AIMIM ಮುಖ್ಯಸ್ಥ Asaduddin Owaisi ಕಾರಿನ ಮೇಲೆ ಗುಂಡಿನ ದಾಳಿ
ಲೋಕಸಭೆ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (AIMIM Chief Asaduddin Owaisi ) ಅವರು ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಮೀರತ್‌ನ ಕಿಥೌರ್‌ನಿಂದ ಓವೈಸಿ ದೆಹಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ತಮ್ಮ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಕುರಿತು ಸಂಸದರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ದೆಹಲಿಗೆ ತೆರಳುವಾಗ ಸಂಸದ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ನಾಲ್ಕು ಸುತ್ತಿನ ಬುಲೆಟ್‌ಗಳನ್ನು ಹಾರಿಸಲಾಗಿದ್ದು, ಟೈರ್‌ಗಳು ಪಂಕ್ಚರ್ ಆಗಿದೆ ಎಂದು ಸಂಸದರು ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.
2/ 5
ಮೂರು ನಾಲ್ಕು ಮಂದಿ ಅಪರಿಚಿತರು ಈ ದಾಳಿ ನಡೆಸಿದ್ದು, ಘಟನೆ ಬಳಿಕ ಅವರೆಲ್ಲಾ ಅಲ್ಲಿಯೇ ಶಸ್ತ್ರಾಸ್ತ್ರ ಬಿಟ್ಟು ಓಡಿ ಹೋಗಿದ್ದಾರೆ.
3/ 5
ನಾವು ಸುರಕ್ಷಿತವಾಗಿದ್ದು, ಮತ್ತೊಂದು ವಾಹನದಲ್ಲಿ ಪ್ರಯಾಣ ಮುಂದುವರೆಸಿರುವುದಾಗಿ ಅವರು ತಿಳಿಸಿದ್ದಾರೆ.
4/ 5
ಹೈದರಾಬಾದ್‌ನ ಲೋಕಸಭಾ ಸಂಸದ ಓವೈಸಿ ಅವರು ಕಿಥೌರ್‌ನಲ್ಲಿ ಚುನಾವಣಾ ಕಾರ್ಯಕ್ರಮ ಮುಗಿಸಿ ದೆಹಲಿಗೆ ತೆರಳುತ್ತಿದ್ದರು.
5/ 5
ಘಟನೆ ಕುರಿತು ಉತ್ತರ ಪ್ರದೇಶ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತಿವಾಗಿಲ್ಲ. ಈ ಸಂಬಂಧ ಇದುವರೆಗೂ ಯಾರನ್ನೂ ಬಂಧಿಸಿಲ್ಲ
First published:
15