(PHOTOS) : ತಮಿಳುನಾಡಿನಲ್ಲಿ ಪೊಂಗಲ್ ; ಜಲ್ಲಿಕಟ್ಟು ಆಡಿ ಸಂಭ್ರಮಿಸಿದ ಜನರು
ತಮಿಳುನಾಡಿನೆಲ್ಲಡೆ ಇಂದು ಪೊಂಗಲ್ ಸಂಭ್ರಮ ಮನೆ ಮಾಡಿದೆ. ಪೊಂಗಲ್ ದಿನ ಪ್ರತಿವರ್ಷ ನಡೆಸಲಾಗುವ ಜಲ್ಲಿಕಟ್ಟು ಸಾಂಪ್ರದಾಯಿಕ ಕ್ರೀಡೆ ಈಗಾಗಲೇ ಕೆಲವೆಡೆ ಆರಂಭಗೊಂಡಿದೆ. ಮಧುರೈನ ಅವನಿಯಪುರಂನಲ್ಲಿ ಬೆಳಗ್ಗೆ ಜಲ್ಲಿಕಟ್ಟು ಕ್ರೀಡೆ ಆರಂಭಗೊಂಡಿದೆ. ಹೋರಿಗಳನ್ನು ಜನರ ನಡುವೆ ಹಾಯಿಸಿ, ಅದನ್ನು ಹಿಡಿದು ಪಳಗಿಸುವ ತಮಿಳರ ಸಾಂಪ್ರದಾಯಿಕ ಕ್ರೀಡೆ ಇದಾಗಿದೆ. ಜಲ್ಲಿಕಟ್ಟು ವಿವಾದ ಈ ಹಿಂದೆ ಭಾರಿ ಸುದ್ದಿ ಮಾಡಿತ್ತು. ಇದರಿಂದ ಪ್ರಾಣಿಗಳಿಗೆ ಹಾಗೂ ಮನುಷ್ಯರಿಗೂ ತೊಂದರೆಯಾಗುತ್ತಿದೆ ಎಂದು ನಿಷೇಧಿಸುವಂತೆ ಪ್ರಾಣಿ ದಯಾ ಸಂಘ ಕೋರ್ಟ್ ಮೆಟ್ಟಿಲೇರಿತ್ತು. 2006ರಲ್ಲಿ ಮದ್ರಾಸ್ ಹೈಕೋರ್ಟ್ ಪೀಠದ ಎದುರು ಜಲ್ಲಿಕಟ್ಟು ನಿಷೇಧಿಸುವ ಅರ್ಜಿ ವಿಚಾರಣೆ ನಡೆಯಿತು. 2009ರಲ್ಲಿ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ನಿಯಂತ್ರಣ ಕಾಯ್ದೆ ಅಂಗೀಕರಿಸಿ, ಕ್ರೀಡೆಗೆ ಇಂತಿಷ್ಟು ಸಮಯ ನಿಗಧಿಗೊಳಿಸಿತ್ತು.ವಿವಾದಗಳ ನಡುವೆಯೂ ಈಗ ಮತ್ತೆ ಜಲ್ಲಿಕಟ್ಟು ನಡೆಯುತ್ತಿದ್ದು, ತಮಿಳರು ಸಂಭ್ರಮದಿಂದ ಪಾಳ್ಗೊಳ್ಳುತ್ತಿದ್ದಾರೆ ಈ ಜಲ್ಲಿಕಟ್ಟುಚಿನ ಕೆಲವು ಚಿತ್ರಗಳು ನ್ಯೂಸ್ 18 ಕನ್ನಡದಲ್ಲಿ