Shocking: ಮುಟ್ಟಿನ ಕಲೆಯನ್ನು ತಪ್ಪಾಗಿ ತಿಳಿದು ತಂಗಿಯನ್ನೇ ಕೊಂದ ಅಣ್ಣ! ಹೆಂಡ್ತಿ ಮಾತು ಕೇಳಿ ಚಿತ್ರಹಿಂಸೆ ಕೊಟ್ಟು ಬಾಲಕಿ ಕೊಲೆ

ಋತುಸ್ರಾವದ ಬಗ್ಗೆ ಅಜ್ಞಾನದಿಂದ ಹೆಂಡತಿ ನೀಡಿದ ತಪ್ಪು ಮಾಹಿತಿ ನಂಬಿ ಅಣ್ಣ ತನ್ನ 12 ವರ್ಷದ ತಂಗಿಯನ್ನು ಕೊಂದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

First published:

  • 17

    Shocking: ಮುಟ್ಟಿನ ಕಲೆಯನ್ನು ತಪ್ಪಾಗಿ ತಿಳಿದು ತಂಗಿಯನ್ನೇ ಕೊಂದ ಅಣ್ಣ! ಹೆಂಡ್ತಿ ಮಾತು ಕೇಳಿ ಚಿತ್ರಹಿಂಸೆ ಕೊಟ್ಟು ಬಾಲಕಿ ಕೊಲೆ

    ಋತುಸ್ರಾವದ (Period) ಬಗ್ಗೆ ಅಜ್ಞಾನದಿಂದ ಹೆಂಡತಿ ನೀಡಿದ ತಪ್ಪು ಮಾಹಿತಿ ನಂಬಿ ಅಣ್ಣ ತನ್ನ 12 ವರ್ಷದ ತಂಗಿಯನ್ನು ಕೊಂದ ಆಘಾತಕಾರಿ ಘಟನೆ ಥಾಣೆಯಲ್ಲಿ ನಡೆದಿದೆ. ಉಲ್ಲಾಸನಗರದಲ್ಲಿ ಸಹೋದರ ತನ್ನ ತಂಗಿಯನ್ನು ಹಿಂಸಿಸಿ ನಂತರ ಕೊಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿಯ ಸಹೋದರ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 27

    Shocking: ಮುಟ್ಟಿನ ಕಲೆಯನ್ನು ತಪ್ಪಾಗಿ ತಿಳಿದು ತಂಗಿಯನ್ನೇ ಕೊಂದ ಅಣ್ಣ! ಹೆಂಡ್ತಿ ಮಾತು ಕೇಳಿ ಚಿತ್ರಹಿಂಸೆ ಕೊಟ್ಟು ಬಾಲಕಿ ಕೊಲೆ

    ಕೆಲವು ದಿನಗಳ ಹಿಂದೆ 12 ವರ್ಷದ ಹುಡುಗಿಗೆ ಋತುಸ್ರಾವ ಆರಂಭವಾಗಿದೆ. ಇದು ಅವಳ ಗಮನಕ್ಕೆ ಬಂದಿರಲಿಲ್ಲ. ಈ ವೇಳೆ ರಕ್ತಸ್ರಾವವಾಗುತ್ತಿರುವುದನ್ನು ನೋಡಿ ಸಹೋದರನಿಗೆ ಯಾರೊಂದಿಗೋ ಸಂಭೋಗ ನಡೆಸಿರಬಹುದೆಂಬ ಅನುಮಾನ ಬಂದಿತ್ತು. (ಸಾಂಕೇತಿಕ ಚಿತ್ರ)

    MORE
    GALLERIES

  • 37

    Shocking: ಮುಟ್ಟಿನ ಕಲೆಯನ್ನು ತಪ್ಪಾಗಿ ತಿಳಿದು ತಂಗಿಯನ್ನೇ ಕೊಂದ ಅಣ್ಣ! ಹೆಂಡ್ತಿ ಮಾತು ಕೇಳಿ ಚಿತ್ರಹಿಂಸೆ ಕೊಟ್ಟು ಬಾಲಕಿ ಕೊಲೆ

    ಈ ಅನುಮಾನದಿಂದಲೇ ತಂಗಿಯನ್ನು ಕೊಂದಿದ್ದಾನೆ. ಸಹೋದರಿಗೆ ಯಾರೊಂದಿಗಾದರೂ ಅಕ್ರಮ ಸಂಬಂಧವಿದೆ ಎಂದು ಸಹೋದರ ಭಾವಿಸಿದ್ದು, ಇದರಿಂದ ಕುಪಿತಗೊಂಡ ಸಹೋದರಿಗೆ ಥಳಿಸಿದ್ದು, ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 47

    Shocking: ಮುಟ್ಟಿನ ಕಲೆಯನ್ನು ತಪ್ಪಾಗಿ ತಿಳಿದು ತಂಗಿಯನ್ನೇ ಕೊಂದ ಅಣ್ಣ! ಹೆಂಡ್ತಿ ಮಾತು ಕೇಳಿ ಚಿತ್ರಹಿಂಸೆ ಕೊಟ್ಟು ಬಾಲಕಿ ಕೊಲೆ

