ಣೆ ಬೆಲೆಯೂ ಪ್ರತಿ ಲೀಟರ್ 5.78 ರೂಪಾಯಿ ಏರಿಕೆ ಮಾಡಿದ್ದು, ಇದರೊಂದಿಗೆ 186.07 ರೂಪಾಯಿಗೆ ಸೀಮೆಎಣ್ಣೆ ಬೆಲೆ ತಲುಪಿದೆ.
7/ 7
ಪರಿಷ್ಕೃತ ಬೆಲೆಗಳು ಭಾನುವಾರ( ಏಪ್ರಿಲ್ 16) ಮಧ್ಯ ರಾತ್ರಿಯಿಂದಲೇ ಜಾರಿಗೆ ಬರಲಿದ್ದು, ಕಳೆದ 15 ದಿನಗಳಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಾಗಿರುವುದರಿಂದ ಈ ಪರಿಷ್ಕರಣೆ ಅಗತ್ಯವೆಂದು ದಾರ್ ತಿಳಿಸಿದ್ದಾರೆ.
First published:
17