57ನೇ ವರ್ಷದಲ್ಲಿ 7ನೇ ಮಗುವಿನ ತಂದೆಯಾದ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​​

ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ (Boris Johnson) ತಂದೆಯಾದ ಖುಷಿಯಲ್ಲಿದ್ದಾರೆ. ಅವರ ಹೆಂಡತಿ ಕ್ಯಾರಿ ಜಾನ್ಸನ್​ (Carrie Johnson) ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು, ತಾಯಿ ಆರೋಗ್ಯವಾಗಿದ್ದಾರೆ ಎಂದು ಲಂಡನ್​ ಮೂಲದ ಪತ್ರಿಕೆ ವರದಿ ಮಾಡಿದೆ. ಬೋರಿಸ್​ ಜಾನ್ಸನ್​ಗೆ ಮತ್ತು ಕ್ಯಾರಿ ಜಾನ್ಸನ್​ ಅವರ ಎರಡನೇ ಮಗು ಇದಾಗಿದೆ. ಇನ್ನು ಬೋರಿಸ್​ ಜಾನ್ಸನ್​ ಅವರ ಏಳನೇ ಮಗು ಇದಾಗಿದೆ. ಕ್ಯಾರಿ ಮತ್ತು ಬೋರಿಸ್ ದಂಪತಿ 2020ರ ಏಪ್ರಿಲ್​ನಲ್ಲಿ​ ವಿಲ್ಫ್ರೆಡ್​ ಜಾನ್ಸನ್ ಎಂಬ ಗಂಡು ಮಗುವಿನ ಆಗಮನ ಮಾಡಿದ್ದರು.

First published:

 • 16

  57ನೇ ವರ್ಷದಲ್ಲಿ 7ನೇ ಮಗುವಿನ ತಂದೆಯಾದ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​​

  ಕ್ಯಾರಿ ಜಾನ್ಸನ್ ಅವರು 2021ರ ಆರಂಭದಲ್ಲಿ ಗರ್ಭಪಾತವಾಗಿರುವ ವಿಷಯವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದರು. ಇದಾದ ಬಳಿಕ ಅವರು ಇಂದು ಆರೋಗ್ಯಯುತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ

  MORE
  GALLERIES

 • 26

  57ನೇ ವರ್ಷದಲ್ಲಿ 7ನೇ ಮಗುವಿನ ತಂದೆಯಾದ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​​

  ಮಗುವಿನ ಆಗಮನದ ಸಂತಸ ಹಂಚಿಕೊಂಡಿದ್ದ ಬ್ರಿಟನ್​ ಪ್ರಧಾನಿ ಪತ್ನಿ ಕ್ಯಾರಿ ಜಾನ್ಸನ್​, ಕ್ರಿಸ್​ಮಸ್​ ಸಮಯದಲ್ಲಿ ಹೊಸ ಕಾಮನಬಿಲ್ಲು ನಮ್ಮ ಜೀವನದಲ್ಲಿ ಮೂಡಿದೆ. ನನಗೆ ಆದ ಗರ್ಭಪಾತದಿಂದ ನಾನು ಸಾಕಷ್ಟು ಎದೆ ಗುಂದಿದ್ದೆ. ಆದರೆ, ಈಗ ಮತ್ತು ನಾನು ತಾಯಿಯಾಗುತ್ತಿದ್ದು, ಖುಷಿ ಮೂಡಿಸಿದೆ ಎಂದಿದ್ದರು

  MORE
  GALLERIES

 • 36

  57ನೇ ವರ್ಷದಲ್ಲಿ 7ನೇ ಮಗುವಿನ ತಂದೆಯಾದ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​​

  ಪ್ರಧಾನಿ ಬೋರಿಸ್​ ಜಾನ್ಸನ್​ ಕ್ಯಾರಿ ಅವರನ್ನು ಮದುವೆಯಾಗುವ ಮುನ್ನ ಎರಡು ಬಾರಿ ಮದುವೆಯಾಗಿದ್ದಾರೆ. ಅವರಿಗೆ ಒಟ್ಟು ಎಷ್ಟು ಮಕ್ಕಳಿವೆ ಎಂಬುದನ್ನು ಅವರು ತಿಳಿಸಲು ನಿರಾಕರಿಸಿದ್ದಾರೆ. ಜಾನ್ಸನ್​​ ಅವರ ಎರಡನೇ ಪತ್ನಿ ವಕೀಲೆ ಆಗಿರುವ ಮರೀನಾ ವೀಲರ್ ಜೊತೆ ನಾಲ್ಕು ಮಕ್ಕಳನ್ನು ಹೊಂದಿದ್ದರು.

  MORE
  GALLERIES

 • 46

  57ನೇ ವರ್ಷದಲ್ಲಿ 7ನೇ ಮಗುವಿನ ತಂದೆಯಾದ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​​

  ಬೋರಿಸ್​ ಜಾನ್ಸನ್​​ ಈ ವರ್ಷದ ಮೇ ತಿಂಗಳಲ್ಲಿ ಕ್ಯಾರಿ ಅವರನ್ನು ಲಂಡನ್‌ನ ವೆಸ್ಟ್‌ಮಿನಿಸ್ಟರ್ ಕ್ಯಾಥೆಡ್ರಲ್‌ನಲ್ಲಿ ರಹಸ್ಯವಾಗಿ ಮದುವೆಯಾಗಿದ್ದರು. ಇನ್ನು ಕ್ಯಾರಿ ಮತ್ತು ಬೋರಿಸ್​ ನಡುವೆ 24 ವರ್ಷ ಅಂತರ ಇದೆ

  MORE
  GALLERIES

 • 56

  57ನೇ ವರ್ಷದಲ್ಲಿ 7ನೇ ಮಗುವಿನ ತಂದೆಯಾದ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​​

  ಹೆಣ್ಣು ಮಗುವಿನ ತಂದೆಯಾಗಿರುವ ಬ್ರಿಟನ್​ ಪ್ರಧಾನಿ ಅವರಿಗೆ ಶುಭ ಕೋರಿ ವಿರೋಧ ಪಕ್ಷದ ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಟ್ವೀಟ್ ಮಾಡಿದ್ದಾರೆ, ನಿಮ್ಮ ಕುಟುಂಬದ ಆರೋಗ್ಯ ಮತ್ತು ಸಂತೋಷವನ್ನು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ

  MORE
  GALLERIES

 • 66

  57ನೇ ವರ್ಷದಲ್ಲಿ 7ನೇ ಮಗುವಿನ ತಂದೆಯಾದ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​​

  ಜಾನ್ಸನ್ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ತನಗೆ ಆರು ಮಕ್ಕಳಿದ್ದಾರೆ ಎಂದು ಮೊದಲು ಒಪ್ಪಿಕೊಂಡಿದ್ದರು. ಮಗುವಿನ ಕುರಿತು ಪ್ರಶ್ನೆಗಳು ಎದುರಾದಾಗ ಅವರು ಯಾವಾಗಲೂ ಹಾರಿಕೆ ಉತ್ತರ ನೀಡುತ್ತಿದ್ದರು.

  MORE
  GALLERIES