6400 ರೂ. ಬೆಲೆಯ ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಿ: ನಿಮ್ಮ ಹತ್ತಿರದ ಮೆಡಿಕಲ್ ಶಾಪ್​ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಜನ ಔಷಧಿ ಕೇಂದ್ರದಲ್ಲಿ 800ಕ್ಕೂ ಹೆಚ್ಚಿನ ಗುಣಮಟ್ಟದ ಔಷಧಿಗಳು ಲಭ್ಯವಿದೆ.

 • News18
 • |
First published:

 • 16

  6400 ರೂ. ಬೆಲೆಯ ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಿ: ನಿಮ್ಮ ಹತ್ತಿರದ ಮೆಡಿಕಲ್ ಶಾಪ್​ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

  ಔಷಧಿಗಳ ಬೆಲೆಗಳು ದುಬಾರಿ ಆಗಿರುವುದರಿಂದ ದೇಶದ ಅನೇಕರು ಸರಿಯಾದ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಕೂಗು ಆಗಿದ್ದಾಂಗೆ ಕೇಳಿ ಬರುತ್ತಿರುತ್ತದೆ. ಇದಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರ ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ. ಇಲ್ಲಿ ನೀವು ಮೆಡಿಕಲ್ ಸ್ಟೋರ್​ನಿಂದ ಸಿಗುವ ಔಷಧಿಗಳಿಗಿಂತ ಶೇ.50 ರಿಂದ ಶೇ.90ರವರೆಗೆ ಕಡಿಮೆ ಬೆಲೆಗೆ ಔಷಧಗಳನ್ನು ಕೊಂಡುಕೊಳ್ಳಬಹುದು. ಅದರಲ್ಲೂ ಕ್ಯಾನ್ಸರ್​ ರೋಗಿಗಳಿಗೆ ಅನಿವಾರ್ಯವಾಗಿರುವ ಜೆಮ್ಸಿಟಾಬೈನ್ (Gemcitabine) ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಬಹುದು. ಆದರೆ ಇದೇ ಔಷಧಿಯು ಇತರೆಡೆ ಕೊಂಡುಕೊಳ್ಳಲು  6, 412 ರೂ.ಗೆ ನೀಡಬೇಕಾಗುತ್ತದೆ.

  MORE
  GALLERIES

 • 26

  6400 ರೂ. ಬೆಲೆಯ ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಿ: ನಿಮ್ಮ ಹತ್ತಿರದ ಮೆಡಿಕಲ್ ಶಾಪ್​ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

  ಕೈಗೆಟಕುವ ಔಷಧಿ ಕೇಂದ್ರ: ನೀವು ಕಡಿಮೆ ಬೆಲೆಯ ಔಷಧಿಗಳನ್ನು ಖರೀದಿಸಲು ಬಯಸಿದರೆ, ನಿಮ್ಮ ಹತ್ತಿರದ ಜನ ಔಷಧಿ ಕೇಂದ್ರಕ್ಕೆ ಭೇಟಿ ನೀಡಬಹುದು. ಇಲ್ಲಿ ನಿಮಗೆ ಅಗ್ಗದ ದರದಲ್ಲಿ ಔಷಧಿಗಳು ಲಭ್ಯವಿರುತ್ತದೆ. ಸಾಮಾನ್ಯ ಜನರ ಆರೋಗ್ಯವನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ  4 ಸಾವಿರಕ್ಕೂ ಹೆಚ್ಚಿನ ಜನ ಔಷಧಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.

  MORE
  GALLERIES

 • 36

  6400 ರೂ. ಬೆಲೆಯ ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಿ: ನಿಮ್ಮ ಹತ್ತಿರದ ಮೆಡಿಕಲ್ ಶಾಪ್​ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

  4401 ಜನ ಔಷಧಿ ಕೇಂದ್ರ: ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರದಿಂದ ಜನ ಸಾಮಾನ್ಯರಿಗೂ ಒಳ್ಳೆಯ ರೀತಿಯ ವೈದ್ಯಕೀಯ ಸೇವೆ ಲಭಿಸುತ್ತಿದೆ. ಇಲ್ಲಿ ಗ್ರಾಹಕರು ಶೇ.50 ರಿಂದ 90 ರಷ್ಟು ಕಡಿಮೆ ದರದಲ್ಲಿ ಔಷಧಿ ಮಾತ್ರೆಗಳನ್ನು ಕೊಂಡುಕೊಳ್ಳಬಹುದು. ಇಲ್ಲಿಯವರೆಗೆ ದೇಶದಲ್ಲಿ 4401 ಜನ ಔಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಉತ್ತರ ಪ್ರದೇಶದಲ್ಲಿ 732, ತಮಿಳುನಾಡಿನಲ್ಲಿ 416, ಗುಜರಾತಿನಲ್ಲಿ 399 ಹಾಗೂ ಮಹಾರಾಷ್ಟ್ರದಲ್ಲಿ 287 ಔಷಧ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಾಗೆಯೇ ಕರ್ನಾಟಕದ ವಿವಿಧ ಭಾಗಗಳಲ್ಲಿ 400 ಜನ ಔಷಧಿ ಕೇಂದ್ರಗಳನ್ನು ತೆರೆಯಲಾಗಿದೆ.

