Rishi Sunak: ಬ್ರಿಟನ್​ ಪಿಎಂ ಭಾರತ ಮೂಲದವರಾಗಿರುತ್ತಾರೆ, 2015ರಲ್ಲಿ ಮೋದಿ ಎದುರೇ ಆಗಿತ್ತು ಈ ಭವಿಷ್ಯವಾಣಿ!

ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಮಂಗಳವಾರ ಪ್ರಧಾನಿಯಾಗಿ ರಿಷಿ ಸುನಕ್ ಪ್ರಮಾಣ ವಚನ ಸ್ವೀಕರಿಸಿದರು. 210 ವರ್ಷಗಳಲ್ಲಿ ಬ್ರಿಟನ್ ಪ್ರಧಾನಿಯಾದ ಅತ್ಯಂತ ಕಿರಿಯ ನಾಯಕ ಸುನಕ್ ಎನಿಸಿಕೊಂಡಿದ್ದಾರೆ. 42 ವರ್ಷದ ರಿಷಿ ಸುನಕ್ ಯುಕೆ ಮಾಜಿ ಹಣಕಾಸು ಸಚಿವರಾಗಿದ್ದರು. ಆದರೀಗ ಪ್ರಧಾನ ಮಂತ್ರಿಯಾದ ನಂತರ, ಅವರ ಹೊಸ ಮನೆ ಲಂಡನ್‌ನ 10 ಡೌನಿಂಗ್ ಸ್ಟ್ರೀಟ್ ಆಗಿದೆ. 10 ಡೌನಿಂಗ್ ಸ್ಟ್ರೀಟ್ ಬ್ರಿಟನ್ ಪ್ರಧಾನ ಮಂತ್ರಿಯ ಅಧಿಕೃತ ನಿವಾಸ ಮತ್ತು ಕಚೇರಿಯಾಗಿದೆ.

First published: