ಅಂತ್ಯ ಸಂಸ್ಕಾರಕ್ಕೆ ಬಳಸುವ ಮರಕ್ಕೆ 15,000 - 20,000 ರೂ. ನೀಡಬೇಕು. ಹಾಗಾಗಿ ಈ ವೆಚ್ಚವನ್ನು ಕಡಿಮೆ ಮಾಡಲು ಹಸುವಿನ ಸಗಣಿಯಿಂದ ಬೆರಣಿಗೆ ಸುಗಂಧ ದ್ರವ್ಯವನ್ನು ಸೇರಿಸಿ ಮತ್ತು ಮೃತದೇಹವನ್ನು ಸುಡಲು ಬಳಸಬೇಕು. ಇದರಿಂದ ಶವಸಂಸ್ಕಾರದ ವೆಚ್ಚವನ್ನು ಕೇವಲ 1,500 ರೂ.ನಿಂದ 2,000 ರೂಪಾಯಿಯಲ್ಲೇ ಮುಗಿಸಬಹುದು. ಜೊತೆಗೆ ಬೆರಣಿ ಮಾರಾಟದಿಂದ ನೀವು ಲಕ್ಷ ಲಕ್ಷ ಆದಾಯ ಗಳಿಸಬಹುದು ಎಂದಿದ್ದಾರೆ.