ದೈತ್ಯ ಇ-ಕಾಮರ್ಸ್ ಸಂಸ್ಥೆಯಾದ ಅಮೆಜಾನ್ನಿಂದ (Amazon) ಗಾಂಜಾ (Drugs) ಮಾರಾಟ ಹಾಗೂ ಪುಲ್ವಾಮಾ ಬಾಂಬ್ ದಾಳಿ ವೇಳೆ ಬಳಕೆಯಾದ ರಾಸಾಯನಿಕ ಮಾರಾಟ ಮಾಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಹಿನ್ನಲೆ ಅಮೆಜಾನ್ ಕಂಪನಿಯ ವಿರುದ್ಧ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿತು. ಇದೇ ವೇಳೆ ಜವಳಿ ಮತ್ತು ಪಾದರಕ್ಷೆಗಳ ದರವನ್ನು ಹೆಚ್ಚಿಸಿರುವ ಜಿಎಸ್ಟಿ ಮಂಡಳಿಯ ನಿರ್ಧಾರವನ್ನು ಖಂಡಿಸಿದೆ.
ತನ್ನ ಇ-ಕಾಮರ್ಸ್ ಪೋರ್ಟಲ್ನಲ್ಲಿ ಅಕ್ರಮ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಅಮೆಜಾನ್ ವಿರುದ್ಧ CAIT ದೇಶಾದ್ಯಂತ ಸುಮಾರು 500 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿತು.
2/ 6
ನಿಷಿದ್ಧ ವಸ್ತುಗಳ ಮಾರಾಟಕ್ಕೆ ವೇದಿಕೆಯಾಗಿರುವ ಅಮೆಜಾನ್ ಮತ್ತು ಅದರ ಅಧಿಕಾರಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಇದೇ ವೇಳೆ ಸಿಎಐಟಿ ಒತ್ತಾಯಿಸಿದೆ.
3/ 6
ಅಮೆಜಾನ್ನಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪವೊಂದು ಈ ಹಿಂದೆ ಕೇಳಿಬಂದಿತ್ತು. ಭಾರತದಲ್ಲಿ ನಿಷೇಧವಿರುವ ವಸ್ತುಗಳು ಅಮೇಜಾನ್ನಲ್ಲಿ ಸುಲಭವಾಗಿ ಸಿಗುತ್ತದೆ ಎಂಬ ಆರೋಪವನ್ನು ಮಧ್ಯಪ್ರದೇಶ ಪೊಲೀಸರು ಪತ್ತೆ ಹಚ್ಚಿದ್ದರು.
4/ 6
ಇದರ ಜೊತೆಗೆ ಪುಲ್ವಾಮಾ ಬಾಂಬ್ ದಾಳಿಯಲ್ಲಿ ಬಳಕೆಯಾದ ನಿಷೇಧಿತ ಸುಧಾರಿತ ಸ್ಫೋಟಕ ಸಾಧನಗಳನ್ನು ತಯಾರಿಸಲು ಬಳಸುವ ರಾಸಾಯನಿಕಗಳನ್ನು ಇದೇ ಅಮೇಜಾನ್ ಮೂಲಕವೇ ಭಯೋತ್ಪಾದಕರು ಪಡೆದುಕೊಂಡಿದ್ದರು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಆರೋಪಿಸಿದೆ.
5/ 6
ಇನ್ನು ಜವಳಿ ಮತ್ತು ಪಾದರಕ್ಷೆ ಮೇಲೆ ಸರಕು ಮತ್ತು ಸೇವಾ ತೆರಿಗೆ ದರವನ್ನು ಶೇ. 5ರಿಂದ ಶೇ 10ರವರೆಗೆ ಏರಿಕೆ ಮಾಡಿರುವ ನಿರ್ಧಾರವನ್ನು ಇದೇ ವೇಳೆ ಸಿಎಐಟಿ ವಿರೋಧಿಸಿತು
6/ 6
ಝಾನ್ಸಿ, ಪ್ರಯಾಗ್ ರಾಜ್, ವಾರಾಣಸಿ, ಭೋಪಾಲ್, ಲಕ್ನೋ, ಇಂದೋರ್ ಕಾನ್ಪುರ್ ಗ್ವಾಲಿಯರ್ ಸೇರಿದಂತೆ ದೇಶದ ವಿವಿಧ ಜಿಲ್ಲೆಗಳಲ್ಲಿ ಸಿಎಐಟಿ ಸದಸ್ಯರು ಪ್ರತಿಭಟನೆ ನಡೆಸಿದರು