    12 ವರ್ಷದ ಬಾಲಕಿ ತನ್ನ ಅಣ್ಣ ಮತ್ತು ಅತ್ತಿಗೆಯೊಂದಿಗೆ ಉಲ್ಲಾಸನಗರದಲ್ಲಿ ವಾಸವಾಗಿದ್ದಳು. ಹುಡುಗಿಯ ಪೋಷಕರು ಗ್ರಾಮದಲ್ಲಿ ವಾಸಿಸುತ್ತಿದ್ದರು. ಈ ಹುಡುಗಿಗೆ ಕೆಲವು ದಿನಗಳ ಹಿಂದೆ ಮೊದಲ ಬಾರಿಗೆ ಋತುಚಕ್ರವಾಗಿದೆ. ಆ ವೇಳೆ ಬಾಲಕಿಯ ಸಹೋದರನಿಗೆ ಆತನ ಪತ್ನಿ ಸಂಭೋಗ ನಡೆಸಿರಬಹುದು ಎಂದು ತಪ್ಪು ಮಾಹಿತಿ ನೀಡಿದ್ದಾಳೆ. (ಸಾಂಕೇತಿಕ ಚಿತ್ರ)

    MORE
    GALLERIES

  • 57

    Shocking: ಮುಟ್ಟಿನ ಕಲೆಯನ್ನು ತಪ್ಪಾಗಿ ತಿಳಿದು ತಂಗಿಯನ್ನೇ ಕೊಂದ ಅಣ್ಣ! ಹೆಂಡ್ತಿ ಮಾತು ಕೇಳಿ ಚಿತ್ರಹಿಂಸೆ ಕೊಟ್ಟು ಬಾಲಕಿ ಕೊಲೆ

    ಅಲ್ಲದೆ ಬಟ್ಟೆಯಲ್ಲಿ ರಕ್ತದ ಕಲೆಗಳು ಇರುವುದನ್ನು ನೋಡಿ ಪ್ರಶ್ನಿಸಿದಾಗ ಅದರ ಬಗ್ಗೆ ಋತುಸ್ರಾವದ ಬಗ್ಗೆ ಅವಳಿಗೆ ಯಾವುದೇ ಜ್ಞಾನ ಕೂಡ ಇರಲಿಲ್ಲ. ಇದರಿಂದ ಏನು ಉತ್ತರ ಕೊಡಬೇಕೆಂದು ಆಕೆಗೆ ತಿಳಿಯಲಿಲ್ಲ. ಬಾಲಕಿಗೆ ಅನೈತಿಕ ಸಂಬಂಧವಿದ್ದು, ಲೈಂಗಿಕ ಸಂಪರ್ಕದಿಂದ ರಕ್ತಸ್ರಾವವಾಗುತ್ತಿದೆ ಎಂದು ಪತ್ನಿ ಹೇಳಿದ ಮಾತನ್ನು ನಂಬಿದ ಬಾಲಕಿ ಸಹೋದರ ಕುಪಿತಗೊಂಡ ಮೂರು ದಿನಗಳ ಕಾಲ ಬಾಲಕಿಗೆ ಚಿತ್ರಹಿಂಸೆ ನೀಡಿದ್ದಾನೆ. (ಸಾಂಕೇತಿಕ ಚಿತ್ರ)

    MORE
    GALLERIES

  • 67

    Shocking: ಮುಟ್ಟಿನ ಕಲೆಯನ್ನು ತಪ್ಪಾಗಿ ತಿಳಿದು ತಂಗಿಯನ್ನೇ ಕೊಂದ ಅಣ್ಣ! ಹೆಂಡ್ತಿ ಮಾತು ಕೇಳಿ ಚಿತ್ರಹಿಂಸೆ ಕೊಟ್ಟು ಬಾಲಕಿ ಕೊಲೆ

    ಮೂರು ದಿನಗಳ ಕಾಲ ನಿಜ ಬಾಯಿಬಿಡುವಂತೆ ಬಾಲಕಿಯ ಬಾಯಿ, ನಾಲಿಗೆ ಹಾಗೂ ದೇಹದ ಇತರೆ ಭಾಗಗಳನ್ನು ಸುಟ್ಟಿದ್ದಾನೆ. ಈ ಚಿತ್ರಹಿಂಸೆಯಿಂದ ಬಾಲಕಿ ಅಶ್ವಸ್ಥಗೊಂಡಿದ್ದಾಳೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 77

    Shocking: ಮುಟ್ಟಿನ ಕಲೆಯನ್ನು ತಪ್ಪಾಗಿ ತಿಳಿದು ತಂಗಿಯನ್ನೇ ಕೊಂದ ಅಣ್ಣ! ಹೆಂಡ್ತಿ ಮಾತು ಕೇಳಿ ಚಿತ್ರಹಿಂಸೆ ಕೊಟ್ಟು ಬಾಲಕಿ ಕೊಲೆ

    ಮರಣೋತ್ತರ ಪರೀಕ್ಷೆ ನಡೆಸಿದಾಗ ಮೃತದೇಹದ ಮೇಲೆ ಥಳಿಸಿದ ಹಾಗೂ ಸುಟ್ಟ ಗಾಯದ ಗುರುತುಗಳು ಪತ್ತೆಯಾಗಿವೆ. ಈ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಪೊಲೀಸರು ಸಹೋದರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ)

    MORE
    GALLERIES