ವಧು ಮದುವೆ ಮಂಟಪದಲ್ಲೇ ನಿದ್ದೆ ಮಾಡಿರೋದು ನಮಗೆ ತಮಾಷೆ ಅನ್ನಿಸಿದ್ರೂ, ಪಾಪ ವಧು ವರರ ಕಷ್ಟ ಅವರಿಗೇ ಗೊತ್ತು. ಯಾಕಂದ್ರೆ ಶಾಸ್ತ್ರ ಅದು ಇದು ಅಂತೇಳಿ ಹಿಂದಿನ ದಿನ ರಾತ್ರಿ ಮಲಗೋದು ತಡವಾಗಿರುತ್ತೆ. ಹೀಗಾಗಿ ಸಹಜವಾಗಿಯೇ ಮದುವೆ ಮಂಟಪದಲ್ಲಿ ನಿದ್ದೆ ಬರೋದು ದೊಡ್ಡ ಸಂಗತಿಯೇನಲ್ಲ. ಅದೇನೇ ಇರಲಿ, ಲಕ್ಷಾಂತರ ಮಂದಿ ಈ ವಿಡಿಯೋವನ್ನು ಎಂಜಾಯ್ ಮಾಡಿದ್ದಂತೂ ಸುಳ್ಳಲ್ಲ.