ಈ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಎಲ್ಲರಿಗೂ ಒಂದು ವಾರಗಳ ಕಾಲ ತರಬೇತಿ ಒದಗಿಸಿದ್ದು, ತಿಂಗಳಿಗೆ 20 ರಿಂದ 25 ಸಾವಿರ ವೇತನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರತಿನಿತ್ಯ ಕರ್ನಾಟಕ ಸೇರಿದಂತೆ 15 ಕ್ಕೂ ಹೆಚ್ಚಿನ ರಾಜ್ಯಗಳ ಬ್ಯಾಂಕ್ ಖಾತೆದಾರರಿಗೆ ಕರೆ ಮಾಡುವ ಈ ತಂಡವು ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಈ ಕಾಲ್ ಸೆಂಟರ್ನಲ್ಲಿ ಆಕ್ಸಿಸ್ ಬ್ಯಾಂಕಿಗೆ ಸಂಬಂಧಿಸಿದ ಡೇಟಾಗಳು ಕೂಡ ಸಿಕ್ಕಿದ್ದು, ಇದರ ಹಿಂದೆ ದೊಡ್ಡ ಜಾಲ ಇರುವುದಾಗಿ ಸೈಬರ್ ಕ್ರೈಮ್ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ಸಿಕ್ಕಿರುವ ಲ್ಯಾಪ್ಟಾಪ್ ಮತ್ತು ಕಾರ್ಡ್ಗಳನ್ನು ಪರೀಕ್ಷಿಸಲಾಗುತ್ತಿದೆ. ಅಶು ಮತ್ತು ಅಜರ್ ಎಂಬ ಇಬ್ಬರು ಈ ಯುವತಿಯರಿಗೆ ಡೇಟಾಗಳನ್ನು ಕಳುಹಿಸುತ್ತಿದ್ದರು ಎನ್ನಲಾಗಿದೆ. ಇದೀಗ ಪೊಲೀಸರು ಈ ಇಬ್ಬರು ವಂಚಕರ ಪತ್ತೆಗಾಗಿ ಬಲೆ ಬೀಸಿದ್ದು, ಆರೋಪಿಗಳ ಬಂಧನದ ನಂತರ ಸೈಬರ್ ಕಳ್ಳರ ಮತ್ತಷ್ಟು ಮಾಹಿತಿ ಹೊರ ಬೀಳುವ ಸಾಧ್ಯಯಿದೆ.