  MORE
  GALLERIES

 • 46

  6400 ರೂ. ಬೆಲೆಯ ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಿ: ನಿಮ್ಮ ಹತ್ತಿರದ ಮೆಡಿಕಲ್ ಶಾಪ್​ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

  ಜನ ಔಷಧಿ ಕೇಂದ್ರದ ವಿಳಾಸ: ನಿಮ್ಮ ಜಿಲ್ಲೆಯಲ್ಲಿರುವ ಅಥವಾ ನಗರದಲ್ಲಿ ಜನ ಔಷಧಿ ಕೇಂದ್ರದ ಮಾಹಿತಿಯನ್ನು ಪಡೆಯಲು  janaushadhi.gov.in ವೆಬ್​ಸೈಟ್​ಗೆ ಭೇಟಿ ನೀಡಬಹುದು. ಅಲ್ಲದೆ ಟೋಲ್ ಫ್ರೀ ಸಂಖ್ಯೆ 1800-180-8080 ನಂಬರ್​ಗೆ ಕರೆ ಮಾಡುವ ಮೂಲಕ ಹತ್ತಿರದ ಜನ ಔಷಧಿ ಕೇಂದ್ರದ ಕುರಿತಾದ ವಿವರಗಳನ್ನು ಪಡೆಯಬಹುದು.

  MORE
  GALLERIES

 • 56

  6400 ರೂ. ಬೆಲೆಯ ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಿ: ನಿಮ್ಮ ಹತ್ತಿರದ ಮೆಡಿಕಲ್ ಶಾಪ್​ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

  ಜೆನರಿಕ್ ಹೆಸರಿನಲ್ಲಿ ಔಷಧಗಳ ಪೂರೈಕೆ: ಈ ಔಷಧಿಗಳ ಮೇಲೆ ಸಾಮಾನ್ಯ ಹೆಸರುಗಳನ್ನು ಬರೆಯಲಾಗಿರುತ್ತದೆ. ಸಾಮಾನ್ಯವಾಗಿ ವೈದ್ಯರುಗಳು ಔಷಧಿಗಳ ಬ್ರ್ಯಾಂಡ್​ಗಳ ಹೆಸರನ್ನು ಸೂಚಿಸಿ ಔಷಧಿಗಳ ಚೀಟಿ ನೀಡುತ್ತಾರೆ. ಆದರೆ ಸರ್ಕಾರ ಡಾಕ್ಟರ್​ಗಳಿಗೆ ಔಷಧಿ ಚೀಟಿಯಲ್ಲಿ ಜೆನೆರಿಕ್ ಹೆಸರನ್ನು ಬರೆಯುವಂತೆ ಸೂಚಿಸಿದೆ. ಅಲ್ಲದೆ ಔಷಧಿಗಳ ಮೇಲೆ ಸಾಮಾನ್ಯ ಹೆಸರನ್ನು ಮುದ್ರಿಸಲು ಫಾರ್ಮಾ ಕಂಪೆನಿಗಳಿಗೂ ತಿಳಿಸಿದೆ. ಇದರಿಂದ ಔಷಧಿಗಳ ಹೆಸರಿನಿಂದ ನೇರವಾಗಿ ಕಡಿಮೆ ದರದಲ್ಲಿ ಔಷಧಗಳನ್ನು ಪಡೆಯಲು ಸುಲಭವಾಗಲಿದೆ.

  MORE
  GALLERIES

 • 66

  6400 ರೂ. ಬೆಲೆಯ ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಿ: ನಿಮ್ಮ ಹತ್ತಿರದ ಮೆಡಿಕಲ್ ಶಾಪ್​ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

  800ಕ್ಕೂ ಹೆಚ್ಚಿನ ಔಷಧಿ: ಜನ ಔಷಧಿ ಕೇಂದ್ರದಲ್ಲಿ 800ಕ್ಕೂ ಹೆಚ್ಚಿನ ಗುಣಮಟ್ಟದ ಔಷಧಿಗಳು ಲಭ್ಯವಿದೆ. ಇದಲ್ಲದೆ  ಇಲ್ಲಿ 154ಕ್ಕಿಂತಲೂ ಹೆಚ್ಚು ಶಸ್ತ್ರಚಿಕಿತ್ಸಾ ಸಾಮಾಗ್ರಿಗಳು ಕೂಡ ದೊರೆಯುತ್ತದೆ.

  MORE
  GALLERIES