ಜಗದಾಂಬಿಕ ಪಾಲ್ (3 ದಿನ)
ದೇಶದಲ್ಲಿ ಅತ್ಯಂತ ಕಡಿಮೆ ಅವಧಿಗೆ ಸಿಎಂ ಆಗಿರುವ ಮೊದಲ ರಾಜಕಾರಣಿ ಎಂಬ ಖ್ಯಾತಿ ಉತ್ತರ ಪ್ರದೇಶದ ಬಿಜೆಪಿ ನಾಯಕ ಜಗದಾಂಬಿಕ ಪಾಲ್ ಅವರದ್ದು. ಕಾಂಗ್ರೆಸ್ ಪಕ್ಷದಲ್ಲಿದ್ದ ಪಾಲ್ 1998ರ ಫೆಬ್ರವರಿ 21ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪಾಲ್ ಕೇವಲ 3 ದಿನ (44 ಗಂಟೆ)ಗಳಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.
ದೇವೇಂದ್ರ ಫಡ್ನವೀಸ್ (4 ದಿನ)
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ 5 ವರ್ಷಗಳ ಪೂರ್ಣಾವಧಿ ಆಡಳಿತ ನೀಡಿದ್ದ ಬಿಜೆಪಿಯ ದೇವೇಂದ್ರ ಫಡ್ನವೀಸ್ ನಂತರದ ಚುನಾವಣೆಯಲ್ಲಿ ಬಹುಮತ ಸಿಗದ ಕಾರಣ ಎನ್ಸಿಪಿ ಜೊತೆ ಸೇರಿ 2019ರ ನವೆಂಬರ್ 23ರಂದು ಮುಂಜಾನೆ ದಿಢೀರ್ ಎಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ನವೆಂಬರ್ 26ರಂದು ಅವರು ರಾಜೀನಾಮೆ ನೀಡಬೇಕಾಯಿತು. ಒಟ್ಟಾರೆ 4 ದಿನ (80 ಗಂಟೆ) ಫಡ್ನವೀಸ್ ಸಿಎಂ ಆಗಿದ್ದರು.
ಬಿ.ಎಸ್. ಯಡಿಯೂರಪ್ಪ (8 ದಿನ)
ಕರ್ನಾಟಕದ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ 2007ರಲ್ಲಿ 8 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. 2007ರಲ್ಲಿ ನವೆಂಬರ್ 12ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ನವೆಂಬರ್ 19ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಎಸ್ವೈ ಪ್ರಸ್ತುತ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ.